‘ಒತ್ತಡಕ್ಕೆ ಮಣಿಯದೇ ಶ್ರದ್ಧಾಪೂರ್ವಕವಾಗಿ  ಕಲಿತಾಗ ಮಾತ್ರ ವಿದ್ಯೆಯನ್ನು ಗಳಿಸಬಹುದು’
ಮೈಸೂರು

‘ಒತ್ತಡಕ್ಕೆ ಮಣಿಯದೇ ಶ್ರದ್ಧಾಪೂರ್ವಕವಾಗಿ ಕಲಿತಾಗ ಮಾತ್ರ ವಿದ್ಯೆಯನ್ನು ಗಳಿಸಬಹುದು’

January 29, 2019

ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಮತ್ತು ಪದವಿಪೂರ್ವ ಕಾಲೇಜಿ ನಲ್ಲಿ ಆಯೋಜಿಸಿದ್ದ 70ನೇ ಗಣರಾ ಜ್ಯೋತ್ಸವ ದಿನಾಚರಣೆಯನ್ನು ಸಡಗರ ದಿಂದ ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ ವಿಕಾಸ ಪರಿಷದ್‍ನ ಸಂಘಟನಾ ಕಾರ್ಯ ದರ್ಶಿ, ಕರ್ನಾಟಕ ದಕ್ಷಿಣ ಪ್ರಾಂತದ ನಾಗಭೂಷಣ್ ಅವರು ಮಾತನಾಡಿ, ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ಏಕೈಕ ಹೆಮ್ಮೆಯ ದೇಶವಾಗಿದ್ದು, ಸರ್ವರಿಗೂ ಸಮಾನತೆ, ಸಹಬಾಳ್ವೆಗೆ ಅವ ಕಾಶವನ್ನು ದೊರಕಿಸಿಕೊಟ್ಟಿದೆ. ಜಾತಿ, ಭೇಧ, ವರ್ಗ, ಮತಗಳ ಘರ್ಷಣೆಯಿ ಲ್ಲದೆ ಒಗ್ಗಟ್ಟಿನಿಂದ ಗಣತಂತ್ರ ಹಬ್ಬವನ್ನು ಆಚರಿಸುವ ರಾಷ್ಟ್ರೀಯ ಹಬ್ಬವೇ ಗಣ ರಾಜ್ಯೋತ್ಸವ. ಈ ಹಿನ್ನೆಲೆಯಲ್ಲಿ ಇಂದಿನ ಯುವಕರು ದೇಶವನ್ನು ಮುನ್ನಡೆಸಲು ಒಗ್ಗಟ್ಟಿನಿಂದ ರಾಷ್ಟ್ರೀಯ ಹಬ್ಬಗಳಲ್ಲಿ ಭಾಗ ವಹಿಸಬೇಕಾಗಿದೆ ಎಂದು ಕರೆ ನೀಡಿ ದರು. ‘ಒತ್ತಡಕ್ಕೆ ಮಣಿಯದೇ ಶ್ರದ್ಧಾ ಪೂರ್ವಕವಾಗಿ ಆಸಕ್ತಿಯಿಂದ ಕಲಿತಾಗ ಮಾತ್ರ ವಿದ್ಯೆಯನ್ನು ಗಳಿಸಬಹುದೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭಾರತ ವಿಕಾಸ ಪರಿಷದ್‍ನ ಅಧ್ಯಕ್ಷ, ಪರಮಹಂಸ ಶಾಖೆಯ ಜಗದೀಶ್ ಮಾತನಾಡಿ, ಈ ದೇಶದಲ್ಲಿ ಸಿಗುವ ಸಂಪತ್ತನ್ನು ಇಂದಿನ ಮಕ್ಕಳು ತಮ್ಮ ವಿದ್ಯಾರ್ಥಿ ದೆಸೆಯಿಂದಲೂ ಸಿಗುವ ಸಂಪನ್ಮೂಲಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಸತ್ಪ್ರಜೆ ಯಾಗಿ ಮುನ್ನಡೆದು ದೇಶಕ್ಕೆ ಕೊಡುಗೆ ಯನ್ನು ನೀಡಬೇಕೆಂದು ತಿಳಿಸಿದರು.

ಸಂಸ್ಕøತ ಉಪನ್ಯಾಸಕ ಡಾ.ಪ್ರದೀಪ್ ದೀಕ್ಷಿತ್, ಸಂಸ್ಥೆಯ ಅಧ್ಯಕ್ಷರಾದ ಟಿ. ರಂಗಪ್ಪ ಆಡಳಿತಾಧಿಕಾರಿ ಕಾಂತಿ ನಾಯಕ್, ಶಾಲಾ ಮುಖ್ಯೋಪಾಧ್ಯಾ ಯಿನಿ ಝರೀನಾ ಬಾಬುಲ್, ಕಾಲೇಜಿನ ಪ್ರಾಂಶುಪಾಲ ಸುನಿಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾ ನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾ ಯಿತು. ನಂತರ ವರ್ಣರಂಜಿತ ಸಾಂಸ್ಕø ತಿಕ ಕಾರ್ಯಕ್ರಮಗಳು ನೆರವೇರಿದವು.

Translate »