ಮೈಸೂರಲ್ಲಿ ನಾಳೆಯಿಂದ `ಹೆಜ್ಜೆ ಗೆಜ್ಜೆ’ ನೃತ್ಯ ಸಂಭ್ರಮೋತ್ಸವ
ಮೈಸೂರು

ಮೈಸೂರಲ್ಲಿ ನಾಳೆಯಿಂದ `ಹೆಜ್ಜೆ ಗೆಜ್ಜೆ’ ನೃತ್ಯ ಸಂಭ್ರಮೋತ್ಸವ

February 1, 2019

ಮೈಸೂರು: ಮೈಸೂರಿನ ನಿಮಿಷಾಂಬ ಡ್ಯಾನ್ಸ್ ಪ್ರಮೋಟರ್ಸ್‍ನ 23ನೇ ವರ್ಷದ ಗೆಜ್ಜೆ ಹೆಜ್ಜೆ ಸಂಭ್ರಮೋತ್ಸವ ಅಂಗವಾಗಿ ಫೆ.2 ಮತ್ತು 3ರಂದು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಮತ್ತು ಡಾ.ವಿಷ್ಣು ವರ್ಧನ್ ಕುಟುಂಬಕ್ಕೆ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿರುವುದಾಗಿ ಪ್ರಮೋಟರ್ಸ್ ಸಂಸ್ಥಾಪಕ ಶ್ರೀಧರ್ ಜೈನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.2ರಂದು ಬೆಳಿಗ್ಗೆ 9ರಿಂದ ಹೆಜ್ಜೆ ಗೆಜ್ಜೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯ ಲಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಖ್ಯಾತ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿ ಸಲಿದ್ದಾರೆ. ಫೆಬ್ರವರಿ 3ರಂದು ಸಂಜೆ 5.30ಕ್ಕೆ ಸಾಹಸ ಸಿಂಹ ದಿವಂಗತ ಡಾ.ವಿಷ್ಣು ವರ್ಧನ್ ಧರ್ಮಪತ್ನಿ ಡಾ.ಭಾರತಿ ವಿಷ್ಣುವರ್ಧನ್, ನಟ ಅನಿರುದ್ಧ್, ವಸ್ತ್ರ ವಿನ್ಯಾಸಕಿ ಕೀರ್ತಿ ಅನಿರುದ್ಧ್ ಅವರಿಗೆ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಾಸು, ನಿರ್ದೇಶಕ ಸುಧಾಕರ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ವರ್ಷ ಸತೀಶ್, ಸೌಮ್ಯ ಜೈನ್, ವಸಂತ ಸಂಪತ್ತು, ಅಂಜಲಿ ಉಪಸ್ಥಿತರಿದ್ದರು.

Translate »