ಮೈಸೂರು: ಸ್ವಂತ ಕಟ್ಟಡ ವನ್ನು ಹೊಂದಿದಾಗಲೇ ಯಾವುದೇ ಸಂಸ್ಥೆ ಹೆಚ್ಚಿನ ವ್ಯವಹಾರವನ್ನು ಮಾಡಲು ಸಾಧ್ಯ ವಾಗುತ್ತದೆ. ಮಾತ್ರವಲ್ಲ ಜನರ ನಂಬಿಕೆಗೆ ಸಂಸ್ಥೆ ಪಾತ್ರವಾಗುತ್ತದೆ ಎಂದು ಸುಶೀಲ್ ಕುಮಾರ್ ಅಭಿಪ್ರಾಯಪಟ್ಟರು.
ಬುಧವಾರ ಮೈಸೂರು ನಗರದ ಶಾರದಾ ದೇವಿನಗರದಲ್ಲಿ ನೂತನವಾಗಿ ನಿರ್ಮಿಸಿ ರುವ ಅತ್ಯಾಧುನಿಕ ಸೌಲಭ್ಯವುಳ್ಳ ಸಂಸ್ಥೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಾ, ಮೈಸೂರು ವಿಭಾಗದ ಹೆಚ್ಚು ಶಾಲೆಗಳು ಸ್ವಂತ ಕಟ್ಟಡವನ್ನು ಹೊಂದಿದ್ದು, ಮೈಸೂರು ನಗರದಲ್ಲಿ 3 ಶಾಖೆಗಳು ಸ್ವಂತ ಕಟ್ಟಡ ವನ್ನು ಹೊಂದಿವೆ. ಉಳಿದೆರಡು ಶಾಖೆಗಳು ಸದ್ಯದಲ್ಲೇ ಸ್ವಂತ ಕಟ್ಟಡವನ್ನು ಹೊಂದ ಲಿವೆ ಎಂದರು. ಇದಕ್ಕೆ ಕಾರಣಕರ್ತರಾದ ಮೈಸೂರು ವಿಭಾಗದ ಮುಖ್ಯಸ್ಥ ಪದ್ಮ ನಾಭ ಅವರನ್ನು ಪ್ರಶಂಸಿಸಿದರು.
ಹಾಲಿ ಕುವೆಂಪುನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಖೆ-5, ಇನ್ನು ಮುಂದೆ ಶಾರದಾದೇವಿನಗರದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಸೌಲಭ್ಯವುಳ್ಳ ನೂತನ ಕಟ್ಟ ಡಕ್ಕೆ ಸದ್ಯದಲ್ಲೇ ಸ್ಥಳಾಂತರಗೊಳ್ಳಲಿದೆ.
ಸಮಾರಂಭದಲ್ಲಿ ಗಣನೀಯ ಸಾಧನೆ ಮಾಡಿದ ಕೆಲವು ಪ್ರತಿನಿಧಿಗಳನ್ನು ಸನ್ಮಾನಿ ಸಿದರು. ಸಮಾರಂಭದಲ್ಲಿ ಎಲ್ಲಾ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಪ್ರತಿ ನಿಧಿಗಳು ಭಾಗವಹಿಸಿದ್ದರು. ಕರ್ನಾಟಕ ಪ್ರಾಂತ್ಯದ ಜೀವ ವಿಮಾ ನಿಗಮದ ಮಾರು ಕಟ್ಟೆ ವ್ಯವಸ್ಥಾಪಕರಾದ ಮಹಮದ್ ಅಜûು ಜುದ್ದೀನ್ ಉಪಸ್ಥಿತರಿದ್ದರು. ಮೈಸೂರು ವಿಭಾಗದ ಹಿರಿಯ ವಿಭಾಗಾಧಿಕಾರಿ ಅನಂತ ಪದ್ಮನಾಭ ಸ್ವಾಗತಿಸಿದರು. ಶಾಖಾಧಿಕಾರಿ ಹೆಚ್.ಡಿ. ಆನಂದ್ ವಂದಿಸಿದರು.