ತಿ.ನರಸೀಪುರ:ಕುಂಭಮೇಳದ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಅಗತ್ಯ ಸೂಚನೆ ನೀಡಿದ್ದೇವೆ. ಸ್ವಚ್ಛತೆಗೆ ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇರುವುದರಿಂದ ಹೊರಗುತ್ತಿಗೆ ಮೂಲಕ ಪಡೆಯಲು ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ತಿರಮಕೂಡಲಿನ ಆದಿಚುಂಚನಗಿರಿ ಭವನದಲ್ಲಿ ನಡೆದ ಕುಂಭಮೇಳದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿ ಅಗತ್ಯ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿದ್ದೇವೆ. ಮೂರ್ನಾಲ್ಕು ಬಾರಿ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಕಾಮಗಾರಿ ಪ್ರಗತಿಯಲ್ಲಿದೆ. ಸಾರ್ವಜನಿಕರು, ಮುಖಂಡರು ತಮ್ಮ ಸಹಕಾರವನ್ನು ಹೀಗೆ ಮುಂದುವರಿಸಿ ಕುಂಭಮೇಳ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಎಂ.ಅಶ್ವಿನ್‍ಕುಮಾರ್ ಮಾತನಾಡಿ, ತ್ರಿವೇಣಿ ಸಂಗಮದಲ್ಲಿ ಶಾಶ್ವತ ಕಾಮಗಾರಿಗಳನ್ನು ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಕುಂಭಮೇಳ ಯಶಸ್ವಿಗೆ ಕ್ರಮ ಕೈಗೊಂಡಿದೆ. ಅಗತ್ಯ ಕಾಮಗಾರಿಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದೇವೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣದ ಪ್ರತಿ ಬೀದಿಗಳು ಸಿಂಗಾರಗೊಳ್ಳಬೇಕು ಎಂದರು.
ವರುಣಾ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಅಭಿವೃದ್ಧಿ ಕೆಲಸಗಳು ಈಗಾಗಲೇ ಪ್ರಾರಂಭವಾಗಿವೆ. ಕಾಮಗಾರಿಗಳಲ್ಲಿ ಲೋಪ ಕಂಡು ಬಂದಲ್ಲಿ ನಮ್ಮ ಗಮನಕ್ಕೆ ತನ್ನಿರಿ ಒಟ್ಟಾರೆ ದಕ್ಷಿಣ ಭಾರತದ ಈ ಕುಂಭಮೇಳ ಯಶಸ್ವ್ವಿಯಾಗಿ ನಡೆಯಬೇಕು ಎಂದರು
ಇದಕ್ಕೂ ಮುನ್ನಾ ಶಾಸಕರಿಬ್ಬರು, ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಕುಂಭಮೇಳದ ಕಾಮಗಾರಿಗಳು, ಸಂಗಮದ ಸ್ಥಳ ಪರಿಶೀಲನೆ ಮಾಡಿದರು. ಎಎಸ್‍ಪಿ ಪಿ.ವಿ.ಸ್ನೇಹ, ಡಿವೈಎಸ್‍ಪಿ ಮಲ್ಲಿಕ್, ಎಸಿ ಶಿವೇಗೌಡ, ತಹಶೀಲ್ದಾರ್ ನಾಗಪ್ರಶಾಂತ್, ತಾಪಂ ಇಓ ಡಾ.ನಂಜೇಶ್, ಸಿಪಿಐ ಎಂ.ಆರ್.ಲವ, ಪುರಸಭೆ ಮುಖ್ಯಾಧಿಕಾರಿ ಅಶೋಕ್, ಜಿ.ಪಂ ಸದಸ್ಯ ಜಯಪಾಲ್ ಭರಣಿ. ತಾ.ಪಂ ಸದಸ್ಯರಾದ ರಮೇಶ್, ತಾಲೂಕು ಅಧಿಕಾರಿಗಳಾದ ಶಿವಶಂಕರ್, ವರದರಾಜು, ಪ್ರಭುರಾಜ್ ಕಿರಣ್, ಪುರಸಭಾ ಸದಸ್ಯರಾದ ಪ್ರಕಾಶ್, ಮದನ್, ಬಾದಾಮಿ, ಮಂಜು, ಮೋಹನ, ಕಿರಣ್, ನಂಜುಂಡಸ್ವಾಮಿ, ಮಂಜುನಾಥ್, ಮುಖಂಡರಾದ ಸ್ವಾಮಿನಾಥ್, ಬಿ. ಮರಯ್ಯ, ಶಂಭುದೇವನಪುರ ರಮೇಶ್, ಸ್ವಾಮಿ, ಕರಿಯಪ್ಪ, ಮಲ್ಲೇಶ್, ನಾಗರಾಜು, ಡಾ. ಪ್ರದೀಪ್ ಇತರೆ ಅಧಿಕಾರಿಗಳು ಹಾಜರಿದ್ದರು.