ಮೈಸೂರು

ಫೆಬ್ರವರಿ 8 ರಾಜ್ಯ ಬಜೆಟ್:  ಗ್ರಾಮೀಣ ಜೀವನಕ್ಕೆ ಆದ್ಯತೆ
ಮೈಸೂರು

ಫೆಬ್ರವರಿ 8 ರಾಜ್ಯ ಬಜೆಟ್: ಗ್ರಾಮೀಣ ಜೀವನಕ್ಕೆ ಆದ್ಯತೆ

January 30, 2019

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 2019-20ನೇ ಸಾಲಿನ ಮುಂಗಡಪತ್ರದಲ್ಲಿ ಗ್ರಾಮೀಣ ಜನರ ಹಿತ, ಕುಡಿಯುವ ನೀರು ಹಾಗೂ ಕೃಷಿಗೆ ಸೀಮಿತವಾಗಿ ಕೆಲವು ಜನಪ್ರಿಯ ಯೋಜನೆಗಳನ್ನು ಪ್ರಕಟಿಸಲು ಮುಂದಾಗಿದ್ದಾರೆ. ಫೆಬ್ರವರಿ 8 ರಂದು ವಿಧಾನಸಭೆಯಲ್ಲಿ ತಮ್ಮ ಎರಡನೇ ಮುಂಗಡಪತ್ರ ಮಂಡಿಸಲು ಬಹುತೇಕ ಸಿದ್ಧತೆ ಪೂರ್ಣ ಗೊಳಿಸಿರುವ ಮುಖ್ಯಮಂತ್ರಿ, ಈ ವಲಯಕ್ಕೆ ಹೆಚ್ಚಿನ ಆದ್ಯತೆ ಕೊಡುವಲ್ಲಿ ಕೃಷಿ ನೀರಾವರಿ ತಜ್ಞರ ಅಭಿಪ್ರಾಯ ಪಡೆದಿದ್ದಾರೆ. ಕಳೆದ ಹತ್ತು ದಿನಗಳಿಂದ ಮುಂಗಡ ಪತ್ರ ಸಿದ್ಧತೆ ಮಾಡಿಕೊಂಡಿರುವ ಮುಖ್ಯಮಂತ್ರಿಯ…

ಪರೀಕ್ಷೆ ಜೀವನದ ಪರೀಕ್ಷೆಯಲ್ಲ!
ಮೈಸೂರು

ಪರೀಕ್ಷೆ ಜೀವನದ ಪರೀಕ್ಷೆಯಲ್ಲ!

January 30, 2019

ನವದೆಹಲಿ: ಪರೀಕ್ಷೆ ಜೀವನದಲ್ಲಿ ಮಹತ್ವದಾಗಿದೆ. ಆದರೆ ಇದು ಜೀವನದ ಪರೀಕ್ಷೆಯಲ್ಲ. ಇದು ಕೇವಲ ಪಠ್ಯದ ಪರೀಕ್ಷೆ. ಹಾಗಾಗಿ ಮಕ್ಕಳು ಹೆಚ್ಚು ಒತ್ತಡಕ್ಕೆ ಸಿಲುಕಿ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಈ ವಿಚಾರದಲ್ಲಿ ಪೋಷಕರು ಮಕ್ಕಳನ್ನು ಸದಾ ಪ್ರೋತ್ಸಾಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ತಾಲ್ ಕಠೋರಾ ಸ್ಟೇಡಿಯಂನಲ್ಲಿ ನರೇಂದ್ರ ಮೋದಿ `ಪರೀಕ್ಷೆ ಪೇ ಚರ್ಚಾ 2.0 ಸಂವಾದ ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಜೊತೆ ಸಂವಾದ ನಡೆಸಿದರು. ಪರೀಕ್ಷೆ ದೊಡ್ಡ ಸವಾಲು…

ಒಂದೇ ಕಾಮಗಾರಿಗೆ ಎರಡು  ಬಿಲ್: 1.40 ಕೋಟಿ ಗುಳುಂ
ಮೈಸೂರು

ಒಂದೇ ಕಾಮಗಾರಿಗೆ ಎರಡು ಬಿಲ್: 1.40 ಕೋಟಿ ಗುಳುಂ

January 30, 2019

ಮೈಸೂರು: ಒಂದೇ ಕಾಮಗಾರಿಗೆ 2 ಬಾರಿ ಬಿಲ್ ನೀಡುವ ಮೂಲಕ 1.40 ಕೋಟಿ ರೂ. ಭ್ರಷ್ಟಾಚಾರ ನಡೆಸಿರುವ ಸಂಗತಿ ಮೈಸೂರು ನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಬಯಲಾಗಿದೆ. ನಗರಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ ದಲ್ಲಿ ಮಂಗಳವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಒಂದೇ ಕಾಮಗಾರಿಗೆ 2 ಬಾರಿ ಬೋಗಸ್ ಬಿಲ್ ನೀಡಿ, 1.40 ಕೋಟಿ ರೂ. ಭ್ರಷ್ಟಾಚಾರ ನಡೆಸಿರುವ ಆರೋಪದಡಿ ವಲಯ ಕಚೇರಿ-1ರ ಸಹಾಯಕ ಆಯುಕ್ತ ಸುನಿಲ್ ಬಾಬು ಹಾಗೂ ಕಿರಿಯ ಇಂಜಿನಿಯರ್ ಮೋಹನ್…

ಆಟೋ ಚಾಲಕ ಮನು ಹತ್ಯೆಗೈದ ಪ್ರಕರಣ: 12 ಗಂಟೆಯೊಳಗೆ ಮೂವರ ಬಂಧನ
ಮೈಸೂರು

ಆಟೋ ಚಾಲಕ ಮನು ಹತ್ಯೆಗೈದ ಪ್ರಕರಣ: 12 ಗಂಟೆಯೊಳಗೆ ಮೂವರ ಬಂಧನ

January 30, 2019

ಮೈಸೂರು: ನಿನ್ನೆ ಮಧ್ಯ ರಾತ್ರಿ ಚಾಕುವಿನಿಂದ ಇರಿದು ಆಟೋ ಚಾಲಕ ಮನು ಅಲಿಯಾಸ್ ಜಾನಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಮೂವರನ್ನು ಘಟನೆ ನಡೆದ 12 ಗಂಟೆ ಯೊಳಗೆ ಬಂಧಿಸುವಲ್ಲಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಗುಂಡೂರಾವ್ ನಗರ ಹಾಗೂ ಮುನೇಶ್ವರ ನಗರದ ಅಪ್ಪು, ಯೋಗೇಂದ್ರ ಹಾಗೂ ಮಧು ಬಂಧಿತ ಆರೋಪಿಗಳು. ಭಾನುವಾರ ಮಧ್ಯ ರಾತ್ರಿ ಮಹಾರಾಜ ಕಾಲೇಜು ಮೈದಾನದ ಬಳಿ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಎದುರು ರೈಲ್ವೇ ಅಂಡರ್ ಬ್ರಿಡ್ಜ್ ಅಡಿ ಜಾನಿಯನ್ನು…

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ
ಮೈಸೂರು

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

January 30, 2019

ನವದೆಹಲಿ: ಮಾಜಿ ರಕ್ಷಣಾ ಸಚಿವ,ತುರ್ತು ಪರಿಸ್ಥಿತಿ ವಿರೋಧಿ ಹೋರಾಟ ಗಾರ ಜಾರ್ಜ್ ಫರ್ನಾಂಡಿಸ್ ಅವರು ಮಂಗಳವಾರ ಬೆಳಿಗ್ಗೆ ದೆಹಲಿಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದಿಂದ ಆಲ್ಝೈಮರ್ ಎಂಬ ನೆನಪು ಶಕ್ತಿ ಕೊರತೆ ಮತ್ತು ಪಾರ್ಕಿನ್ಸನ್ ಎಂಬ ನರಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಇತ್ತೀಚೆಗೆ ಕೆಲ ದಿನಗಳಿಂದ ಅವರಿಗೆ ಹಂದಿ ಜ್ವರ ಕೂಡ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ 1998ರಿಂದ 2004ರವರೆಗೆ ರಕ್ಷಣಾ ಸಚಿವರಾಗಿದ್ದರು. 2010ರವರೆಗೆ ಸಕ್ರಿಯ ರಾಜಕಾರಣದಲ್ಲಿದ್ದ…

ಫೆ.1ರಿಂದ ಸುತ್ತೂರು ಜಾತ್ರೆ ಜನಜಾಗೃತಿ ಯಾತ್ರೆ
ಮೈಸೂರು

ಫೆ.1ರಿಂದ ಸುತ್ತೂರು ಜಾತ್ರೆ ಜನಜಾಗೃತಿ ಯಾತ್ರೆ

January 30, 2019

ನಂಜನಗೂಡು: ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಇದೇ ಫೆ. 1 ರಿಂದ 6 ರವರೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನಿಧ್ಯ ದಲ್ಲಿ ನಡೆಯಲಿದೆ ಎಂದು ಜಾತ್ರಾ ಮಹೋ ತ್ಸವದ ಕಾರ್ಯದರ್ಶಿಗಳಾದ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಮಂಗಳವಾರ ತಿಳಿಸಿದ್ದಾರೆ. 6 ದಿನಗಳ ಕಾಲ ನಡೆಯುವ ಈ ಜಾತ್ರೆ ಮಹೋತ್ಸವದಲ್ಲಿ ಫೆ. 3ರಂದು ರಥೋತ್ಸವ, 5ರಂದು ತೆಪ್ಪೋತ್ಸವ ಹಾಗೂ ಕೊಂಡೋತ್ಸವ, ಹಾಲ್ಹರವಿ ಉತ್ಸವ ಹಾಗೂ ಲಕ್ಷ ದೀಪೋತ್ಸವ…

ಫೆ.9ರಿಂದ 3 ದಿನ ‘ಎಡತೊರೆ ಉತ್ಸವ’
ಮೈಸೂರು

ಫೆ.9ರಿಂದ 3 ದಿನ ‘ಎಡತೊರೆ ಉತ್ಸವ’

January 30, 2019

ಕೆ.ಆರ್.ನಗರ: ಪಟ್ಟಣದ ಹೊರವಲಯದ ಹಳೆ ಎಡತೊರೆಯಲ್ಲಿ ಫೆ.9ರಿಂದ 3ದಿನ ನಡೆಯಲಿರುವ ‘ಎಡತೊರೆ ಉತ್ಸವ’ಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಮಂಗಳವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಶ್ರೀ ಅರ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಫೆ.12ರಂದು ನಡೆಯಲಿರುವ ಜಾತ್ರಾ ಮಹೋ ತ್ಸವದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 3ದಿನ ಎಡತೊರೆ ಉತ್ಸವ ಹಮ್ಮಿ ಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದ ಸುತ್ತಾ ಸಚಿವರು ಪರಿಶೀಲಿಸಿದರು. ಪಕ್ಕದಲ್ಲಿರುವ ಕಾವೇರಿ ನದಿಯ ಪಕ್ಕ ನಿರ್ಮಿಸಲು ಉದ್ದೇಶಿಸಿದ್ದ…

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರಿಗೆ `ಭಾರತ ರತ್ನ’ ನೀಡಲು ಮೈಸೂರಿಗರ ಆಗ್ರಹ
ಮೈಸೂರು

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರಿಗೆ `ಭಾರತ ರತ್ನ’ ನೀಡಲು ಮೈಸೂರಿಗರ ಆಗ್ರಹ

January 29, 2019

ಮೈಸೂರು: ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ವೃತ್ತ (ಮೆಟ್ರೊಪೋಲ್ ವೃತ್ತ)ದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕೊಡವ ಸಮಾಜದವರು ಸೋಮವಾರ ವೀರಯೋಧನ 120ನೇ ಜನ್ಮದಿನ ಆಚರಿಸಿದರು. ದೇಶಕ್ಕಾಗಿ ತಮ್ಮ ಇಡೀ ಜೀವಮಾನ ವನ್ನು ಮುಡಿಪಾಗಿಟ್ಟಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಧೈರ್ಯ, ಶೌರ್ಯ, ಸಾಧನೆಗಾಗಿ ಅವರಿಗೆ ಸರ್ಕಾರ `ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು. ಮುಖ್ಯ ಅತಿಥಿಯಾಗಿದ್ದ ಮೈಸೂರಿನ ಮಾಜಿ ಮೇಯರ್…

ಸರ್ಕಾರಿ ಭೂಮಿ ಕಬಳಿಸಲು ಭೂಗಳ್ಳರಿಗೆ ಅಧಿಕಾರಿಗಳ ಸಾಥ್:  ದಸಂಸ ಆರೋಪ
ಮೈಸೂರು

ಸರ್ಕಾರಿ ಭೂಮಿ ಕಬಳಿಸಲು ಭೂಗಳ್ಳರಿಗೆ ಅಧಿಕಾರಿಗಳ ಸಾಥ್: ದಸಂಸ ಆರೋಪ

January 29, 2019

ಮೈಸೂರು: ಮೈಸೂರು ತಾಲೂಕು ಕಸಬಾ ಹೋಬಳಿ ಶ್ಯಾದನ ಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ.37ರಲ್ಲಿ 54 ಎಕರೆಗೂ ಹೆಚ್ಚು ಸರ್ಕಾರಿ ಗೋಮಾಳ ವನ್ನು ರೈತರ ಹೆಸರಿನಲ್ಲಿ ಭೂಗಳ್ಳರು ಕಬಳಿಸಲು ಅನುಕೂಲ ಮಾಡಿಕೊಡಲು ಕಂದಾಯ ಅಧಿಕಾರಿಗಳು ಹೊರಟಿದ್ದಾರೆ ಎಂದು ಆರೋಪಿಸಿ ದಸಂಸ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವವನ್ನು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ವಹಿಸಿ, ಕಂದಾಯ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು. ನಂತರ ಮಾಧ್ಯಮ ಗಳೊಂದಿಗೆ ಮಾತನಾಡಿ, ಶ್ಯಾದನಹಳ್ಳಿ…

ಕೆಆರ್‍ಎಸ್‍ನಲ್ಲಿ ಪರ-ವಿರೋಧ ಪ್ರತಿಭಟನೆ
ಮೈಸೂರು

ಕೆಆರ್‍ಎಸ್‍ನಲ್ಲಿ ಪರ-ವಿರೋಧ ಪ್ರತಿಭಟನೆ

January 29, 2019

ಮಂಡ್ಯ: ರೈತರು, ಕೆಆರ್‍ಎಸ್ ಉಳಿಸಿ ಆಂದೋಲನದವರು ನಡೆಸಿದ ಪ್ರತಿಭಟನೆಯಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಕೆಆರ್‍ಎಸ್ ಸುತ್ತಮುತ್ತ ಗಣಿ ಪ್ರದೇಶಗಳಲ್ಲಿ ಸೋಮವಾರ ನಡೆಸಲು ಉದ್ದೇಶಿಸಿದ್ದ ಟ್ರಯಲ್ ಬ್ಲಾಸ್ಟ್ ಕಾರ್ಯ ವನ್ನು ಸ್ಥಗಿತಗೊಳಿಸಿ ಪುಣೆ ತಜ್ಞರ ತಂಡ ವಾಪಸ್ಸಾಯಿತು. ಕೆಆರ್‍ಎಸ್ ಅಣೆಕಟ್ಟೆಯ ಸುತ್ತಮುತ್ತ ಗಣಿಗಾರಿಕೆಯಿಂದಾಗಿ ಅಣೆಕಟ್ಟೆಗೆ ಅಪಾಯವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಡಳಿತ ಮತ್ತು ಕಾವೇರಿ ನೀರಾವರಿ ನಿಗಮವು ಪುಣೆಯ ಪ್ರೊ.ಘೋಷ್ ನೇತೃತ್ವದ ಸಿಡಬ್ಲ್ಯುಪಿಆರ್‍ಸಿ ತಜ್ಞರ ತಂಡದಿಂದ ತನಿಖೆ ನಡೆಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ರೈತರು, ಪ್ರಗತಿಪರರು, ಕೆಆರ್‍ಎಸ್ ಉಳಿಸಿ…

1 1,152 1,153 1,154 1,155 1,156 1,611
Translate »