ಮೈಸೂರು: ಮೈಸೂರಿನ ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ ಟ್ರಸ್ಟ್‍ನ ಬೆಳ್ಳಿಹಬ್ಬದ ಅಂಗವಾಗಿ ಜ.12ರಂದು ಮೈಸೂರಿನ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕನ್ವೆನ್ಷನ್ ಹಾಲ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗಾ ಸನ ಸ್ಪರ್ಧೆ ಆಯೋಜಿಸಿರುವುದಾಗಿ ಟ್ರಸ್ಟ್ ಅಧ್ಯಕ್ಷ ಯೋಗಾಚಾರ್ಯ ಬಿ.ಶಾಂತರಾಮ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ವಿವಿಧ ವಯೋಮಾನದ 7 ವಿಭಾಗಗಳಲ್ಲಿ ಸ್ಪರ್ಧೆ ನಡೆಯ ಲಿದೆ. 55 ವರ್ಷ ಮೇಲ್ಪಟ್ಟವರಿಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಮಹಿಳೆ ಯರು, ಪುರುಷರೂ ಭಾಗವಹಿಸಬಹುದು. ಸ್ಪರ್ಧೆಯಲ್ಲಿ…
ರಾಮನಾಥಪುರದಲ್ಲಿ ಕಲುಷಿತಗೊಳ್ಳುತ್ತಿದೆ ಕಾವೇರಿ ನದಿ
December 18, 2018ರಾಮನಾಥಪುರ: ಇಲ್ಲಿಯ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ಕಳೆದು 4 ದಿನಿಗಳಾದರೂ ಜಾತ್ರೆಗೆ ಜನ ಸಮೂಹ ಜನಾಕರ್ಷಣೆಯ ಕೇಂದ್ರವಾಗಿದೆ. ಕಾವೇರಿ ನದಿ ಪುಣ್ಯಸ್ಥಳ ಮತ್ತು ಸುಂದರ ನೋಟ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಆದರೆ ಕಾವೇರಿ ನದಿಗೆ ಯಾವ ರೀತಿಯ ಮೂಲ ಸೌಲಭ್ಯವಿಲ್ಲದೆ ಬಂದ ಪ್ರವಾಸಿಗರಿಗೆ ನಿರಾಸೆ ಉಂಟು ಮಾಡಿದೆ. ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಪಡೆದಿ ರುವ ರಾಮನಾಥಪುರದ ಕಾವೇರಿ ನದಿ ಯಲ್ಲಿ ಮಿಂದರೆ ಪಾಪ ಪರಿಹಾರವಾಗು ತ್ತದೆ ಎಂಬ ಕಾಲವೊಂದಿತ್ತು. ಆದರೆ ಈಗ ಮಿಂದೆದ್ದರೆ…
ಇಂದು ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
December 18, 2018ಮೈಸೂರು: ಮೈಸೂರಿನ ಉದಯಗಿರಿಯಲ್ಲಿರುವ ಶ್ರೀ ವಿಘ್ನೇಶ್ವರ ಪ್ರಸನ್ನ ಭಕ್ತ ಮಂಡಳಿ ವತಿಯಿಂದ ನಾಳೆ (ಡಿ.18) ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ಏರ್ಪಡಿಸಲಾಗಿದೆ. ಬೆಳಿಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ, 7ಕ್ಕೆ ಪ್ರಾಕಾರೋತ್ಸವ, 7.30ಕ್ಕೆ ವೈಕುಂಠ ದ್ವಾರದಲ್ಲಿ ಶ್ರೀದೇವಿ, ಭೂದೇವಿ ಜೊತೆಯಲ್ಲಿ ಶ್ರೀ ವೆಂಕಟೇಶ್ವರಸ್ವಾಮಿ ವೈಕುಂಠ ದ್ವಾರದಲ್ಲಿ ವಿಜೃಂಭಿಸುತ್ತಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ. ಬೆಳಿಗ್ಗೆ 7ರಿಂದ ರಾತ್ರಿ 8 ಗಂಟೆವರೆಗೆ ಭಕ್ತಾದಿಗಳಿಗೆ ಪ್ರಸಾದ…
7 ಮಂದಿ ವಿರುದ್ಧ FIR
December 17, 2018ಹನೂರು: ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 13 ಮಂದಿ ಸಾವನ್ನಪ್ಪಿ, 91 ಮಂದಿ ಅಸ್ವಸ್ಥ ಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ರಾಮಾಪುರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಕಿರಾತಕರು ಇನ್ನೂ ಪತ್ತೆಯಾಗಿಲ್ಲವಾ ದರೂ, ದೇವಸ್ಥಾನದ ಟ್ರಸ್ಟಿಗಳು ಹಾಗೂ ಪ್ರಸಾದ ತಯಾರಿಸಿದ ಬಾಣಸಿಗರ ವಿರುದ್ಧ ಭಾರತೀಯ ದಂಡ ಸಂಹಿತೆ 304ರಡಿ (ಉದ್ದೇಶವಲ್ಲದ ಕೊಲೆ) ಎಫ್‍ಐಆರ್ ದಾಖಲಿಸಲಾಗಿದೆ. ಸುಳವಾಡಿ ಮಾರಮ್ಮ ದೇವಸ್ಥಾನದ ಟ್ರಸ್ಟಿ ಚಿನ್ನತ್ತಿ, ವ್ಯವಸ್ಥಾಪಕ…
`ಉಳುವವನಿಗೇ ಭೂಮಿ’ ಕಾಯ್ದೆಯಲ್ಲಿ ಭೂಮಿ ಕಳೆದುಕೊಂಡು ಶಿಕ್ಷಣದಿಂದ ಪ್ರಗತಿ ಸಾಧಿಸಿದ ಬ್ರಾಹ್ಮಣರು: ಸಚಿವ ಜಿಟಿಡಿ
December 17, 2018ಮೈಸೂರು: `ಉಳು ವವನೇ ಭೂಮಿ ಒಡೆಯ’ ಕಾಯ್ದೆಯಿಂದ ಅನೇಕ ಬ್ರಾಹ್ಮಣರು ಜಮೀನು ಕಳೆದುಕೊಂಡರು. ನಂತರ ಆ ಕುಟುಂಬ ಮಕ್ಕಳು ಶಿಕ್ಷಣದ ಮೂಲಕ ಪ್ರಗತಿ ಸಾಧಿಸಿ, ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬೃಹತ್ ಬ್ರಾಹ್ಮಣ ಸಮಾ ವೇಶ-2018ರ ಮುಕ್ತಾಯ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು. ಅಂದಿನ ಸಿಎಂ ದೇವರಾಜ ಅರಸು ಅವರು…
ಪ್ರಸಾದಕ್ಕೆ ನಾನು ವಿಷ ಹಾಕಿಲ್ಲ… ದೇವಸ್ಥಾನದ ಟ್ರಸ್ಟ್‍ನಲ್ಲಿ ಒಡಕಿಲ್ಲ…
December 17, 2018ಮಲೆಮಹದೇಶ್ವರ ಬೆಟ್ಟ:ಸುಳ ವಾಡಿ ಮಾರಮ್ಮ ದೇವಸ್ಥಾನಕ್ಕೂ ಸಾಲೂರು ಮಠಕ್ಕೂ ದಶಕಗಳ ಅವಿನಾಭಾವ ಸಂಬಂಧ… ನಾನು ಮಾರಮ್ಮನ ಪ್ರಸಾದಕ್ಕೆ ವಿಷ ಹಾಕಿಲ್ಲ… ಟ್ರಸ್ಟ್‍ನಲ್ಲಿ ಒಡಕಿಲ್ಲ… ಇದು ಸುಳವಾಡಿ ಮಾರಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಸಾಲೂರು ಮಠದ ಕಿರಿಯ ಶ್ರೀಗಳಾದ ಇಮ್ಮಡಿ ಮಹದೇವಸ್ವಾಮಿ ಅವರ ಮಾತು. ಸುಳವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಭಕ್ತರು ಸಾವನ್ನ ಪ್ಪಿದ ಪ್ರಕರಣದಲ್ಲಿ ತಮ್ಮ ಹೆಸರೂ ಕೂಡ ತಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜೊತೆ ಮಾತನಾಡಿದ…
ಶಾರ್ಟ್ ಸಕ್ರ್ಯೂಟ್ ಪ್ರಕರಣ: ಹಾಸ್ಟೆಲ್ ತೊರೆದ ವಿದ್ಯಾರ್ಥಿನಿಯರು
December 17, 2018ಮೈಸೂರು: ಮೈಸೂರಿನ ಒಂಟಿಕೊಪ್ಪಲಿನ ಮೆಟ್ರಿಕ್ ನಂತರದ ಬಾಲಕಿಯರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ರಾತ್ರಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೊರಬರುವ ವೇಳೆಯಲ್ಲಿ ನೂಕು ನುಗ್ಗಲಿನಿಂದ ಗಾಬರಿಗೊಂಡಿದ್ದ ವಿದ್ಯಾರ್ಥಿನಿಯರೆಲ್ಲಾ ಸದ್ಯ ಹಾಸ್ಟೆಲ್ ತೊರೆದಿದ್ದು, ಇದೀಗ ಹಾಸ್ಟೆಲ್ ಖಾಲಿ ಖಾಲಿಯಾಗಿದೆ. ಶನಿವಾರ ರಾತ್ರಿ ಹಾಸ್ಟೆಲ್‍ನ ಮೆಟ್ಟಿಲಿನ ಬಳಿ ಇದ್ದ ಯುಪಿಎಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್ ಉಂಟಾಗಿದೆ. ಈ ವೇಳೆ ಸ್ವಲ್ಪ ಬೆಂಕಿ ಕಾಣಿಸಿಕೊಂಡಿತಲ್ಲದೆ, ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಹಾಸ್ಟೆಲ್‍ನ ಅಡುಗೆ ಸಿಬ್ಬಂದಿ ಚೀರಾಡಲು ಶುರು ಮಾಡಿದ್ದು,…
ಗಮನ ಸೆಳೆದ ಬ್ರಾಹ್ಮಣ ಸಮಾವೇಶದ ಬೃಹತ್ ಶೋಭಾಯಾತ್ರೆ
December 17, 2018ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಮಾವೇಶದ ಅಂಗವಾಗಿ ಮೈಸೂರಲ್ಲಿ ಭಾನುವಾರ ನಡೆದ ಬೃಹತ್ ಶೋಭಾ ಯಾತ್ರೆ ಗಮನ ಸೆಳೆಯಿತು. ಓಂ ಚಿಹ್ನೆ ಇರುವ ಕೇಸರಿ ವರ್ಣದ ನೂರಾರು ಬಾವುಟಗಳು ಶೋಭಾ ಯಾತ್ರೆಯ ಉದ್ದಕ್ಕೂ ರಾರಾಜಿಸಿದವು. ಮೈಸೂರಿನ ಶಂಕರಮಠ ಆವರಣದಿಂದ ಹೊರಟ ಮೆರವಣಿಗೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಸಮ್ಮೇಳನಾಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವ ದಲ್ಲಿ ಅಲಂಕೃತ ಬೆಳ್ಳಿರಥದಲ್ಲಿ ಇರಿಸಿದ್ದ ಗಾಯತ್ರಿ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಇದೇ ವೇಳೆ ಅಲಂ ಕೃತ…
ಬ್ರಾಹ್ಮಣರು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ
December 17, 2018ಮೈಸೂರು: ಬ್ರಾಹ್ಮ ಣರು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಇಂದಿಲ್ಲಿ ಸಲಹೆ ನೀಡಿದರು. ಮೈಸೂರಿನ ಅವಧೂತ ದತ್ತಪೀಠ ಗಣ ಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪ ದಲ್ಲಿ ಭಾನುವಾರ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಮಾವೇಶದ 2ನೇ ದಿನ ವಿಶೇಷ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತ ನಾಡಿದರು. ಬ್ರಾಹ್ಮಣರನ್ನು ಬುದ್ಧಿವಂತರು, ಮುಂದುವರಿದ ಜನಾಂಗ ಎನ್ನಲಾಗುತ್ತದೆ. ಆದರೆ, ನಮ್ಮಲ್ಲಿ ಬುದ್ಧಿ ಇದ್ದರೂ ಕೆಲಸ ಪಡೆಯಲಾಗುತ್ತಿಲ್ಲ. ಹೀಗಾಗಿ, ನಮ್ಮ ಯುವ ಕರು…
ಎಸ್‍ಬಿಐ ಗೃಹ, ಕಾರ್ ಲೋನ್ ಉತ್ಸವಕ್ಕೆ ಚಾಲನೆ
December 17, 2018ಮೈಸೂರು: ಮೈಸೂರಿನ ಬಲ್ಲಾಳ್ ವೃತ್ತದ ಬಳಿಯಿರುವ ನಿತ್ಯೋತ್ಸವ ಭವನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಆಯೋಜಿಸಿರುವ 2 ದಿನಗಳ ಎಸ್‍ಬಿಐ ಗೃಹ ಮತ್ತು ಕಾರ್ ಲೋನ್ ಉತ್ಸವಕ್ಕೆ ನಗರ ಪೊಲೀಸ್ ಆಯುಕ್ತರಾದ ಡಾ. ಎ.ಸುಬ್ರಹ್ಮಣ್ಯೇಶ್ವರರಾವ್ ಚಾಲನೆ ನೀಡಿದರು. ಎಸ್‍ಬಿಐ ಡೆಪ್ಯೂಟಿ ಜನರಲ್ ಮ್ಯಾನೇ ಜರ್ ತಿಲಕ್‍ರಾಜ್ ಪಕ್ವ, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್‍ಗಳಾದ ನಾಗಪ್ಪ, ಕೆ.ಪಿ.ಮಹ ದೇವ್‍ಕುಮಾರ್, ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ರವೀಂದ್ರಭಟ್, ವಿವಿಧ ವಿಭಾಗಗಳ ಅಧಿಕಾರಿಗಳಾದ ಪೈ.ಚಿನ್ನಸ್ವಾಮಿ, ಮುರುಳೀಧರ, ಅರುಣ್ ಕುಮಾರ್, ಎಸ್.ಎಸ್.ಪಾಶ್ರ್ವನಾಥ್ ಮತ್ತಿತರರು…