ಸಾಮಾನ್ಯ ಜ್ಞಾನವಿಲ್ಲದಿದ್ದರೆ ಸಾಧನೆ ಕಷ್ಟ
ಮೈಸೂರು

ಸಾಮಾನ್ಯ ಜ್ಞಾನವಿಲ್ಲದಿದ್ದರೆ ಸಾಧನೆ ಕಷ್ಟ

January 29, 2019

ಮೈಸೂರು: ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜೊತೆ ಜೊತೆಯಲ್ಲಿ ಜಗ ತ್ತಿನ ಸಾಮಾನ್ಯ ಜ್ಞಾನವನ್ನೂ ತಮ್ಮದಾಗಿಸಿ ಕೊಳ್ಳಬೇಕು. ಸಾಮಾನ್ಯ ಜ್ಞಾನವಿಲ್ಲದಿದ್ದರೆ ಸಾಧನೆ ಕಷ್ಟ ಸಾಧ್ಯವೆಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ನಗರ ಉತ್ತರವಲಯ ಮತ್ತು ಹಿರಣ್ಮಯಿ ಪ್ರತಿ ಷ್ಠಾನದ ಸಂಯುಕ್ತಾಶ್ರಯದಲ್ಲಿ ನಜರ್ ಬಾದ್‍ನ ನಿರ್ದಿಷ್ಟ ವರ್ಗದ ಮಕ್ಕಳ ಸರ್ಕಾರಿ ವಸತಿ ಶಾಲೆಯಲ್ಲಿ ಅಂತರ ಶಾಲಾಮಟ್ಟದಲ್ಲಿ ಏರ್ಪಡಿಸಿದ್ದ `ನನ್ನ ಭಾರತ ನನಗೆಷ್ಟು ಗೊತ್ತು?’ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಇದು ವೇಗದ ಕಾಲ ಸ್ಪರ್ಧಾತ್ಮಕ ಯುಗ. ಹಾಗಾಗಿ ಪ್ರತಿ ಯೊಂದು ಕ್ಷೇತ್ರದಲ್ಲೂ ವೇಗದ ಸ್ಪರ್ಧೆ ಅನಿವಾರ್ಯವಾಗಿದೆ. ಇಂಥಾ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸಬೇಕಾದರೆ ಪ್ರತಿಯೊ ಬ್ಬರೂ ಪ್ರಾಥಮಿಕ ಶಾಲಾ ಹಂತದಿಂದಲೇ ಇದಕ್ಕಾಗಿ ತಯಾರಾಗಬೇಕು.
ಜ್ಞಾನವೇ ಇದಕ್ಕೆ ಮೂಲಾಧಾರವಾಗಿರುವುದರಿಂದ ಸಾಮಾನ್ಯ ಜ್ಞಾನವನ್ನು ಗಳಿಸುವತ್ತ ವಿದ್ಯಾರ್ಥಿ ಗಳು ಮುಂದಾಗಬೇಕು ಎಂದರು. ವಿಶೇಷ ವಾಗಿ ನಮ್ಮ ದೇಶದ ಬಗ್ಗೆ ಸಂಪೂರ್ಣ ವಾಗಿ ತಿಳಿದುಕೊಳ್ಳಬೇಕು. ಆದ್ದರಿಂದ ನನ್ನ ಭಾರತ ನನಗೆಷ್ಟು ಗೊತ್ತು? ಎಂಬಂತಹ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು.
ಬಹುಮಾನಬರಲಿ ಬಾರದಿರಲಿ ಇಂತಹ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರ ಜ್ಞಾನಾ ರ್ಜನೆ ಹೆಚ್ಚಾಗುತ್ತದೆ. ಬಹುಮಾನ ಗಳಿಸಿದ ವರಷ್ಟೇ ಬುದ್ಧಿವಂತರಲ್ಲ. ಬಹುಮಾನ ಪಡೆಯ ದವರೂ ಬೇರೆ ಬೇರೆ ವಿಷಯಗಳಲ್ಲಿ ಬಹುಮಾನಿ ತರನ್ನು ಮೀರಿಸಿದ ಪ್ರತಿಭಾಶಾಲಿಗಳಾಗಿರುತ್ತಾರೆ. ಆದ್ದರಿಂದ ಇಂತಹ ವಿದ್ಯಾರ್ಥಿಗಳೆಲ್ಲಾ ಒಂದಡೆ ಸೇರಿ ರಸಪ್ರಶ್ನೆ ಸ್ಪರ್ಧೆಯಲ್ಲಿ ತಮ್ಮ ಬುದ್ಧಿಶಕ್ತಿಯನ್ನು ಸ್ಪರ್ಧೆಗೊಡ್ಡುವು ದರಿಂದ ಒಬ್ಬರಿಂದೊಬ್ಬರಿಗೆ ಜ್ಞಾನ ಹಂಚಿಕೆ ಯಾಗಿ ಪ್ರತಿಭಾವಿಕಸನವಾಗುತ್ತದೆ ಎಂದರು.

ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಎ.ಸಂಗಪ್ಪ, ಓರಿಗಾಮಿ ಕಲಾ ವಿದ ಹೆಚ್.ವಿ.ಮುರಳೀಧರ್, ವಿಶ್ರಾಂತ ಶಿಕ್ಷಕ ವೆಂಟನಾರಾಯಣ ಅವರು ಬಹಳ ಅಚ್ಚುಕಟ್ಟಾಗಿ ನನ್ನ ಭಾರತ ನನಗೆಷ್ಟು ಗೊತ್ತು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ವಿವಿಧ ಶಾಲೆಗಳಿಂದ ಬಂದು ಬಹಳ ಆಸಕ್ತಿಯಿಂದ ಭಾಗವಹಿಸಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಸ್ಪರ್ಧೆಯ ಪ್ರಯೋ ಜನವನ್ನು ಪಡೆದುಕೊಂಡು ಆಸ್ವಾದಿಸಿ ಆನಂದಿಸಿದರು. ಸ್ಪರ್ಧೆಯಲ್ಲಿ ವಿಜೇತ ರಾದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉತ್ತರ ವಲಯದ ಬಿ.ಆರ್.ಪಿ ಶುಭಾ ಅವರು ಬಹುಮಾನ ವಿತರಿಸಿ ಅಭಿನಂದಿಸಿದರ ಲ್ಲದೆ ಮಕ್ಕಳಿಗೆ ಹಿತವಚನ ಹೇಳಿದರು. ಮುಖ್ಯ ಶಿಕ್ಷಕ ಎಸ್.ಎಂ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಸ್. ಚಂದ್ರ ಕುಮಾರ್, ಟಿ.ಸಿ.ಜಗದಾಂಬ, ರುಮಾನ ಅಂಜುಂ, ಚಂದ್ರಿಕಾ, ಪಿ.ಪ್ರಸಾದ್ ಕುಮಾರ್, ವಿ.ಮಾನಸ, ನಸೀರ್ ಸುಹಾಲ್, ವಿನಾಯಕ್, ಲತಾ, ಡಿ.ಕೆ.ಸುಧಾ, ಕೆ. ಜಯಂತ್ ಮುಂತಾದ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.

ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿಜೇತರು: ನರ್ಮದಾ ತಂಡವನ್ನು ಪ್ರತಿ ನಿಧಿಸಿದ್ದ ವಸತಿ ಶಾಲೆಯ ಮುರುಗೇಶ್ ಮತ್ತು ಮಲ್ಲಿಕಾರ್ಜುನ (ಪ್ರಥಮ), ಮಹಾನದಿ ತಂಡದ ಶ್ರೀವಾಣಿ ವಿಲಾಸ ಅರಸು ಹಿರಿಯ ಪ್ರಾಥಮಿಕ ಶಾಲೆಯ ಕಾವ್ಯ ಮತ್ತು ಚೈತನ್ಯ (ದ್ವಿತೀಯ), ಕೃಷ್ಟಾ ತಂಡದ ಗುಡ್‍ಶಫರ್ಡ್ ಹಿರಿಯ ಪ್ರಾಥಮಿಕ ಶಾಲೆಯ ಸಿಂಚನಾ ಮತ್ತು ಫಾರಿಯಾ ಅಂಜುಂ (ತೃತೀಯ), ಕಾವೇರಿ ತಂಡದ ಸರ್ಕಾರಿ ಬೇಸಿಕ್ ಹಿರಿಯ ಪ್ರಾಥಮಿಕ ಶಾಲೆಯ ರವೀಶ್ ಮತ್ತು ಸ್ಫಂದನಾ ಹಾಗೂ ಗಂಗಾ ತಂಡದ ಸರ್ಕಾರಿ ಪ್ರಾಕ್ಟೀಸಿಂಗ್ ಹಿರಿಯ ಪ್ರಾಥಮಿಕ ಶಾಲೆಯ ಕೆ. ಮಹೇಂದ್ರ ಮತ್ತು ಕಾರ್ತಿಕ್ (ಸಮಾಧಾನಕರ)

Translate »