ಹಾಸನ: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ದೇವರ ಸಮಾನ. ಅವರ ಸಾಮಾ ಜಿಕ ಮತ್ತು ಶೈಕ್ಷಣಿಕ ಸೇವೆ ಅಪಾರ. ಅವರಿಗೆ ಭಾರತ ರತ್ನ ಗೌರವ ಸಿಗಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ವಕೀಲರ ಸಂಘದಲ್ಲಿ ಶ್ರೀ ಶಿವ ಕುಮಾರ ಸ್ವಾಮೀಜಿಯವರ ಪುಣ್ಯ ಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಅವರು ಮಾತನಾಡಿದರು.
ಸ್ವಾಮೀಜಿಯವರು ಶತಮಾನದ ಸಂತರಾಗಿದ್ದು ಈ ನಾಡಿಗೆ ಅವರ ಸೇವೆ ಅಪಾರ ,ಎಂದಿಗೂ ಅವರ ಆದರ್ಶಗಳು ಅನುಕರಣೀಯ, ಅವರಿಗೆ ಭಾರತ ರತ್ನ ಗೌರವ ನೀಡಬೇಕು ಎಂದರು. ವಕೀ ಲರ ಸಂಘದ ವತಿಯಿಂದ ಪುಣ್ಯ ಸ್ಮರಣೆ ಕಾರ್ಯಕ್ರಮ ಏರ್ಪಡಿ ಸಿರುವುದು ಅಭಿನಂದನಾರ್ಹ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ನ್ಯಾಯಾಲಯದ ಹೊಸ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿ ದ್ದು ಶೀಘ್ರದಲ್ಲೇ ಉದ್ಘಾಟನೆ ಮಾಡಲಾ ಗುವುದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗೂ ಇತರ ನ್ಯಾಯಾಧೀಶರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಸಚಿವ ರೇವಣ್ಣ ತಿಳಿಸಿದರು.
ಶಂಕರ್‍ನಾಗ್ ಆಟೋ ಚಾಲಕರಿಂದ ಅನ್ನದಾನ: ಪರಮಪೂಜ್ಯರು, ಶತಾಯುಷಿಗಳು ನಡೆದಾಡುವ ದೇವರು, ಸಿದ್ಧಗಂಗಾ ಮಠದ ಮಠಾಧೀಶರು ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ಅವರ ಹೆಸರಿ ನಲ್ಲಿ ನಗರದ ವಲ್ಲಭಬಾಯಿ ರಸ್ತೆ, ಶಂಕರ್ ನಾಗ್ ಆಟೋ ಚಾಲಕರಿಂದ ಮತ್ತು ಇತರರಿಂದ ಅನ್ನದಾನ ಕಾರ್ಯಕ್ರಮ ವನ್ನು ಗುರುವಾರ ನೆರವೇರಿಸಿದರು. ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಪುಷ್ರ್ಪಾ ರ್ಚನೆ ನೆರವೇರಿಸಿ ನಂತರ ಅನ್ನದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತ ನಾಡಿ, ಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿ ಗಳಿಗೆ ಮತ್ತು ಎಲ್ಲಾ ವರ್ಗದ ಜಾತಿ, ಮತವಿಲ್ಲದೆ ಶಿಕ್ಷಣವನ್ನು ನೀಡುತ್ತಿದ್ದ ಪೂಜ್ಯರು ತಮ್ಮ ಇಳಿ ವಯಸ್ಸಿನಲ್ಲಿ ಮಠದ ವಿದ್ಯಾರ್ಥಿಗಳೊಂದಿಗೆ ಹಾಗೂ ಮಠಕ್ಕೆ ಬಂದ ಭಕ್ತಾದಿಗಳಿಗೆ ಸ್ನೇಹ ಜೀವಿಯಾಗಿದ್ದರು, ಯಾರೇ ಸಿದ್ಧಗಂಗಾ ಮಠಕ್ಕೆ ಬಂದರೂ ಪ್ರಸಾದ ಮಾಡಿ ಎಂದು ತಿಳಿಸುತ್ತಿದ್ದ ಸ್ವಾಮಿಗಳು ನಂತರ ಅವರ ಕಷ್ಟ ದುಃಖಗಳಿಗೆ ಭಾಗಿಯಾಗುತ್ತಿದ್ದರು, ನಡೆದಾಡುವ ದೇವರೆಂದೇ ನಂಬಿದ್ದರು ಭಕ್ತರು. ಶತಮಾನದಲ್ಲಿ ಈ ರೀತಿ ಪುಣ್ಯ ಸ್ಮರಣೆ ಎಲ್ಲಿಯೂ ಮಾಡಲಾಗಿಲ್ಲ ಎಂದರು. ಇಡೀ ರಾಜ್ಯದಲ್ಲಿ ಸ್ವಾಮೀಜಿಯವರ ಪುಣ್ಯ ಸ್ಮರಣೆಯನ್ನು ಮಾಡಲಾಗುತ್ತಿದೆ. ಅವರ ಆದರ್ಶಗಳನ್ನು ಜನಸಾಮಾನ್ಯರು ಮೈಗೂ ಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
111 ಜನ ಸ್ವಯಂ ಪ್ರೇರಿತ ರಕ್ತದಾನ: ಹಾಸನ, ಜ.31- ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ದಿನದ ಅಂಗವಾಗಿ ನಗರದ ಸ್ಲೇಟರ್ಸ್‍ಹಾಲ್ ವೃತ್ತದಲ್ಲಿ 111 ಜನ ರಕ್ತದಾನವನ್ನು ಇಲ್ಲಿನ ಸುತ್ತಮುತ್ತಲ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮಾಡಿದರು. ನಂತರ ಮಧ್ಯಾಹ್ನದ ವೇಳೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಹಾಸನ ದರ್ಶಿನಿ ಮಾಸಿಕ ಪತ್ರಿಕೆ ಸಂಪಾದಕ ಎಂ.ಜಿ. ಮಂಜುನಾಥ್, ನಟರಾಜು, ಮೋಹನ್, ಕರೀಗೌಡ, ಕೀರ್ತಿ, ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.