ಹಾಸನ: ಅರಸನು ಮೇಲಲ್ಲ, ಅಗಸನು ಕೀಳಲ್ಲ ಎಂಬ ಭಾವನೆ ಇಟ್ಟುಕೊಂಡು ತಮ್ಮ ಕುಲಕಸುಬನ್ನು ಕೇವಲ ವ್ಯಾಪಾರೀಕರಣ ಮಾಡದೇ ಮೌಲ್ಯಧಾರಿತವಾಗಿ ಮಾಡಿ, ಸ್ವಾಭಿಮಾನಕ್ಕೆ ದಕ್ಕೆ ಆಗುವ ಕೆಲಸ ಮಾಡಬಾರದು ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಕರೆ ನೀಡಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶುಕ್ರವಾರ ಬೆಳಿಗ್ಗೆ ಏರ್ಪಡಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಂತರ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣ ನವರ ಕ್ರಾಂತಿಕಾರಿ ಬೆಳವಣಿಗೆ ಇದ್ದು, ಮಾಚಿದೇವರು ಅಂದು ಪ್ರಕಾಶಮಾನವಾದ ಕೆಲಸ ಮಾಡಿದರು. ಅರಸನು ಮೇಲಲ್ಲ, ಅಗಸನು ಕೀಳಲ್ಲ ಎಂದು ಸಾರಿದರು. ಕುಲಕಸುಬಾದ ಶುಭ್ರತೆ, ಬಟ್ಟೆಯನ್ನು ಶುಚಿ ಮಾಡು ವುದಕ್ಕೆ ಅದರಲ್ಲೂ ನಿಯಮಗಳನ್ನು ಹಾಕಿಕೊಂಡಿದ್ದರು. ಯಾರು ಗುರುವಿಗೆ ಭಕ್ತಿ ತೋರಿಸುತ್ತಾನೆ. ಗೌರವ ಕೊಡುತ್ತಾನೆ ಅವರ ಉಡುಪನ್ನು ಮಾತ್ರ ಸ್ವಚ್ಛ ಮಾಡು ತ್ತೇವೆ ಎಂದು ಒಂದು ಗಟ್ಟಿತನವನ್ನು ತೋರಿಸಿದವರು ಎಂದರು. ತಮ್ಮ ಕುಲಕಸುಬನ್ನು ಕೇವಲ ವ್ಯಾಪಾರಿ ಕರಣ ಮಾಡದೇ ಮೌಲ್ಯಧಾರಿತವಾಗಿ ಮಾಡಬೇಕು.
ಸ್ವಾಭಿಮಾನಕ್ಕೆ ದಕ್ಕೆ ಆಗುವ ಕೆಲಸ ಮಾಡಬಾರದು ಎಂದು ಸಾರಿದರು. ಒಗ್ಗಟ್ಟಿನಿಂದ ಕೆಲಸ ಮಾಡಿ ಪುಟ್ಟ ಸಮಾಜವನ್ನು ಮೇಲಕ್ಕೆತ್ತುವ ಕೆಲಸ ಮಾಡು ವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಮಾತ ನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ಅನು ಯಾಯಿಯಾಗಿ, ಅವರ ಕವನಗಳು ವಚನಗಳಾಗಿವೆ. ಜಾತಿ, ಮತ ಅದಕ್ಕಿಂತ ಹೊರತಾಗಿ ಅನುಭವ ಮಂಟಪ ದಲ್ಲಿ ಬಂದ ಪ್ರತಿಯೊಬ್ಬರ ಕೊಡುಗೆ ಅಪಾರವಾಗಿದೆ ಎಂದರು. ಬಿಜಾಪುರದಲ್ಲಿ ಜನಿಸಿದ ಇವರು ಜೀವಿತಾ ವಧಿಯಲ್ಲಿ ಅನೇಕ ಕೊಡುಗೆಯನ್ನು ನೀಡಿ ಬೆಳಗಾವಿ ಯಲ್ಲಿ ಧೈವದೀನರಾಗುತ್ತಾರೆ. ಮಡಿವಾಳ ಸಮು ದಾಯದವರು ಮುಂದಿನ ಜಯಂತಿ ಆಚರಣೆಗೆ ಇನ್ನು ಹೆಚ್ಚಿನ ಜನರು ಸೇರಬೇಕು. ಮೆರವಣಿಗೆಯಲ್ಲಿ ಸಂಖ್ಯೆ ಕಡಿಮೆ ಇತ್ತು ಎಂದು ಬೇಸರವ್ಯಕ್ತಪಡಿಸಿದ ಅವರು ಇವರ ಆದರ್ಶವನ್ನು ಎಲ್ಲಾರು ಮೈಗೂಡಿ ಸಿಕೊಳೋಣ ಎಂದು ತಿಳಿಸಿದರು.
ಸಂತ ಫಿಲೋಮಿನ ಪದವಿಪೂರ್ವ ಕಾಲೇಜು ಉಪನ್ಯಾಸಕ ಎನ್.ಈ. ಯೋಗೇಶ್ ತಮ್ಮ ಉಪನ್ಯಾಸ ದಲ್ಲಿ, 12ನೇ ಶತಮಾನ ಎಂದರೇ ಸಾಮಾಜಿಕ ಅಸಮಾನತೆಯಿಂದ ಕೂಡಿದಂತಹ ಸಮಾಜ. ತಲಾ ತಲಾಂತರದಿಂದ ಜಾತಿಯತೆ, ಸ್ತ್ರೀ ಮೇಲೆ ಶೋಷಣೆ ಸೇರಿದಂತೆ ಅನೇಕ ಸಾಮಾಜಿಕ ಕುಂಠಿತಗಳೂ ಬೇರೂರಿ ಸಮಾಜದ ಅಲ್ಪಸಂಖ್ಯಾತರನ್ನು ಕೆಳವರ್ಗದವರನ್ನು ಕಿತ್ತು ತಿನ್ನುವ ಕೆಲಸ ನಡೆಯುತ್ತಿದ್ದ ಕಾಲವಿತ್ತು. ಅಂತಹ ಕಾಲದಲ್ಲಿ ಸಮಾಜದ ಅಂಕು-ಡೊಂಕನ್ನು ತಿದ್ದಿ, ಶುದ್ಧಿಕರಿಸುವುದಕ್ಕಾಗಿಯೇ 12ನೇ ಶತಮಾನದ ಶಿವಶರಣರು ಹುಟ್ಟಿ ಬಂದರು. ಅವರಲ್ಲಿ ಮಡಿವಾಳ ಮಾಚಿ ದೇವರು ಒಬ್ಬರು ಎಂದು ಹೇಳಿದರು. ನಾವೆಲ್ಲ್ಲರೂ ಒಂದೆ ಆಗಿರುವಾಗ, ಮತ್ತೊಂದು ವರ್ಗದ ಬಗ್ಗೆ ಕೀಳಾಗಿ ಕಾಣಬಾರದು. ಸಮಾಜದ ಕೆಲಸ ಮಾಡುವಾಗ ಎಲ್ಲಾ ಜನಾಂಗದವರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದ ಅವರು ಪ್ರೀತಿ ವಿಶ್ವಾಸದಿಂದ ಪ್ರತಿಯೊಂದು ಜನಾಂಗಕ್ಕೂ ಸಮಾನತೆ ದೊರುಕುವಂತಾಗಬೇಕು.
ಇದಕ್ಕೆ ಮೊದಲು ಜಿಲ್ಲಾಧಿಕಾರಿ ಕಛೇರಿ ಆವರಣ ದಿಂದ ಮಡಿವಾಳ ಮಚ್ಚಿದೇವರ ಭಾವಚಿತ್ರವನ್ನು ಇರಿಸಿದ್ದ ಬೆಳ್ಳಿರಥದೊಂದಿಗೆ ಕಲಾಭವನಕ್ಕೆ ಮೆರ ವಣಿಗೆ ಮೂಲಕ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ರೀನಿವಾಸಯ್ಯ, ಜಿಲ್ಲಾಡಳಿತದ ತಹಸೀಲ್ದಾರ್ ತಿಮ್ಮಯ್ಯ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎನ್. ಕುಂಬಾರ, ಜಿಲ್ಲಾ ಪಂಚಾಯತ್ ಉಪಕಾರ್ಯ ದರ್ಶಿ ನಾಗರಾಜು, ಮಡಿವಾಳ ಜನಾಂಗದ ಅಧ್ಯಕ್ಷ ಟಿ. ಶಶಿಧರ್, ಕರ್ನಾಟಕ ರಾಜ್ಯ ಮಡಿವಾಳರ ಮಹಿಳಾ ಘಟಕ ಅಧ್ಯಕ್ಷೆ ವಿಜಯಲಕ್ಷ್ಮಿ ಅಂಜನಪ್ಪ, ಸಮಾಜದ ಮುಖಂಡರಾದ ಹೆಚ್.ಪಿ. ಸಂತೋಷ್, ಹೆಚ್.ಎನ್. ಮಲ್ಲೇಶ್, ಜಯಣ್ಣ, ವೀರೇಶ್ ಇತರರು ಉಪಸ್ಥಿತ ರಿದ್ದರು. ನಾಡಗೀತೆಯನ್ನು ದೊಡ್ಡಳ್ಳಿ ರಮೇಶ್ ನಡೆಸಿಕೊಟ್ಟರು. ನಿರೂಪಣೆಯನ್ನು ಸಮಾಜ ಸೇವಕ ಆರ್.ಕೆ. ಸ್ವರೂಪ್ ನಿರ್ವಹಿಸಿದರು.