ಮರುಳು ಮಾಡಿ ಮಹಿಳೆ ಸರ ಕಳವು
ಮೈಸೂರು

ಮರುಳು ಮಾಡಿ ಮಹಿಳೆ ಸರ ಕಳವು

February 1, 2019

ಮೈಸೂರು: ಸಾರಿಗೆ ಸಂಸ್ಥೆ ಬಸ್‍ನಲ್ಲಿ ಮಹಿಳೆಯೊಬ್ಬರ 80 ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಿರುವ ಬಗ್ಗೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ರೂಪಾನಗರ ನಿವಾಸಿ ದಾಕ್ಷಾಯಿಣಿ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರಿನಲ್ಲಿ ಸಂಬಂಧಿಕರ ವಿವಾಹ ಸಮಾರಂಭ ಮುಗಿಸಿಕೊಂಡು ದಾಕ್ಷಾಯಿಣಿ ಅವರು ಜ.28ರಂದು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರಿಗೆ ಬಸ್ ಹತ್ತಿದ್ದಾರೆ. ಇವರ ಪಕ್ಕ ದಲ್ಲೇ ಕುಳಿತ ಯುವತಿಯೊಬ್ಬಳು ಪರಿಚಯಿಸಿಕೊಂಡು ಮಾತನಾಡಿಸಿದ್ದಾರೆ. ಶ್ರೀರಂಗಪಟ್ಟಣ ದಲ್ಲಿ ಬಸ್‍ನಿಂದ ಇಳಿದು 2 ಜ್ಯೂಸ್ ಪಾಕೆಟ್ ತಂದು, ಒಂದನ್ನು ದಾಕ್ಷಾಯಿಣಿ ಅವರಿಗೆ ನೀಡಿದ್ದಾಳೆ. ನಂತರ ನಿದ್ದೆಗೆ ಜಾರಿದ ದಾಕ್ಷಾಯಿಣಿ, ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣ ದಲ್ಲಿ ಇಳಿದು, ಆಟೋದಲ್ಲಿ ಮನೆಗೆ ತೆರಳಿದ್ದಾರೆ. ಮರುದಿನ ಸಂಜೆ ದಾಕ್ಷಾಯಿಣಿ ಅವರ ಮಗ ಚಿನ್ನದ ಸರ ಇಲ್ಲದಿರುವುದನ್ನು ಗಮನಿಸಿ, ವಿಚಾರಿಸಿದಾಗ ಕಳುವಾಗಿರುವುದು ಗೊತ್ತಾಗಿದೆ.

Translate »