ಹುಣಸೂರು ನಗರಸಭೆ ಪೌರಾಯುಕ್ತ ಶಿವಪ್ಪ ನಾಯಕ ಅಮಾನತು
ಮೈಸೂರು

ಹುಣಸೂರು ನಗರಸಭೆ ಪೌರಾಯುಕ್ತ ಶಿವಪ್ಪ ನಾಯಕ ಅಮಾನತು

February 1, 2019

ಹುಣಸೂರು: ಅಕ್ರಮ ಖಾತೆ, ನಿಯಮ ಉಲ್ಲಂಘನೆ ಹಾಗೂ ಅವ್ಯವಹಾರದ ಆರೋಪದಡಿ ಹುಣಸೂರು ನಗರಸಭೆ ಪೌರಾಯುಕ್ತ ಶಿವಪ್ಪ ನಾಯಕ ಅವರನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಶೇಖರಪ್ಪ ಅಮಾನತುಗೊಳಿಸಿ, ಆದೇಶ ನೀಡಿದ್ದಾರೆ.

ಮೂಲತಃ ಸಮುದಾಯ ಸಂಘಟನಾ ಧಿಕಾರಿಯಾದ ಶಿವಪ್ಪ ನಾಯಕ, ಹುಣ ಸೂರು ನಗರ ಸಭೆಯಲ್ಲಿ ಕಳೆದ ಎರಡು ವರ್ಷಗಳಿಂದ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸ್ಥಳೀಯ ರಾಗಿದ್ದು, ಹಲವಾರು ಭ್ರಷ್ಟಾಚಾರಗಳಲ್ಲಿ ತೊಡಗಿದ್ದಾರೆ. ಅವ್ಯವಹಾರ ನಡೆಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟು ಮಾಡಿದ್ದಾರೆ ಎಂದು ರಾಮೇಗೌಡ ಎಂಬುವರು ಸಲ್ಲಿಸಿದ್ದ ದೂರಿನನ್ವಯ ಇಲಾಖಾ ತನಿಖೆ ನಡೆಸ ಲಾಯಿತು. ಜಿಲ್ಲಾಧಿಕಾರಿಗಳು ನಗರ ಸಭೆಯ 109 ಮಳಿಗೆಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಆದೇಶಿಸಿದ್ದರಾದರೂ, ಪೌರಾಯುಕ್ತರು ಅದನ್ನು ಕಾರ್ಯರೂಪಕ್ಕೆ ತಾರದೇ ನಗರಸಭೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ನಗರ ಸಭೆಯ ವ್ಯಾಪ್ತಿಗೆ ಒಳಪಡದ ಜಮೀನುಗಳನ್ನು ಅಕ್ರಮ ವಾಗಿ ನಗರಸಭೆಯ ಕಂದಾಯ ಜಾಗಗಳೆಂದು ಖಾತೆ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಭೂ ಪರಿವರ್ತನೆ ಯಾಗದ ಜಮೀನುಗಳಿಗೆ ನಿವೇಶನಗಳ ಖಾತೆಗಳನ್ನು ಅನಧಿಕೃತವಾಗಿ ನೀಡಿದ್ದಾರೆ.

2018-19ನೇ ಸಾಲಿಗೆ ತೆರಿಗೆ ವಸೂ ಲಾತಿ ಬೇಡಿಕೆ 4.09 ಕೋಟಿಗಳಾಗಿದ್ದು, 2018ರ ಅಂತ್ಯಕ್ಕೆ ಕೇವಲ 1.83 ಕೋಟಿ ಅಂದರೆ ಶೇ.45ರಷ್ಟು ಮಾತ್ರ ವಸೂಲಿ ಮಾಡಿದ್ದಾರೆ. ನೀರಿನ ತೆರಿಗೆ 1,66,64,000 ಪೈಕಿ 36.63 ಲಕ್ಷ ಅಂದರೆ ಶೇ.22ರಷ್ಟು ಮಾತ್ರ ವಸೂಲಿ ಮಾಡುವ ಮೂಲಕ ನಿರ್ಲಕ್ಷ್ಯತೆ ವಹಿಸಿದ್ದಾರೆ. ನಗರಸಭೆಗೆ ಸಂಬಂಧಪಡದ ಕಂದಾಯ ಇಲಾಖೆ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಲು ಕಾನೂನು ಬಾಹಿರವಾಗಿ ಅನುಮತಿ ನೀಡಿದ್ದಾರೆ ಎಂಬುದೂ ಸೇರಿದಂತೆ ಹಲವಾರು ಆರೋಪಗಳು ದೃಢಪಟ್ಟಿವೆ.

Translate »