ತಿ.ನರಸೀಪುರ: ಗ್ರಾಮೀಣ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಸೌರಭ ಉತ್ತಮ ವೇದಿಕೆಯಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಎಂ.ಅಶ್ವಿನ್‍ಕುಮಾರ್ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಯುವ ಕಲಾವಿದರ ಸಾಂಸ್ಕøತಿಕ ಕಾರ್ಯಕ್ರಮ ಯುವ ಸೌರಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಅನೇಕ ಪ್ರತಿಭೆಗಳಿದ್ದರೂ ಬೆಳಕಿಗೆ ಬಾರದೇ ಉಳಿಯುತ್ತಿದ್ದಾರೆ. ಅವರಿಗೊಂದು ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ. ಮುಂಬರುವ ಕುಂಭಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ನಂತರ…
ನಗರ್ಲೆ ಹಾಲು ಉತ್ಪಾದಕರ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
January 12, 2019ನಗರ್ಲೆ: ನಂಜನಗೂಡು ತಾಲೂಕು ನಗರ್ಲೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆರ್.ಸರ್ವೇಶ್ ಹಾಗೂ ಉಪಾಧ್ಯಕ್ಷೆಯಾಗಿ ಜಯಮ್ಮ ನಾಗರಾಜು ಆಯ್ಕೆಯಾದರು. ನಂತರ ಅಧ್ಯಕ್ಷರಾದ ಸರ್ವೇಶ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದರಲ್ಲದೆ, ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಮಹದೇವಯ್ಯ, ರಾಜನಾಯಕ, ಎನ್.ಬಿ. ವೀರೇಂದ್ರಸುರೇಶ್, ಎನ್.ಎನ್.ಶಂಭು, ಚಿನ್ನಪ್ಪ, ಹೆಚ್.ಜಿ.ಪುಟ್ಟಸ್ವಾಮಿ, ಜಯಮ್ಮ, ಎನ್.ಇ.ಗುರುಸ್ವಾಮಿ, ಮಹೇಶ್ವರಿ, ಸಾಕಮ್ಮ ಹಾಗೂ ರಿಟರ್ನಿಂಗ್ ಆಫೀಸರ್, ಡಿ.ಶಂಕರ್, ಕಾರ್ಯದರ್ಶಿ ಮಹದೇವಪ್ಪ, ಹಾಲು ಪರೀಕ್ಷಕ…
ದೃಷ್ಟಿಹೀನ ವಿದ್ಯಾರ್ಥಿಗಳ ಸಹಾಯಾರ್ಥ ಫೆ.16ಕ್ಕೆ `ಸ್ನೇಹ ಸ್ಫೂರ್ತಿ’ ಸಂಗೀತ ಸಂಜೆ
January 12, 2019ಮೈಸೂರು: ದೃಷ್ಟಿಹೀನ ವಿದ್ಯಾರ್ಥಿಗಳ ಸಹಾಯಾರ್ಥ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಫೆ.16ರಂದು ಸಂಜೆ 7ರಿಂದ `ಸ್ನೇಹ ಸ್ಫೂರ್ತಿ’ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಹನ ವಿಕಲಾಂಗರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿ.ನರಸಿಂಹಯ್ಯ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನ ಮನಸ್ಕ ಐವರು ದೃಷ್ಟಿ ವಿಕಲಚೇತನರಿಂದ ಕಳೆದ ಹದಿನೆಂಟು ವಷರ್Àಗಳ ಹಿಂದೆ ಸರಸ್ವತಿಪುರಂನಲ್ಲಿ ಸ್ಥಾಪನೆಯಾದ ಪ್ರತಿಷ್ಠಾನ ಅಂಧರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ದೃಷ್ಟಿಹೀನರನ್ನು ಮುಖ್ಯವಾಹಿನಿಗೆ ತರಲು ಶಾಲಾ ಪಠ್ಯಪುಸ್ತಕಗಳನ್ನು ಬ್ರೈಲ್ ಲಿಪಿಗೆ…
ಜ.18ರಂದು ‘ಟೆಸ್ಟಿಂಗ್ ಆಫ್ ಹೈಪೋಥೆಸಿಸ್’ ಕುರಿತು ಕಾರ್ಯಾಗಾರ
January 12, 2019ಮೈಸೂರು: ಮೈಸೂರಿನ ಕುವೆಂಪುನಗರದ ಶ್ರೀ ಕಾವೇರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಜ.18ರಂದು ಬೆಳಿಗ್ಗೆ 10ಕ್ಕೆ ಕಾಲೇಜಿನ ಆಡಿಟೋರಿಯಂನಲ್ಲಿ ಮೈಸೂರು ವಿಶ್ವವಿದ್ಯಾ ನಿಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಹಾಗೂ ಸಂಪನ್ಮೂಲ ವ್ಯಕ್ತಿ ಡಾ.ಎನ್.ನಾಗರಾಜ ಅವರಿಂದ ‘ಟೆಸ್ಟಿಂಗ್ ಆಫ್ ಹೈಪೋಥೆಸಿಸ್’ ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಮುಖ್ಯ ಅತಿಥಿಯಾಗಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಡಾ. ಬಿ.ಹೆಚ್. ಸುರೇಶ್ ಭಾಗವಹಿಸುವರು. ಗೌರವ ಅತಿಥಿಗಳಾಗಿ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಮಹಿಳಾ…
ಮಲ್ಪೆ ಬೀಚ್‍ನಿಂದ ನಾಪತ್ತೆಯಾದ ಮೀನುಗಾರರ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ
January 12, 2019ಮೈಸೂರು: ಮಲ್ಪೆ ಬೀಚ್‍ನಿಂದ ನಾಪತ್ತೆಯಾಗಿರುವ ಏಳು ಮೀನುಗಾರರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಗಂಗಾ ಮತಸ್ಥರ ಸಂಘದ ಕಾರ್ಯಕರ್ತರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ನಿಗೂಢ ರೀತಿ ನಾಪತ್ತೆಯಾಗಿದ್ದಾರೆ. ಮೀನುಗಾರರ ಭದ್ರತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಣ್ಮರೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಬೇಕು. 26 ದಿನಗಳಾದರೂ ಮೀನುಗಾರರ ಸುಳಿವು ಪತ್ತೆಯಾಗಿಲ್ಲ. ಇದರಿಂದ ಇತರೆ ಮೀನು ಗಾರರಲ್ಲಿ ಭಯ ಆವರಿಸಿದೆ. ಮೀನುಗಾರಿಕೆ ಮಾಡುವುದು…
ಅಂತರ್ಜಲ ವೃದ್ಧಿಗೆ ಕೆರೆಗಳ ಜೀರ್ಣೋದ್ಧಾರ
January 11, 2019ಬೆಂಗಳೂರು: ಅಂತರ್ಜಲ ವೃದ್ಧಿಗೆ ಖಾಸಗಿ ಸಹಭಾಗಿತ್ವದಲ್ಲಿ ಕೆರೆಗಳ ಜೀರ್ಣೋದ್ಧಾರ ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೆರೆಗಳ ಒತ್ತುವರಿ ತೆರವುಗೊಳಿಸಿ ಅವು ಗಳ ಜೀರ್ಣೋದ್ಧಾರದ ಜೊತೆಗೆ ನಿರ್ವ ಹಣಾ ಹೊಣೆಯನ್ನೂ ಖಾಸಗಿಯವರಿಗೆ ನೀಡಲಾಗುವುದು. ಉದ್ಯಮಿಗಳು ಹಾಗೂ ಸಂಘ-ಸಂಸ್ಥೆಗಳಿಗೆ ಈ ಜವಾಬ್ದಾರಿ ವಹಿ ಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಗ್ರಾಮೀಣ ಭಾಗದ ಕೆರೆಗಳ…
ಮೈಸೂರು-ಬೆಂಗಳೂರು ಹೆದ್ದಾರಿ: ಸಮರೋಪಾದಿ ಕಾಮಗಾರಿ
January 11, 2019ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ವಿಶ್ವ ದರ್ಜೆಗೆ ಏರಿಸುವ ಕಾಮಗಾರಿ ಸದ್ದಿಲ್ಲದೆ ಭರ ದಿಂದ ಸಾಗಿದೆ. ನಗರದ ಹೊರವಲಯದಲ್ಲಿರುವ ಒಕ್ಕಲಿಗ ಮಹಾಸಂಸ್ಥಾನ ಮಠದಿಂದ ರಸ್ತೆಯ ಇಕ್ಕೆಲಗಳಲ್ಲೂ ಕಾಮಗಾರಿ ಹಗಲು-ರಾತ್ರಿಯೆನ್ನದೆ ನಡೆಯುತ್ತಿದೆ. ನೈಸ್ ಕೂಡು ರಸ್ತೆಯಿಂದ ಬಿಡದಿವರೆಗೂ ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹೆದ್ದಾರಿಗೆ ವಶ ಪಡಿಸಿಕೊಂಡ ಮನೆ ಮತ್ತು ಕಟ್ಟಡಗಳನ್ನು ತೆರವುಗೊಳಿಸಿ, ಸಮತಟ್ಟು ಮಾಡಲಾಗುತ್ತಿದೆ. ಈ ಭಾಗದಲ್ಲೇ ವರನಟ, ದಿವಂಗತ ಡಾ. ರಾಜ್‍ಕುಮಾರ್ ಅವರ ಕುಟುಂಬದ ಒಡೆತನಕ್ಕೆ ಸೇರಿದ ಪುನೀತ್ ಫಾರಂನ ಮೂರು ಎಕರೆಗೂ ಹೆಚ್ಚು ಭೂಮಿ…
ಮಲೆಮಹದೇಶ್ವರಬೆಟ್ಟ ಇನ್ನು ಮುಂದೆ ಹುಲಿ ಸಂರಕ್ಷಣಾ ವಲಯ
January 11, 2019ಚಾಮರಾಜನಗರ: ಹುಲಿ ಸಂರಕ್ಷಿತ ಮೀಸಲು ಅರಣ್ಯವಾಗಿ ಜಿಲ್ಲೆಯ ಪ್ರಸಿದ್ಧ ವನ್ಯಧಾಮ ಮಹದೇಶ್ವರ ಬೆಟ್ಟವನ್ನು ಘೋಷಿಸಲಾಗಿದೆ. ಈ ಪ್ರಸ್ತಾಪಕ್ಕೆ ಕೇಂದ್ರ ಅನುಮೋದನೆ ನೀಡಿದರೆ ಜಿಲ್ಲೆಯು ಮೂರು ಹುಲಿ ರಕ್ಷಿತಾರಣ್ಯ ವನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರೊಂದಿಗೆ ರಾಜ್ಯದಲ್ಲಿ 6 ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ. 960 ಚ.ಕಿ.ಮೀ. ವ್ಯಾಪ್ತಿಯ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಮೀಸಲು ಅರಣ್ಯ ಎಂದು ಘೋಷಿಸಬೇಕು ಎಂದು ಬೆಂಗಳೂರಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಈ ನಿರ್ಣಯವನ್ನು ಕೇಂದ್ರ…
150 ಕೋಟಿ ಮೌಲ್ಯದ ದೊಡ್ಡಕೆರೆ ಆಸ್ತಿ ಮೈಸೂರು ಜಿಲ್ಲಾಡಳಿತದ ವಶಕ್ಕೆ
January 11, 2019ಮೈಸೂರು: ಮೈಸೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಸರ್ವೆ ನಂ 1ರಲ್ಲಿ 150 ಕೋಟಿ ರೂ. ಮೌಲ್ಯದ 11 ಎಕರೆ 38 ಗುಂಟೆ ಸರ್ಕಾರಿ ಭೂಮಿಗೆ ಹಾಕಲಾಗಿದ್ದ ಬೇಲಿಯನ್ನು ಗುರುವಾರ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿ ತೆರವು ಗೊಳಿಸುವ ಮೂಲಕ ವಶಕ್ಕೆ ಪಡೆಯಿತು. ಮಹಾತ್ಮಗಾಂಧಿ ರಸ್ತೆಯಲ್ಲಿ ಮಾಲ್ ಆಫ್ ಮೈಸೂರು ಹಾಗೂ ತರಕಾರಿ ಸಗಟು ಮಾರುಕಟ್ಟೆ ನಡುವೆ ಇರುವ ದೊಡ್ಡಕೆರೆಗೆ ಸೇರಿರುವ 11 ಎಕರೆ 38 ಗುಂಟೆ ಭೂಮಿಗೆ ದೊಡ್ಡಕೆರೆ ಟ್ಯಾಂಕ್ ಬಂಡ್ ಸೈಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಬೇಲಿ ಹಾಕಿ…
ಮೈಸೂರಲ್ಲಿ ವಿಭಾಗ ಮಟ್ಟದ ಡಿಸಿ, ಎಸ್ಪಿಗಳೊಂದಿಗೆ ಚುನಾವಣಾ ಆಯುಕ್ತರ ಸಭೆ
January 11, 2019ಮೈಸೂರು: ಹಲವು ಕಾರಣಗಳಿಂದ ಬಾಕಿ ಉಳಿದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಯಲ್ಲಿ ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ, ಇಂದು ಮೈಸೂರಲ್ಲಿ ವಿಭಾಗ ಮಟ್ಟದ ಏಳು ಜಿಲ್ಲೆಗಳ ಡಿಸಿ ಮತ್ತು ಎಸ್ಪಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೈಸೂರು ಕಂದಾಯ ವಿಭಾಗದ ವ್ಯಾಪ್ತಿಗೆ ಬರುವ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು, ಪುರಸಭೆ,…










