10 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ
ಹಾಸನ

10 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

February 1, 2019

ರಾಮನಾಥಪುರ: ಕಾಮಗಾರಿ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿ ಕಾರಿಗಳು ಸ್ಥಳದಲ್ಲಿ ನಿಂತು ಕಾಮಗಾರಿ ಯನ್ನು ಅಚ್ಚುಕಟ್ಟಾಗಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ ಶಾಸಕ ಎ.ಟಿ.ರಾಮ ಸ್ವಾಮಿ, ಗ್ರಾಮಸ್ಥರ ಸಹಕಾರ ಪಡೆದು ಉತ್ತಮ ರೀತಿಯಲ್ಲಿ ಕಾಮಗಾರಿಗಳನ್ನು ನಡೆಸುವಂತೆ ಗುತ್ತಿಗೆದಾರರಿಗೆ ಸಲಹೆ ನೀಡಿದರು.

ಇಲ್ಲಿಯ ಅರಣ್ಯ ಗೇಟ್ ಹತ್ತಿರದ ರಸ್ತೆಗೆ 10 ಲಕ್ಷ ರೂ ವೆಚ್ಚದಲ್ಲಿ ಟಾಸ್ಕ್ ಫೋರ್ಸ್ ಯೋಜನೆಯಡಿ ಡಾಂಬರೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿ ಗ್ರಾಮಕ್ಕೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಗ್ರಾಮಗಳ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾ ಗುತ್ತಿದೆ. ಬಸವಪಟ್ಟಣ ಪದವಿಪೂರ್ವ ಕಾಲೇಜು ಆವರಣದ ಮುಖ್ಯ ರಸ್ತೆ ಯಿಂದ ಕಾಲೇಜು ಅಂಚಿನವರೆಗೆ ರಸ್ತೆ ಡಾಂಬರೀಕರಣ, ಕಾಲೇಜಿನಲ್ಲಿ ಗ್ರಂಥಾ ಲಯ ಉದ್ಘಾಟನೆ, 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಕೊಠಡಿಗಳ ಉದ್ಘಾಟನೆ ಮಾಡಲಾಗಿದೆ. ತಂಬಾಕು ಮಂಡಳಿಗೆ ಹೋಗುವ ರಸ್ತೆಗೆ 10 ಲಕ್ಷ ರೂ ವೆಚ್ಚದಲ್ಲಿ ಡಾಂಬರೀಕರಣ ಪ್ರಾರಂಭ ವಾಗಿದೆ. ಶ್ರೀ ರಾಮೇಶ್ವರಸ್ವಾಮಿ ದೇವ ಸ್ಥಾನ ಪಕ್ಕದ ಆವರಣದಲ್ಲಿ 25 ಲಕ್ಷ ರೂ ಮತ್ತು ಶ್ರೀ ಸುಬ್ರಮಣ್ಯ ದೇವಸ್ಥಾನದ ಪಕ್ಕ ಆವರಣದಲ್ಲಿ 25 ಲಕ್ಷ ರೂ ಶೌಚಾಲಯಕ್ಕೆ ಮಂಜೂರಾಗಿದೆ ಹಾಗೂ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದ ಹತ್ತಿರ ವಿರುವ ಪರಿಶಿಷ್ಟ ಜಾತಿ ಇರುವ ಜನಾಂಗದ ರಸ್ತೆಗೆ 25 ಲಕ್ಷ ರೂ ಮಂಜೂರಾಗಿದ್ದು, ಇನ್ನೆರಡು ದಿವಸಗಳಲ್ಲಿ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ತಿಳಿಸ ಲಾಗಿದೆ ಎಂದರು.

ತಾಪಂ ಮಾಜಿ ಸದಸ್ಯ ಬಿ.ಸಿ.ವೀರೇಶ್, ಅಖಿಲ ಭಾರತೀಯ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ಬಿ.ಅರ್.ನಾರಾಯಣ ಸ್ವಾಮಿ, ಹಿಂದುಳಿದ ವರ್ಗದ ಅಧ್ಯಕ್ಷ ಸಾಧಿಕ್ ಸಾಬ್, ಗ್ರಾಪಂ ಮಾಜಿ ಅಧ್ಯಕ್ಷ ರಾದ ಚಿಕ್ಕಣ್ಣಶೆಟ್ಟಿ, ಡಿ.ಎಚ್.ಪ್ರಭಾಕರ್, ಮಾಜಿ ಉಪಾಧ್ಯಕ್ಷರಾದ ರಾಮೇಗೌಡ, ಎಂ.ಎಚ್. ಕೃಷ್ಣಮೂರ್ತಿ, ಸದಸ್ಯರಾದ ದಿವಾಕರ್, ದ್ಯಾವಯ್ಯ, ಮುಖಂಡರಾದ ಐಯಣ್ಣಗೌಡ, ಉಪಾರೀಕೇಗೌಡ, ಮಂಜು ನಾಥ್, ಶಾಸಕರ ಆಪ್ತ ಸಹಾಯಕ ವೆಂಕ ಟೇಶ್, ಕೃಷ್ಣೇಗೌಡ, ಗುಂಡಣ್ಣ ಮುಂತಾ ದವರು ಉಪಸ್ಥಿತರಿದ್ದರು.

Translate »