ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಪರೋಕ್ಷ ವಾಗ್ದಾಳಿ
ಮೈಸೂರು

ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಪರೋಕ್ಷ ವಾಗ್ದಾಳಿ

January 31, 2019

ಬೆಂಗಳೂರು: ಬೆಂಗಳೂರಿನ ಅರ ಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ರಾಷ್ಟ್ರೀಯ ಮಹಾ ಸಮ್ಮೇಳನ ದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಹೆಚ್.ಡಿ .ದೇವೇಗೌಡ ಅವರು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಈ ಹಿಂದೆ ಜೆಡಿಎಸ್ ಅಧ್ಯಕ್ಷರಾಗಿದ್ದವರು ಏನೂ ಕೆಲಸ ಮಾಡಿಲ್ಲ.

ಸೋನಿಯಾ ಗಾಂಧಿ ಮೇಲೆ ಒತ್ತಡ ಹಾಕಿದ್ದರೆ ಆಗ ನಾನು ಮುಖ್ಯಮಂತ್ರಿ ಆಗುತ್ತಿದ್ದೆ ಎಂದು ಹೇಳಿ ದರು. ಆಗ ನನಗಾದ ನೋವು ದೇವ ರಿಗೆ ಮಾತ್ರ ಗೊತ್ತು. ಅವರ ಈ ಹೇಳಿಕೆಗೆ ಸೋನಿಯಾ ಗಾಂಧಿಯವರೇ ಉತ್ತ ರಿಸಬೇಕು.

ದೆಹಲಿಗೆ ಹೋಗುವಾಗಲೂ ನನ್ನ ಸಿಎಂ ಮಾಡಬಹುದಿತ್ತು ಎಂದು ಅವರು ಹೇಳಿದ್ದರೆಂದು ದೇವೇಗೌಡರು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ರಾಷ್ಟ್ರದಲ್ಲಿ 3 ಸಮ್ಮಿಶ್ರ ಸರ್ಕಾರಗಳು ಬಂದಿವೆ. ನಾನು ಕಾಂಗ್ರೆಸ್ ಬೆಂಬಲದಿಂದ ಪ್ರಧಾನಿಯಾಗಿದ್ದೆ. ಧರಂಸಿಂಗ್ ಸರ್ಕಾರದಲ್ಲಿ ಯಾವುದೇ ಷರತ್ತುಗಳನ್ನು ವಿಧಿಸಿರಲಿಲ್ಲ. ಅವರ ಸರ್ಕಾರ ಬೀಳಲು ನಾನಾಗಲೀ ಅಥವಾ ಕುಮಾರಸ್ವಾಮಿಯಾಗಲೀ ಕಾರಣರಲ್ಲ. ಆದರೆ ಈಗ ಅದೇ ಕಾಂಗ್ರೆಸ್ ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾ ಗಿದ್ದಾರೆ. ಕಾಂಗ್ರೆಸ್‍ನವರಿಗೆ ನೋವಾಗಿದ್ದಕ್ಕೆ ಮುಖ್ಯಮಂತ್ರಿ ಸ್ಥಾನ ಬಿಡಲು ರೆಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ಕೇವಲ 7 ತಿಂಗಳ ಸರ್ಕಾರ. ಪಕ್ಷ ಉಳಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಕೂಡ ಪಕ್ಷವನ್ನು ಮುನ್ನಡೆಸಿರುವುದು ರಾಜ್ಯದ ಜನತೆ ಎಂದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ದೊಡ್ಡಳ್ಳಿ ಗೋಲಿಬಾರ್ ನಡೆದಿತ್ತು. ಆಗ ನಾನು ಸತ್ತವರು ಯಾವ ಸಮಾಜದವರು ಎಂದು ಕೂಡ ಹೇಳಿರಲಿಲ್ಲ. ಆದರೆ ಈಗ ಹೇಳಬೇಕಾಗಿದೆ. ಗೋಲಿ ಬಾರ್‍ನಲ್ಲಿ ಸತ್ತದ್ದು ಕುರುಬ ಸಮುದಾಯದವನು ಎಂದರು. ನೀವು 5 ವರ್ಷ ಮುಖ್ಯಮಂತ್ರಿ ಆಗಿದ್ದೀರಿ. ನೀವು ಮಾಡಿದ ಕೆಲಸದ ಬಗ್ಗೆ ನಾನು ಒಂದು ಶಬ್ದವನ್ನೂ ಮಾತನಾಡಿಲ್ಲ. ನಿಮ್ಮ ಕೆಲಸ ಅಕ್ರಮವೋ, ಸಕ್ರಮವೋ ಯಾವುದನ್ನೂ ಮಾತಾಡಿಲ್ಲ ಎಂದು ಸಿದ್ದರಾಮಯ್ಯ ಹೆಸರು ಹೇಳದೇ ಪರೋಕ್ಷವಾಗಿ ದಾಳಿ ನಡೆಸಿದರು.

ಕುಮಾರಸ್ವಾಮಿ 37 ಸೀಟು ಇಟ್ಟುಕೊಂಡು ಸಿದ್ದರಾಮಯ್ಯ ಮಾಡಿದ ಎಲ್ಲಾ ಕಾರ್ಯಕ್ರಮಗಳಿಗೂ ಹಣ ಕೊಟ್ಟು ಸಾಲ ಮನ್ನಾವನ್ನೂ ಮಾಡಿದ್ದಾರೆ. ಬೆಳಿಗ್ಗೆ ಒಂದು-ಸಂಜೆ ಒಂದು ಮಾತನಾಡುತ್ತಾ, ಮಸಿ ಬಳಿಯುತ್ತಿದ್ದೀರಾ? ನೀವು ಮಾಡಿದ ಕೆಲಸಕ್ಕೆ ನಾವೇನಾದರೂ ಮಸಿ ಬಳಿದೆವಾ? ಎಂದು ಪ್ರಶ್ನಿಸಿದ ದೇವೇಗೌಡರು, ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿಗೋಲ್ವಂತೆ. ಪ್ರತಿ ನಿತ್ಯ ಕಾಂಗ್ರೆಸ್ ಶಾಸಕರು ಸಿಎಂ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಒಂದು ನಿಗಮ ಬಿಟ್ಟರೆ ಉಳಿದ ಎಲ್ಲಾ ಸ್ಥಾನಗಳನ್ನೂ ನಿಮಗೇ ಕೊಟ್ಟಿದ್ದೇವೆ. ಇನ್ನು ಹ್ಯಾಗೆ ಆಡಳಿತ ನಡೆಸಬೇಕು? ಎಂದು ದೇವೇಗೌಡರು ಕಿಡಿಕಾರಿದರು.

 

Translate »