ಬೆಂಗಳೂರು: ನನ್ನ ಕಾರ್ಯವೈಖರಿ ಇಷ್ಟವಾಗದಿದ್ದರೆ ಅಧಿಕಾರ ತ್ಯಜಿ ಸಲು ಸಿದ್ಧ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಖಾರವಾಗಿ ನುಡಿದಿ ದ್ದಾರೆ. ಕಾಂಗ್ರೆಸ್ ಶಾಸಕರು ತಮ್ಮ ಕಾರ್ಯವೈಖರಿ ಬಗ್ಗೆ ಅಪಸ್ವರವೆತ್ತಿದ ಬೆನ್ನಲ್ಲೇ ಇಂದು ಪರಿಸ್ಥಿತಿ ಹೀಗೆ ಮುಂದುವರಿದರೆ ಸಹಿಸಲಾಗದು ಎಂದು ಮಿತ್ರ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಧಿಕಾರ ನೀಡಿ ಎಂದು ಇವರ ಮನೆ ಮುಂದೆ ಅರ್ಜಿ ಹಾಕಿಕೊಂಡಿರಲಿಲ್ಲ. ಅವರೇ ಮನೆ ಬಾಗಿಲಿಗೆ ಬಂದು ಷರತ್ತಿಲ್ಲದೆ ಮುಖ್ಯಮಂತ್ರಿಯಾಗುವಂತೆ ಮನವಿ ಮಾಡಿ ಕೊಂಡಿದ್ದರು. ಮೆಟ್ರೋ ಆರು ಬೋಗಿಗಳ ರೈಲು ಸಂಚಾ ರಕ್ಕೆ…
ತಾಪಂ ಮಾಜಿ ಸದಸ್ಯೆ ಮೇಲೆ ಅಬ್ಬರಿಸಿದ ಸಿದ್ದರಾಮಯ್ಯ!
January 29, 2019ಟಿ.ನರಸೀಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ, ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರು ಕೈಗೆ ಸಿಗುತ್ತಿಲ್ಲ ಎಂದು ದೂರಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆಯ ಕೈಯ್ಯಲ್ಲಿದ್ದ ಮೈಕನ್ನು ಕಿತ್ತುಕೊಂಡು, ಅಬ್ಬರಿಸಿದ ಪ್ರಕರಣ ತಾಲೂಕಿನ ಗರ್ಗೇಶ್ವರಿಯಲ್ಲಿ ಇಂದು ನಡೆದಿದೆ. ಗ್ರಾಮದಲ್ಲಿ ಇಂದು ನಡೆದ ವಿದ್ಯುತ್ ಉಪಕೇಂದ್ರ ಶಂಕುಸ್ಥಾಪನೆ ಸಮಾರಂಭ ದಲ್ಲಿ ಸಿದ್ದರಾಮಯ್ಯನವರು ಹೀಗೆ ದರ್ಪ ತೋರಿರುವ ವೀಡಿಯೋ ವೈರಲ್ ಆಗಿದ್ದು, ಅವರ ಈ ವರ್ತನೆ ಬಗ್ಗೆ ವ್ಯಾಪಕವಾಗಿ ಟೀಕೆಗಳು ಕೇಳಿ ಬರುತ್ತಿವೆ. ವಿವರ: ಶಂಕುಸ್ಥಾಪನೆ ಸಮಾರಂಭದ…
ಹುಲಿಗೆ ಮತ್ತೊಬ್ಬ ಗ್ರಾಮಸ್ಥ ಬಲಿ
January 29, 2019ಮೈಸೂರು: ಅರಣ್ಯ ಪ್ರದೇಶದಲ್ಲಿ ಬಹಿರ್ದೆಸೆಗೆ ಹೋದ ವ್ಯಕ್ತಿಯೊಬ್ಬರನ್ನು ಹುಲಿ ಕೊಂದು ಹಾಕಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಡಿ.ಬಿ ಕುಪ್ಪೆ ಪಂಚಾಯ್ತಿ ವ್ಯಾಪ್ತಿಯ ಹುಲ್ಮುಟ್ಟು ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ರಾಜೀವ್‍ಗಾಂಧಿ ಹುಲಿ ಸಂರಕ್ಷಿತ ಪ್ರದೇಶ(ನಾಗರಹೊಳೆ)ದ ಬಳ್ಳೆ ವಲಯ ವ್ಯಾಪ್ತಿಗೆ ಬರುವ ಹುಲ್ಮುಟ್ಟು ಗ್ರಾಮದ ನಿವಾಸಿ ದೇವಸೆಗೌಡನ ಮಗ ಚಿನ್ನಪ್ಪ(39) ಹುಲಿ ದಾಳಿಗೆ ಬಲಿಯಾದವರಾಗಿದ್ದಾರೆ. ಹೆಚ್.ಡಿ.ಕೋಟೆ ಮಾನಂದ ವಾಡಿ ಮುಖ್ಯ ರಸ್ತೆಯಲ್ಲಿರುವ ಮಚ್ಚೂರು ಹಾಡಿ ಸಮೀಪ ವಿರುವ ಹುಲ್ಮುಟ್ಟು ಗ್ರಾಮ ಕಾಡಂಚಿನ ಗ್ರಾಮವಾಗಿದ್ದು, ಇಂದು ಬೆಳಿಗ್ಗೆ 7.10ರಲ್ಲಿ ಮನೆಯಿಂದ…
ಮೈಸೂರಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ
January 29, 2019ಮೈಸೂರು: ಚಾಕುವಿನಿಂದ ಮನ ಬಂದಂತೆ ಭಯಂಕರವಾಗಿ ಇರಿದು, ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಎದುರು ರೈಲ್ವೆ ಕೆಳ ಸೇತುವೆ ಬಳಿ ಕಳೆದ ಮಧ್ಯರಾತ್ರಿ ಸಂಭವಿಸಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಬಳಿಯ ಮುನೇಶ್ವರನಗರ ನಿವಾಸಿ ಸಿದ್ದಪ್ಪ ಅವರ ಮಗ ಎಸ್.ಮನು ಅಲಿಯಾಸ್ ಜಾನಿ (28) ಹತ್ಯೆಯಾದ ಆಟೋ ಡ್ರೈವರ್. ಈತನ ಮೇಲೆ ಮಹಾರಾಜ ಕಾಲೇಜು ಮೈದಾನದ ಬಳಿ ದಾಳಿ ನಡೆಸಿದ ದುಷ್ಕರ್ಮಿಗಳು. ಆಟೋದಿಂದ ಹೊರಗೆಳೆದು 15 ಬಾರಿ ಮನಸ್ಸೋ…
ಎಟಿಎಂ ಕಾರ್ಡ್‍ಗೆ ಕನ್ನ:ತಾಂಜೇನಿಯಾ ವಿದ್ಯಾರ್ಥಿ ಬಂಧನ
January 29, 2019ಹೊಳೆನರಸೀಪುರ: ಎಟಿಎಂಗಳಿಗೆ ಕಾರ್ಡ್ ರೀಡರ್ ಮತ್ತು ಕ್ಯಾಮರಾ ಅಳವಡಿಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳ ದತ್ತಾಂಶ ಕದ್ದು, ಹಣ ಲಪಟಾಯಿಸುತ್ತಿದ್ದ ತಾಂಜೇನಿಯಾ ವಿದ್ಯಾರ್ಥಿಯನ್ನು ಬಂಧಿಸಿರುವ ಹೊಳೆನರಸೀಪುರ ಪೊಲೀಸರು 7.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಎಸ್‍ಬಿ ಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಆಂಡ್ರ್ಯೂ ರೆನಾಟಸ್ ಸಂಗ(28) ಬಂಧಿತನಾಗಿದ್ದು, ಈತ ಲಪಟಾಯಿಸಿದ ಹಣದಲ್ಲಿ ವಿಜಯ ನಗರ 3ನೇ ಹಂತದಲ್ಲಿ ಮನೆಯನ್ನು ಲೀಸ್‍ಗೆ ಪಡೆದು, ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿವರ: ಹೊಳೆನರಸೀಪುರ…
ಪೋದಾರ್ ಶಾಲೆಯಲ್ಲಿ ‘ಬೇಟಿ ಬಚಾವೋ’ ಮ್ಯಾರಥಾನ್
January 29, 2019ಮೈಸೂರು: ಮೈಸೂರಿನ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯು `ಬೇಟಿ ಬಚಾವೋ’ ಶೀರ್ಷಿಕೆಯಡಿಯಲ್ಲಿ ಶಾಲಾ ಮಕ್ಕಳು, ಪಾಲಕರು, ಪೋಷಕರಿಗೋಸ್ಕರ `ಮ್ಯಾರಥಾನ್’ ಓಟವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ 93.5 ರೆಡ್ ಎಫ್.ಎಮ್ ನ ನಿರೂಪಕ ದೀಪಕ್ ಉದ್ಘಾಟಿಸಿದರು. ಶಾಲೆಯು ಕಳೆದ ಮೂರು ವರ್ಷಗಳಿಂದಲೂ ಈ ದಿನದಂದು ಮ್ಯಾರಥಾನ್ ಓಟವನ್ನು ನಡೆಸಿಕೊಂಡು ಬಂದಿದೆ. ಈ ವರ್ಷ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು…
ಸಾಮಾನ್ಯ ಜ್ಞಾನವಿಲ್ಲದಿದ್ದರೆ ಸಾಧನೆ ಕಷ್ಟ
January 29, 2019ಮೈಸೂರು: ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜೊತೆ ಜೊತೆಯಲ್ಲಿ ಜಗ ತ್ತಿನ ಸಾಮಾನ್ಯ ಜ್ಞಾನವನ್ನೂ ತಮ್ಮದಾಗಿಸಿ ಕೊಳ್ಳಬೇಕು. ಸಾಮಾನ್ಯ ಜ್ಞಾನವಿಲ್ಲದಿದ್ದರೆ ಸಾಧನೆ ಕಷ್ಟ ಸಾಧ್ಯವೆಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು. ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ನಗರ ಉತ್ತರವಲಯ ಮತ್ತು ಹಿರಣ್ಮಯಿ ಪ್ರತಿ ಷ್ಠಾನದ ಸಂಯುಕ್ತಾಶ್ರಯದಲ್ಲಿ ನಜರ್ ಬಾದ್‍ನ ನಿರ್ದಿಷ್ಟ ವರ್ಗದ ಮಕ್ಕಳ ಸರ್ಕಾರಿ ವಸತಿ ಶಾಲೆಯಲ್ಲಿ ಅಂತರ ಶಾಲಾಮಟ್ಟದಲ್ಲಿ ಏರ್ಪಡಿಸಿದ್ದ `ನನ್ನ ಭಾರತ ನನಗೆಷ್ಟು ಗೊತ್ತು?’ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು,…
‘ಒತ್ತಡಕ್ಕೆ ಮಣಿಯದೇ ಶ್ರದ್ಧಾಪೂರ್ವಕವಾಗಿ ಕಲಿತಾಗ ಮಾತ್ರ ವಿದ್ಯೆಯನ್ನು ಗಳಿಸಬಹುದು’
January 29, 2019ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಮತ್ತು ಪದವಿಪೂರ್ವ ಕಾಲೇಜಿ ನಲ್ಲಿ ಆಯೋಜಿಸಿದ್ದ 70ನೇ ಗಣರಾ ಜ್ಯೋತ್ಸವ ದಿನಾಚರಣೆಯನ್ನು ಸಡಗರ ದಿಂದ ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ ವಿಕಾಸ ಪರಿಷದ್‍ನ ಸಂಘಟನಾ ಕಾರ್ಯ ದರ್ಶಿ, ಕರ್ನಾಟಕ ದಕ್ಷಿಣ ಪ್ರಾಂತದ ನಾಗಭೂಷಣ್ ಅವರು ಮಾತನಾಡಿ, ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ಏಕೈಕ ಹೆಮ್ಮೆಯ ದೇಶವಾಗಿದ್ದು, ಸರ್ವರಿಗೂ ಸಮಾನತೆ, ಸಹಬಾಳ್ವೆಗೆ ಅವ ಕಾಶವನ್ನು ದೊರಕಿಸಿಕೊಟ್ಟಿದೆ. ಜಾತಿ, ಭೇಧ, ವರ್ಗ, ಮತಗಳ ಘರ್ಷಣೆಯಿ…
ರೌಡಿಗಳ ಚಲನ-ವಲನದ ಮೇಲೆ ನಿಗಾ ಇಡಿ
January 29, 2019ಮೈಸೂರು: ಲೋಕ ಸಭಾ ಚುನಾವಣೆ ಸಮೀಪಿಸುತ್ತಿದೆ. ರೌಡಿ ಗಳ ಚಲನವಲನಗಳ ಮೇಲೆ ನಿಗಾ ಇರಿಸಿ ಕಾನೂನು-ಸುವ್ಯವಸ್ಥೆ ಕಾಪಾಡುವಂತೆ ಮೈಸೂರು ನಗರ ನೂತನ ಪೊಲೀಸ್ ಕಮಿಷ್ನರ್ ಕೆ.ಟಿ.ಬಾಲಕೃಷ್ಣ ಅಧಿಕಾರಿ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪೊಲೀಸ್ ಕಮಿಷ್ನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ನಜರ್‍ಬಾದ್‍ನಲ್ಲಿರುವ ತಮ್ಮ ಕಚೇರಿ ಸಭಾಂ ಗಣದಲ್ಲಿ ಇಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಾನೂನು-ಸುವ್ಯ ವಸ್ಥೆ ಮತ್ತು ಅಪರಾಧ ಕುರಿತಂತೆ ಮೊದಲ ಸಭೆ ನಡೆಸಿದ ಅವರು, ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವ…
ಕಾರಿನ ಕಿಟಕಿ ಗಾಜು ಒಡೆದು 2 ಲಕ್ಷ ರೂ. ನಗದು ಕಳವು
January 29, 2019ಮೈಸೂರು: ಎರಡು ತಿಂಗಳ ಹಿಂದಷ್ಟೇ ಹೋಂಡಾ ಆಕ್ಟೀವಾದ ಡಿಕ್ಕಿಯಲ್ಲಿ 2.4 ಲಕ್ಷ ರೂ ಎಗರಿಸಿದ್ದ ಸ್ಥಳದಲ್ಲೇ ಮಾರುತಿ ಸ್ವಿಫ್ಟ್ ಕಾರಿನ ಕಿಟಕಿ ಗಾಜು ಒಡೆದು 2 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಮೈಸೂರಿನ ವಿಜಯನಗರ ವಾಟರ್ ಟ್ಯಾಂಕ್ ಬಳಿ ಎಸ್‍ಬಿಐ ಎದುರು ಇಂದು ಮಧ್ಯಾಹ್ನ ನಡೆದಿದೆ. ಮೈಸೂರು ತಾಲೂಕು, ಮನುಗನಹಳ್ಳಿ ನಿವಾಸಿಯಾದ ಸೌದೆ ವ್ಯಾಪಾರಿ ರಾಜು ಹಣ ಕಳೆದುಕೊಂಡವರು. ಸ್ನೇಹಿತರಿಗೆ ಹಣ ಕೊಡುವ ಸಲುವಾಗಿ ತಮ್ಮ ಮಾರುತಿ ಸ್ವಿಫ್ಟ್ (ಕೆಎ09, ಎಂಬಿ5747) ಕಾರಿನಲ್ಲಿ ವಿಜಯನಗರ…









