ಬರ ಅಧ್ಯಯನ ಸಭೆಯಲ್ಲಿ ಸಚಿವ ರೇವಣ್ಣ- ಎಂಎಲ್‍ಸಿ ಗೋಪಾಲಸ್ವಾಮಿ ಜಟಾಪಟಿ
ಹಾಸನ

ಬರ ಅಧ್ಯಯನ ಸಭೆಯಲ್ಲಿ ಸಚಿವ ರೇವಣ್ಣ- ಎಂಎಲ್‍ಸಿ ಗೋಪಾಲಸ್ವಾಮಿ ಜಟಾಪಟಿ

February 2, 2019

ಹಾಸನ: ಹಾಸನ ಜಿಲ್ಲೆಯ ಅಭಿವೃದ್ಧಿ ಯಾವ ಸರ್ಕಾರದಲ್ಲಿ ನಡೆದಿದೆ ಎಂಬುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಕಾಂಗ್ರೆಸ್ ಎಂಎಲ್‍ಸಿ ಗೋಪಾಲಸ್ವಾಮಿ ನಡುವೆ ಜಟಾಪಟಿ ನಡೆದಿದೆ.

ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಸಂಪುಟ ಉಪಸಮಿತಿ ಜಿಲ್ಲೆಗೆ ಆಗಮಿ ಸಿದ್ದು, ಅಧ್ಯಯನದ ನಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆ ಯಲ್ಲಿ ಸಚಿವ ರೇವಣ್ಣ ಮಾತನಾಡುತ್ತಾ, ಕಳೆದ 10 ವರ್ಷ ಗಳಿಂದ ಹಾಸನ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಿದ್ದರಾಮಯ್ಯನವರ ಸರ್ಕಾರದಲ್ಲೂ ಕೂಡ ಅಭಿವೃದ್ಧಿ ಯಾಗಿಲ್ಲ. ಈ ಸಮ್ಮಿಶ್ರ ಸರ್ಕಾರ ಬಂದ ನಂತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಎಂಎಲ್‍ಸಿ ಗೋಪಾಲಸ್ವಾಮಿ ಅವರು, ‘ನೀವು (ರೇವಣ್ಣ) ಹೀಗೆಲ್ಲಾ ಮಾತನಾಡಬಾರದು. ಸಿದ್ದರಾಮಯ್ಯ ನವರ ಸರ್ಕಾರದಲ್ಲೂ ಅಭಿವೃದ್ಧಿ ಕಾರ್ಯ ನಡೆದಿದೆ. ಅವರ ಯೋಜನೆಗಳಿಗೆ ಸಮ್ಮಿಶ್ರ ಸರ್ಕಾರದಲ್ಲಿ ಚಾಲನೆ ದೊರೆಯು ತ್ತಿದೆ. ಈಗ ನೀವು ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳು ಸಿದ್ದರಾಮಯ್ಯನವರದ್ದೇ’ ಎಂದು ಹೇಳಿದರು.

ಇದರಿಂದ ಸಿಟ್ಟಿಗೆದ್ದ ರೇವಣ್ಣ, ನಿಮ್ಮ ಸರ್ಕಾರದಲ್ಲಿ ಏನು ಅಭಿವೃದ್ಧಿ ನಡೆದಿದೆ? ಇಂಜಿನಿಯರಿಂಗ್ ಕಾಲೇಜು ಪೀಠೋಪಕರಣ ಗಳೂ ಇಲ್ಲದೆ ದುಸ್ಥಿತಿ ತಲುಪಿರುವುದು ಗೊತ್ತಿಲ್ಲವೆ? ಎಂದು ಪ್ರಶ್ನಿಸಿದರು. ಆಗ ಗೋಪಾಲಸ್ವಾಮಿ, ‘ಅರಸೀಕೆರೆಯಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಿದ್ದು ಯಾರು? ಸಿದ್ದರಾಮಯ್ಯ ಅಲ್ಲವೇ. ಬೇಕಾದರೆ ನಿಮ್ಮ ಶಾಸಕ ಶಿವಲಿಂಗಯ್ಯ ಅವರನ್ನೇ ಕೇಳಿ’ ಎಂದಾಗ ಮತ್ತಷ್ಟು ಕೆರಳಿದ ರೇವಣ್ಣ, ‘ಇಲ್ಲ ಇಲ್ಲ ಅದು ಬಿಜೆಪಿ ಸರ್ಕಾರದ ಅನುದಾನದಲ್ಲಿ ಆಗಿರೋದು. ನೀನು ಬಹಳ ಜಾಸ್ತಿ ಮಾತಾಡ್ತಿದ್ದೀಯ. ನಿನ್ನಿಂತ ನಾನೇನು ಕಲಿಯಬೇಕಿಲ್ಲ’ ಎಂದು ಗುಡುಗಿದರು.
ಆಗ ಮಧ್ಯ ಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಅವರು, ಇಬ್ಬರನ್ನೂ ಸಮಾ ಧಾನಪಡಿಸಿ ಸಿದ್ದರಾಮಯ್ಯನವರ ಸರ್ಕಾರದಲ್ಲೂ ಅಭಿವೃದ್ಧಿ ಕೆಲಸಗಳು ನಡೆದಿವೆ. ಈಗಲೂ ನಡೆಯುತ್ತಿವೆ. ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹಾಗೂ ಈಗಿನ ಮೈತ್ರಿ ಸರ್ಕಾರ ಹಿಂದೆ ಬಿದ್ದಿಲ್ಲ. ಸಿದ್ದರಾಮಯ್ಯನವರ ಯೋಜನೆಗಳನ್ನು ಕೂಡ ಮೈತ್ರಿ ಸರ್ಕಾರದಲ್ಲಿ ಮುಂದುವರೆಸಲಾಗುತ್ತಿದೆ ಎಂದು ಹೇಳುವ ಮೂಲಕ ಜಟಾಪಟಿಗೆ ತೆರೆ ಎಳೆದರು.

Translate »