ಸಂಪುಟ ಉಪ ಸಮಿತಿಯಿಂದ ಬರ ಪರಿಸ್ಥಿತಿ ಅಧ್ಯಯನ
ಹಾಸನ

ಸಂಪುಟ ಉಪ ಸಮಿತಿಯಿಂದ ಬರ ಪರಿಸ್ಥಿತಿ ಅಧ್ಯಯನ

February 2, 2019

ಹಾಸನ: ಮೈಸೂರು ವಿಭಾಗದ ಬರ ಅಧ್ಯಯನದ ಸಂಪುಟ ಉಪಸಮಿತಿ ಇಂದು ಹಾಸನ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿತು.

ಸಮಿತಿಯ ಅಧ್ಯಕ್ಷರಾದ ಗ್ರಾಮೀಣಾ ಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಹಾಗೂ ಮಹಿಳಾ ಮತ್ತು ಮಕ್ಕಳಾಭಿವೃದ್ದಿ ಸಚಿವೆ ಜಯಮಾಲ ಅವರ ನೇತೃತ್ವದಲ್ಲಿ ತಂಡವು ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕಿನ ಬರ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.

ಅರಸೀಕೆರೆ ತಾಲೂಕಿನ ಕೊಳಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಸಳೆ ಗ್ರಾಮ ದಲ್ಲಿ ಬರ ಪರಿಸ್ಥಿತಿ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿ ಸ್ಥಳೀಯ ರೊಂದಿಗೆ ಮಾತನಾಡಿದರು. ಬರದ ತೀವ್ರತೆ ಹೆಚ್ಚಾಗಿರುವುದರಿಂದ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಹೆಚ್ಚು ಕಾಮಗಾರಿಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಮತ್ತು ಕೆ.ಎಸ್.ಲಿಂಗೇಶ್ ಅವರು ಅರಸೀಕೆರೆ, ಬೇಲೂರು, ಮತ್ತು ಚನ್ನರಾಯ ಪಟ್ಟಣ ತಾಲ್ಲೂಕುಗಳಲ್ಲಿರುವ ಬರದ ತೀವ್ರತೆ, ರೈತರ ಹಾಗೂ ಜನ ಸಾಮಾನ್ಯರ ಭವಣೆಗಳನ್ನು ವಿವರಿಸಿದರು. ಇದೇ ವೇಳೆ ಸಚಿವರ ತಂಡ ಗಂಡಸಿ ಬಳಿ ಅರಸೀಕೆರೆ ತಾಲೂಕಿನ 530 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಕೈಗೊಂಡಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪರಿಶೀಲಿಸಿದ ತಂಡ ಆದಷ್ಟು ಬೇಗ ಕೆಲಸ ಮುಗಿಸಿ ಈ ಬೇಸಿಗೆ ಯಲ್ಲಿಯೇ ಕುಡಿಯುವ ನೀರಿನ ಪೂರೈಕೆ ಪ್ರಾರಂಭಿಸುವಂತೆ ಸೂಚಿಸಿದರು.

ನಂತರ ಸಚಿವರು ಮಹದೇವರಹಳ್ಳಿ ಮತ್ತು ಲಾಳನಕೆರೆಯಲ್ಲಿ ರಾಗಿ ಬೆಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಿ ರೈತರೊಂದಿಗೆ ಸಂವಾದ ನಡೆಸಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ನಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಾಸನ ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ಸಚಿವರಾದ ಕೃಷ್ಣ ಬೈರೇ ಗೌಡ ಅವರ ಅಧ್ಯಕ್ಷತೆಯಲ್ಲಿ ಮೈಸೂರು ವಿಭಾಗದ ಬರ ಅಧ್ಯಯನ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ. ರೇವಣ್ಣ ನಗರಾಭೀವೃದ್ಧಿ ಸಚಿವರಾದ ಯು.ಟಿ. ಖಾದರ್, ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಜಯಮಾಲ, ಸಣ್ಣ ನೀರಾವರಿ ಸಚಿವರಾದ ಪುಟ್ಟರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಶಾಸಕರಾದ ಹೆಚ್.ಕೆ. ಕುಮಾರ ಸ್ವಾಮಿ, ಎ.ಟಿ. ರಾಮಸ್ವಾಮಿ, ಕೆ.ಎಂ. ಶಿವ ಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಪ್ರೀತಂ ಜೆ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಕೃಷ್ಣ, ಸರ್ಕಾರದ ಕಾರ್ಯ ದರ್ಶಿ ಎಲ್.ಕೆ. ಅತೀಕ್, ಡಿಸಿ ರೋಹಿಣಿ ಸಿಂಧೂರಿ, ಸಿಇಓ ಅಧಿಕಾರಿ ಪುಟ್ಟಸ್ವಾಮಿ ಮತ್ತಿರರು ಹಾಜರಿದ್ದರು.

Translate »