ಪೋದಾರ್ ಶಾಲೆಯಲ್ಲಿ ‘ಬೇಟಿ ಬಚಾವೋ’ ಮ್ಯಾರಥಾನ್
ಮೈಸೂರು

ಪೋದಾರ್ ಶಾಲೆಯಲ್ಲಿ ‘ಬೇಟಿ ಬಚಾವೋ’ ಮ್ಯಾರಥಾನ್

January 29, 2019

ಮೈಸೂರು: ಮೈಸೂರಿನ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯು `ಬೇಟಿ ಬಚಾವೋ’ ಶೀರ್ಷಿಕೆಯಡಿಯಲ್ಲಿ ಶಾಲಾ ಮಕ್ಕಳು, ಪಾಲಕರು, ಪೋಷಕರಿಗೋಸ್ಕರ `ಮ್ಯಾರಥಾನ್’ ಓಟವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ 93.5 ರೆಡ್ ಎಫ್.ಎಮ್ ನ ನಿರೂಪಕ ದೀಪಕ್ ಉದ್ಘಾಟಿಸಿದರು.

ಶಾಲೆಯು ಕಳೆದ ಮೂರು ವರ್ಷಗಳಿಂದಲೂ ಈ ದಿನದಂದು ಮ್ಯಾರಥಾನ್ ಓಟವನ್ನು ನಡೆಸಿಕೊಂಡು ಬಂದಿದೆ. ಈ ವರ್ಷ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ ಈ ಓಟವನ್ನು ಆಯೋಜಿಸಲಾಗಿತ್ತು. ಹೆಣ್ಣು ಮಕ್ಕಳನ್ನು ರಕ್ಷಿಸಿ ಘೋಷವಾಕ್ಯಗಳ ಫಲಕಗಳು ಎಲ್ಲೆಡೆ ರಾರಾಜಿ ಸಿದವು. ಗಣರಾಜ್ಯೋತ್ಸವದ ಶುಭ ದಿನದಂದು ಶಾಲೆಯು ಹೆಣ್ಣು ಮಕ್ಕಳ ರಕ್ಷಣೆಗಾಗಿ ಜನಜಾಗೃತಿ ಉಂಟುಮಾಡು ತ್ತಿರುವುದನ್ನು ಎಲ್ಲರೂ ಶ್ಲಾಘಿಸಿದರು. ನಂತರ ನಡೆದ ಗಣರಾ ಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳು ನಡೆಸಿಕೊಟ್ಟ ಏರೋಬಿಕ್ಸ್ ಮತ್ತು ವಂದೇ ಮಾತರಂ ನೃತ್ಯ ನೆರೆದವರ ಹೃನ್ಮನವನ್ನು ತಣಿಸಿತು. ಶಾಲಾ ಪ್ರಾಂಶುಪಾಲರಾದ ಕೃಷ್ಣ ಬಂಗೇರ ನೇತೃತ್ವದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Translate »