`ಅಕ್ಕ’ನಲ್ಲಿನ ಭಕ್ತಿಯನ್ನು ಅರಿಯಬೇಕು
ಮೈಸೂರು

`ಅಕ್ಕ’ನಲ್ಲಿನ ಭಕ್ತಿಯನ್ನು ಅರಿಯಬೇಕು

February 1, 2019

ಮೈಸೂರು: ವಚನಕಾರ್ತಿ ಅಕ್ಕಮಹಾದೇವಿಯನ್ನು ಒಂದೇ ದೃಷ್ಟಿಕೋನದಲ್ಲಿ ನೋಡದೇ ಮರು ಓದಿನ ಮೂಲಕ ಅವರಲ್ಲಿನ ಭಕ್ತಿಯನ್ನು ಅರಿಯಬೇಕಿದೆ ಎಂದು ಕವಯತ್ರಿ ಪ್ರತಿಭಾ ನಂದಕುಮಾರ್ ಗಮನ ಸೆಳೆದರು.

ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಆಯೋಜಿಸಿದ್ದ ಶ್ವೇತಾ ಮಡಪ್ಪಾಡಿ ಅವರಿಂದ ಅಕ್ಕಮಹಾದೇವಿ ಕುರಿತಾದ `ಇತೀ, ಚನ್ನ ಮಲ್ಲಿಕಾರ್ಜುನ ಸತಿ’ ಏಕವ್ಯಕ್ತಿ ರಂಗಪ್ರಯೋಗ ವೇಳೆ ಮಾತನಾಡಿದ ಅವರು, ಇಂದಿನ ಕವಿಗಳು ಅಕ್ಕ ಮಹಾದೇವಿ ಅವರನ್ನು ಕೇವಲ ಮಹಿಳಾ ದೃಷ್ಟಿಕೋನ ದಲ್ಲಿ ನೋಡುತ್ತಾರೆ ಎಂದು ವಿಷಾದಿಸಿದರು.

ಚನ್ನಮಲ್ಲಿಕಾರ್ಜುನ ಅಕ್ಕಮಹಾದೇವಿಯ ನಾಡಿ ಯಾಗಿದ್ದು, ಪೂರ್ವ ಪೀಡಿತವಾಗಿ ಅರ್ಥಮಾಡಿಕೊಳ್ಳ ಬಾರದು. ಅಕ್ಕಮಹಾದೇವಿ ಲಿಂಗ, ಜಾತಿ, ವರ್ಗ ಎಲ್ಲವನ್ನೂ ಮೀರಿ ಸಂಪೂರ್ಣವಾಗಿ ತನ್ನನ್ನು ತಾನು ಚನ್ನಮಲ್ಲಿಕಾರ್ಜುನನಿಗೆ ಅರ್ಪಿಸಿಕೊಂಡ ಜೀವವಾಗಿ ಅಭಿವ್ಯಕ್ತಿಗೊಳಿಸಿಕೊಳ್ಳುತ್ತಾಳೆ ಎಂದು ವ್ಯಾಖ್ಯಾನಿಸಿದರು.

ಲಿಂಗಾಯಿತರು ಅಕ್ಕಮಹಾದೇವಿ ವಚನಗಳನ್ನು ಧಾರ್ಮಿಕವಾಗಿ ನೋಡಿದರೆ, ಸಾಹಿತ್ಯದ ವಿದ್ಯಾರ್ಥಿ ಗಳು ಸಾಹಿತ್ಯದ ದೃಷ್ಟಿಯಲ್ಲಿ ಓದುತ್ತಾರೆ. ಇವರ್ಯಾರು ಅಕ್ಕಮಹಾದೇವಿಯವರ ಭಕ್ತಿರಸವನ್ನು ಅರ್ಥಮಾಡಿ ಕೊಳ್ಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕ ಡಾ.ಸಿ.ನಾಗಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂಡಕ್ಕಿಂತ ಏಕವ್ಯಕ್ತಿ ರಂಗಪ್ರಯೋಗ ಸುಲಭವೆಂದು ಪ್ರೇಕ್ಷಕರು ತಿಳಿದಿರುತ್ತಾರೆ. ಆದರೆ, ಏಕವ್ಯಕ್ತಿ ರಂಗಪ್ರಯೋಗದಲ್ಲಿ ಒಬ್ಬರೇ ಸನ್ನಿವೇಶ ವನ್ನು ಕಟ್ಟಿಕೊಡಬೇಕು. ಹಾಗಾಗಿ, ತಂಡದಷ್ಟೇ ಜವಾ ಬ್ದಾರಿಯನ್ನು ಏಕವ್ಯಕ್ತಿ ರಂಗ ಪ್ರಯೋಗವು ಬಯಸು ತ್ತದೆ. ಏಕವ್ಯಕ್ತಿ ರಂಗ ಪ್ರಯೋಗ ಆರಂಭವಾದಾಗಿ ನಿಂದ ಕೊನೆಯವರೆಗೂ ಅವರಲ್ಲಿ ಭಯ, ಆತಂಕ ಇರುತ್ತದೆ ಎಂದು ತಿಳಿಸಿದರು.

ಅಕ್ಕಮಹಾದೇವಿ ಲೋಕದ ಸಹೋದರಿಯರಿಗೆ ಸ್ಫೂರ್ತಿಯ ಚಿಲುಮೆ. ಅವರನ್ನು ಶ್ವೇತಾ ಮಡಪ್ಪಾಡಿ ಅವರು ಸವಾಲಾಗಿ ಸ್ವೀಕರಿಸಿ, ಅಕ್ಕ ಮಹಾದೇವಿ ಕುರಿತಾದ ಏಕವ್ಯಕ್ತಿ ರಂಗಪ್ರಯೋಗ ಮಾಡಲು ಹೊರಟಿರುವುದು ಮೆಚ್ಚುವಂತಹ ವಿಷಯ ಎಂದರು. ಲೇಖಕ ಡಾ.ಪ್ರದೀಪ್ ಕುಮಾರ್ ಹೆಬ್ರಿ, ಭೀಮಾ ಪ್ರಾಪರ್ಟಿಸ್‍ನ ನಾಗೇಶ್ ಇದ್ದರು. ನಂತರ ಶ್ವೇತಾ ಮಡಪ್ಪಾಡಿ ಅವರು ಏಕವ್ಯಕ್ತಿ ರಂಗ ಪ್ರಯೋಗದ ಮೂಲಕ ಅಕ್ಕ ಮಹಾದೇವಿ ಕುರಿತಾದ
`ಇತೀ, ಚೆನ್ನಮಲ್ಲಿಕಾರ್ಜು ಸತಿ’.. ನಾಟಕ ಪ್ರದರ್ಶಿಸಿದರು.

Translate »