ಭೇರ್ಯ: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಸಂಪೂರ್ಣ ರೈತ ಸಮೂಹವನ್ನು ಕಡೆಗಣಿಸಿ ದ್ರೋಹ ಮಾಡಿದೆ. ರೈತರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ರೈತರಿಗೆ ಯಾವುದೇ ಅನುಕೂಲಕರವಾಗಿಲ್ಲ ಎಂದು ಕೇಂದ್ರ ಬಜೆಟ್ ವಿರುದ್ಧ ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಳೇಮಿರ್ಲೆ ಸುನಯ್‍ಗೌಡ ವಾಗ್ದಾಳಿ ನಡೆಸಿದರು.
ಸಿರಿವಂತರ ಪರವಾಗಿರುವ ಮೋದಿ ಸರ್ಕಾರ, ಸಿರಿವಂತರ ತೆರಿಗೆ ಕಡಿತ ಮಾಡಿದೆ. ರೈತ ಸಮೂಹ ಸಂಪೂರ್ಣ ಸಾಲ ಮನ್ನಾ, ರೈತರ ಪರವಾದ ಯೋಜನೆಗಳ ಬಗ್ಗೆ, ರೈತರು ಬೆಳೆದ ಬೆಳೆಗೆ ದರ ನಿಗದಿ ಬಗ್ಗೆ ಕಾತುರದಿಂದ ಕಾಯುತ್ತಿದ್ದರು. ಎಲ್ಲವನ್ನೂ ಹುಸಿ ಮಾಡಲಾಗಿದ್ದು, ರೈತರ ಖಾತೆಗೆ 6 ಸಾವಿರ ಹಣವನ್ನು ಹಾಕುತ್ತಿರುವುದು ಆವೈಜ್ಞಾನಿಕವಾದುದು ಎಂದಿರುವ ಅವರು, ರೈತ ಸಾಲದ ಶೂಲಕ್ಕೆ ಸಿಕ್ಕಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾನೆ. ರೈತರ ಖಾತೆಗೆ 6 ಸಾವಿರವನ್ನು ಪ್ರತಿ ತಿಂಗಳು ಹಾಕಿದ್ದರೆ ರೈತ ಗೌರವಯುತವಾಗಿ ಕನಿಷ್ಟ ಜೀವನವನ್ನಾದರೂ ನಡೆಸುತ್ತಿದ್ದ ಎಂದರು.