ಕೌಟುಂಬಿಕ ಕಲಹ: ಹಾಡಹಗಲೇ  ಪತ್ನಿ, ಮಾವನ ಬರ್ಬರ ಹತ್ಯೆ
ಮೈಸೂರು

ಕೌಟುಂಬಿಕ ಕಲಹ: ಹಾಡಹಗಲೇ ಪತ್ನಿ, ಮಾವನ ಬರ್ಬರ ಹತ್ಯೆ

February 1, 2019

ಚನ್ನರಾಯಪಟ್ಟಣ: ಕೌಟುಂಬಿಕ ಕಲಹದ ಹಿನ್ನೆಲೆ ಯಲ್ಲಿ ವ್ಯಕ್ತಿಯೋರ್ವ ಪತ್ನಿ ಮತ್ತು ಮಾವನನ್ನು ಹಾಡ ಹಗಲೇ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಚನ್ನ ರಾಯ ಪಟ್ಟಣದ ಎಸ್‍ಬಿಐ ಬ್ಯಾಂಕ್ ರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ. ತಾಲೂಕಿನ ಎಲಿಯೂರು ಗ್ರಾಮದ ನಂಜೇ ಗೌಡ ಅಲಿಯಾಸ್ ನಂದೀಶ್ ಎಂಬಾತನೇ ತನ್ನ ಮಾವ ಪ್ರಕಾಶ್(55) ಮತ್ತು ಪತ್ನಿ ದಿವ್ಯಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ.

ವಿವರ: ಎಲಿಯೂರಿನ ನಂದೀಶ್‍ಗೆ ಅದೇ ಗ್ರಾಮದ ಪ್ರಕಾಶ್ ಪುತ್ರಿ ದಿವ್ಯಾಳನ್ನು 8 ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಕಳೆದ 6 ತಿಂಗಳಿಂದ ನಂದೀಶ್ ಮತ್ತು ವಿದ್ಯಾ ನಡುವೆ ಕೌಟುಂ ಬಿಕ ಕಲಹ ಉಂಟಾಗಿದ್ದು, ಗ್ರಾಮಸ್ಥರು ಪಂಚಾಯಿತಿ ನಡೆಸಿ, ನಂದೀಶ್‍ಗೆ ತಿಳುವಳಿಕೆ ನೀಡಿದ್ದರು. ಮದ್ಯದ ದಾಸನಾಗಿದ್ದ ಈತ ಕಳೆದ 4 ದಿನಗಳ ಹಿಂದೆ ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿ ತವರು ಮನೆಗೆ ಅಟ್ಟಿದ್ದ ಎಂದು ಹೇಳ ಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ಮತ್ತು ಅವರ ಪುತ್ರಿ ದಿವ್ಯಾ ಅವರುಗಳು ನಂದೀಶ್ ಮೇಲೆ ಪೊಲೀಸರಿಗೆ ದೂರು ಸಲ್ಲಿಸುವ ಸಲುವಾಗಿ ಚನ್ನರಾಯಪಟ್ಟಣದ ಎಸ್‍ಬಿಐ ಬ್ಯಾಂಕ್ ರಸ್ತೆಯಲ್ಲಿರುವ ವಕೀಲ ಧರ್ಮಪ್ಪ ಅವರನ್ನು ಭೇಟಿ ಮಾಡಲು ತೆರಳಿದ್ದಾರೆ. ಈ ವೇಳೆ ವಕೀಲರ ಕಚೇರಿ ಬಳಿಯೇ ನಂದೀಶ್ ತನ್ನ ಮಾವ ಪ್ರಕಾಶ್ ಮತ್ತು ಪತ್ನಿ ದಿವ್ಯಾ ಮೇಲೆ ಮಚ್ಚಿ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪುತ್ರಿ ತೀವ್ರ ವಾಗಿ ಗಾಯಗೊಂಡು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ಪ್ರಕಾಶ್‍ಗೌಡ, ಎಎಸ್ಪಿ ನಂದಿನಿ, ಡಿವೈ ಎಸ್‍ಪಿ ಪಿ.ಲಕ್ಷ್ಮೇಗೌಡ, ಸರ್ಕಲ್ ಇನ್‍ಸ್ಪೆಕ್ಟರ್ ಕಾಂತರಾಜು, ಸಬ್ ಇನ್‍ಸ್ಪೆಕ್ಟರ್ ಮಂಜುನಾಥಗೌಡ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. ಈ ಸಂಬಂಧ ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿ ಯಾಗಿರುವ ನಂದೀಶ್‍ಗಾಗಿ ಹುಡುಕಾಟ ನಡೆಸಿದ್ದಾರೆ.

 

Translate »