ಮೈಸೂರು: ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇಗುಲದಲ್ಲಿ ವಿಷಮಿಶ್ರಿತ ಪ್ರಸಾದ ಸೇವಿಸಿ 12 ಹೆಚ್ಚು ಮಂದಿ ಮೃತಪಟ್ಟು, 70ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಶುಕ್ರವಾರ ರಾತ್ರಿ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ, ಇಲ್ಲಿ ದಾಖಲಾಗಿರುವ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಈ ಪ್ರಕರಣ ಬೆಳಿಗ್ಗೆ ನಡೆದಿದ್ದು,…
ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ: ತನಿಖೆಗೆ `ಸುಪ್ರೀಂ’ ನಕಾರ
December 15, 2018ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಕುರಿತು ಯಾವುದೇ ತನಿಖೆ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಸುಪ್ರೀಂಕೋರ್ಟ್, ಕೇಂದ್ರದ ಎನ್‍ಡಿಎ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ರಫೇಲ್ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ನ್ಯಾಯಾಲಯದ ಮೇಲುಸ್ತುವಾರಿ ಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಇದರಿಂದ ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ನಿರಾಳ. ಯುದ್ಧ ವಿಮಾನ ಖರೀದಿ ಒಪ್ಪಂದ ದಲ್ಲಿ ಭಾರೀ ಅವ್ಯವಹಾರ ನಡೆದಿದ್ದು,…
ಚಾಮುಂಡಿಬೆಟ್ಟ, ಅರಮನೆ ದೇವಾಲಯಗಳ ಸಿಬ್ಬಂದಿ ಮುಷ್ಕರ ಆರಂಭ
December 15, 2018ಮೈಸೂರು: ಆರನೇ ವೇತನ ಶ್ರೇಣಿ ಜಾರಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಚಾಮುಂಡಿಬೆಟ್ಟ ಸೇರಿದಂತೆ ಅರಮನೆಯ ದೇವಾಲಯಗಳ ಪುರೋಹಿತರು ಹಾಗೂ ವಿವಿಧ ದರ್ಜೆ ನೌಕರರು ಚಾಮುಂಡೇಶ್ವರಿ ದೇವಾಲಯದ ಮುಂದೆ ಶುಕ್ರ ವಾರದಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ. ವೇತನ ಪರಿಷ್ಕರಣೆ ಮಾಡುವುದರೊಂದಿಗೆ ಕೆಲ ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಚಾಮುಂಡೇಶ್ವರಿ ಹಾಗೂ ಸಮೂಹ ದೇವಾಲಯ ಗಳ ನೌಕರರ ಸಂಘ ಕಳೆದ 15 ದಿನದ ಹಿಂದೆಯೇ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ದೇವಾಲಯಗಳಲ್ಲಿ…
ಗೋಪುರ ಶಂಕುಸ್ಥಾಪನೆಗೆ ಬಂದವರು ಸ್ಮಶಾನ ಸೇರಿದರು…!
December 15, 2018ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸುಳ ವಾಡಿ ಕುಚ್‍ಗುತ್ ಮಾರಮ್ಮನ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಪ್ರಸಾದ ಸೇವಿಸಿದವರಲ್ಲಿ 13ಕ್ಕೂ ಹೆಚ್ಚು ಮಂದಿ ಸಾವ ನ್ನಪ್ಪಿ, 70ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಸುಳವಾಡಿ ಕಿಚ್‍ಗುತ್ ದೇವಸ್ಥಾನವು ಮಾರ್ಟಳ್ಳಿ ಸಮೀಪ ಕಾಡಂಚಿನಲ್ಲಿದ್ದು, ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ದೇವಸ್ಥಾನ ನಿರ್ವಹಣೆಗೆ ಟ್ರಸ್ಟ್‍ವೊಂದನ್ನೂ ಕೂಡ ರಚಿಸಿಕೊಳ್ಳಲಾಗಿದ್ದು, ದೇವಾಲಯವು ಅಭಿವೃದ್ಧಿ ಹೊಂದುತ್ತಿದೆ. ಈ ದೇವಸ್ಥಾನಕ್ಕೆ ಗೋಪುರ ನಿರ್ಮಿಸ ಬೇಕೆಂಬ ಉದ್ದೇಶದಿಂದ…
ಡಿ.18ರಂದು ಎಂಎಸ್‍ಎಂಇ ಸರಬರಾಜು ಬಾಕಿ ವಸೂಲಿ ಅರಿವು ಕಾರ್ಯಕ್ರಮ
December 15, 2018ಮೈಸೂರು: ಮೈಸೂರಿನ ವಿದ್ಯಾವಿಕಾಸ್ ಇಂಜಿನಿಯರಿಂಗ್ ಕಾಲೇಜಿನ ಲಲಿತ ಸ್ಮಾರಕ ಭವನದಲ್ಲಿ ಡಿ.18 ರಂದು ಬೆಳಿಗ್ಗೆ 10.30ಕ್ಕೆ ಮೈಸೂರು ಕೈಗಾ ರಿಕೆಗಳ ಸಂಘದ ವತಿಯಿಂದ `ಸಣ್ಣ ಉದ್ಯಮಗಳ ಸರಬರಾಜಿನ ಬಾಕಿ ಪಾವತಿ ವಸೂಲಿ ಕಾಯಿದೆ ಹಾಗೂ ಸೂಕ್ಷ್ಮ ಸಣ್ಣ ಉದ್ಯಮ ಗಳ ಸೌಲಭ್ಯ ಪರಿಷತ್ತಿನ ಸಾಮಥ್ರ್ಯ ಅರಿವು’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ, ಮಾಜಿ ಶಾಸಕ ವಾಸು ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಭಾರತ ಸರ್ಕಾರದ…
ನೈಸರ್ಗಿಕ ವಿಪತ್ತಿನಿಂದ ನಲುಗಿದ ಕೊಡಗು ಚಿತ್ರಣ ಬಿಂಬಿಸುವ ‘ಕಥೆ ಹೇಳುವೆ ನನ್ನ’ ಕೃತಿ ಲೋಕಾರ್ಪಣೆ
December 15, 2018ಮೈಸೂರು: ಪುಸ್ತಕ ಬಿಡು ಗಡೆ ಎಂದರೆ ಕೃತಿಕಾರ, ಮುದ್ರಕ, ಪ್ರಕಾಶ ಕರು ಹಾಗೂ ಅವರ ಕುಟುಂಬ, ಸ್ನೇಹಿತರು, ಹಿತೈಷಿಗಳಲ್ಲಿ ಸಂತಸ, ಸಂಭ್ರಮವಿರುತ್ತದೆ. ಆದರೆ ಮೈಸೂರಿನಲ್ಲಿ ಇಂದು ನಡೆದ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದುಃಖ, ದುಮ್ಮಾನ, ಭಾರವಾದ ಮನಸುಗಳು ಒಂದೆಡೆ ಸೇರಿ ಒಂದು ರೀತಿಯ ಸ್ಮಶಾನ ಮೌನ ಮನೆ ಮಾಡಿತ್ತು. ಶ್ರದ್ಧಾಂಜಲಿ ಕಾರ್ಯಕ್ರಮ ಗಳಲ್ಲೂ ದುಃಖದ ಜೊತೆ ಒಂದಿಷ್ಟು ಹಸ ನ್ಮುಖಿ ಮನಸುಗಳನ್ನು ಕಾಣಲು ಸಾಧ್ಯ. ಆದರೆ ‘ಭೂತಾಯಿ ಆಕಳಿಸಿ ಮೈಮುರಿದಾಗ’ ಸಂಭವಿಸಿದ ನೈಸರ್ಗಿಕ ವಿಕೋಪದಿಂದ ತತ್ತರಿಸಿದ ನೆರೆಯ…
ಜೀವ ವಿಮಾ ನಿಗಮದ ನೂತನ ಕಟ್ಟಡ ಉದ್ಘಾಟನೆ
December 15, 2018ಮೈಸೂರು: ಸ್ವಂತ ಕಟ್ಟಡ ವನ್ನು ಹೊಂದಿದಾಗಲೇ ಯಾವುದೇ ಸಂಸ್ಥೆ ಹೆಚ್ಚಿನ ವ್ಯವಹಾರವನ್ನು ಮಾಡಲು ಸಾಧ್ಯ ವಾಗುತ್ತದೆ. ಮಾತ್ರವಲ್ಲ ಜನರ ನಂಬಿಕೆಗೆ ಸಂಸ್ಥೆ ಪಾತ್ರವಾಗುತ್ತದೆ ಎಂದು ಸುಶೀಲ್ ಕುಮಾರ್ ಅಭಿಪ್ರಾಯಪಟ್ಟರು. ಬುಧವಾರ ಮೈಸೂರು ನಗರದ ಶಾರದಾ ದೇವಿನಗರದಲ್ಲಿ ನೂತನವಾಗಿ ನಿರ್ಮಿಸಿ ರುವ ಅತ್ಯಾಧುನಿಕ ಸೌಲಭ್ಯವುಳ್ಳ ಸಂಸ್ಥೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಾ, ಮೈಸೂರು ವಿಭಾಗದ ಹೆಚ್ಚು ಶಾಲೆಗಳು ಸ್ವಂತ ಕಟ್ಟಡವನ್ನು ಹೊಂದಿದ್ದು, ಮೈಸೂರು ನಗರದಲ್ಲಿ 3 ಶಾಖೆಗಳು ಸ್ವಂತ ಕಟ್ಟಡ ವನ್ನು ಹೊಂದಿವೆ. ಉಳಿದೆರಡು ಶಾಖೆಗಳು ಸದ್ಯದಲ್ಲೇ ಸ್ವಂತ ಕಟ್ಟಡವನ್ನು…
ಡಿ.20ರಿಂದ ಮೈಸೂರಿನಲ್ಲಿ ಪುರುಷರ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ
December 15, 2018ಮೈಸೂರು: ಹಾಕಿ ಮೈಸೂರು ವತಿಯಿಂದ ಪುರುಷರ ರಾಜ್ಯ ಮಟ್ಟದ ಆಹ್ವಾನಿತ ಹಾಕಿ ಪಂದ್ಯಾವಳಿ ಮೈಸೂರು ವಿವಿ ಹಾಕಿ ಮೈದಾನದಲ್ಲಿ ಡಿ.20ರಿಂದ 23ರವರೆಗೆ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಕೆ.ಬಿ.ದಿಲೀಪ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಕ್ರೀಡಾಕೂಟ ಹೊರತಾಗಿ ಇಂತಹ ದೊಡ್ಡ ಮಟ್ಟದ ಯಾವುದೇ ಹಾಕಿ ಪಂದ್ಯಾವಳಿ ಕಳೆದ 10 ವರ್ಷಗಳಿಂದ ಮೈಸೂರಿನಲ್ಲಿ ಆಯೋಜನೆಗೊಂಡಿಲ್ಲ. ಹಾಕಿ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಮೈಸೂರು,…
ಬ್ರಾಹ್ಮಣ ಸಮಾವೇಶದಲ್ಲಿ ಸಮುದಾಯದ ಯುವ ಜನರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ
December 15, 2018ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿ ಯಿಂದ ಡಿ.15 ಮತ್ತು 16ರಂದು ಆಯೋಜಿಸಿರುವ ಮೈಸೂರು ನಗರ ಮತ್ತು ಜಿಲ್ಲಾ ಮಟ್ಟದ ಬ್ರಾಹ್ಮಣ ಸಮಾವೇಶದಲ್ಲಿ ಸಮುದಾಯದ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳು ವಂತೆ ಮೈಸೂರು ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ ಕೋರಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ನಂಜನಗೂಡು ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣ ದಲ್ಲಿ 2 ದಿನಗಳ ಕಾಲ ಸಮಾವೇಶ ನಡೆಯಲಿದೆ….
ಕೇಂದ್ರದಲ್ಲಿ ಯುಪಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವ ಮುನ್ಸೂಚನೆ
December 15, 2018ತಿ.ನರಸೀಪುರ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವ ಮುನ್ಸೂಚನೆಯಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಯಾಗುವುದು ಬಹುತೇಕ ಖಚಿತ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿಯ ಯುವ ಘಟಕದ ಅಧ್ಯಕ್ಷ ಟಿ.ಎಸ್.ಲೋಕೇಶ್ ಭವಿಷ್ಯ ನುಡಿದರು. ತಾಲೂಕಿನ ಬನ್ನೂರು ಪಟ್ಟಣದಲ್ಲಿ ರುವ ಸರ್ಕಾರಿ ಅತಿಥಿ ಗೃಹದಲ್ಲಿ ಕರೆಯ ಲಾಗಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪೂರ್ವದಲ್ಲೇ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್…