ಸುತ್ತೂರು ಜಾತ್ರೆಯಲ್ಲಿ ನಂದಿನಿ ತುಪ್ಪ, ಮೈಸೂರು ಪೇಡ ಮಳಿಗೆ ಉದ್ಘಾಟನೆ
ಮೈಸೂರು

ಸುತ್ತೂರು ಜಾತ್ರೆಯಲ್ಲಿ ನಂದಿನಿ ತುಪ್ಪ, ಮೈಸೂರು ಪೇಡ ಮಳಿಗೆ ಉದ್ಘಾಟನೆ

February 2, 2019

ಸುತ್ತೂರು: ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಅಂಗವಾಗಿ ನಂದಿನಿ ಉತ್ಪನ್ನ ಮಾರಾಟ ಮಳಿಗೆಯನ್ನು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ್ ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಅವರು, ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳಿಗಾಗಿ ನಂದಿನಿ ಉತ್ಪನ್ನ ಮಾರಾಟ ಕೇಂದ್ರವನ್ನು ತೆರೆಯಲಾಗಿದೆ ಎಂದರು. ಈ ಸಂದರ್ಭ ದಲ್ಲಿ ಸುತ್ತೂರು ಜೆಎಸ್‍ಎಸ್ ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಪೇಡ ಹಾಗೂ ಮಜ್ಜಿಗೆ ವಿತರಿಸಲಾಯಿತು. ನಿರ್ದೇಶಕರಾದ ಕೆ.ಸಿ.ಬಲರಾಮ್, ಹೀರೇಗೌಡ, ಲೀಲಾ ನಾಗರಾಜು, ದ್ರಾಕ್ಷಾಯಿಣಿ, ಕುಮಾರ್, ವ್ಯವಸ್ಥಾಪಕ ರಾಜ ಕುಮಾರ್, ಶಿವಕುಮಾರ್, ನವೀನ್‍ಕುಮಾರ್ ಇತರರು ಈ ವೇಳೆ ಉಪಸ್ಥಿತರಿದ್ದರು.

Translate »