ಮೈಸೂರು

ಮನೆ ಕಟ್ಟಡಕ್ಕೆ ಲೈಸನ್ಸ್ ಪಡೆದು ವಾಣಿಜ್ಯ ಕಟ್ಟಡ ನಿರ್ಮಾಣದಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ; ಆರೋಪ
ಮೈಸೂರು

ಮನೆ ಕಟ್ಟಡಕ್ಕೆ ಲೈಸನ್ಸ್ ಪಡೆದು ವಾಣಿಜ್ಯ ಕಟ್ಟಡ ನಿರ್ಮಾಣದಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ; ಆರೋಪ

December 1, 2018

ನಂಜನಗೂಡು: ನಗರದ ದೇವಿರಮ್ಮನಹಳ್ಳಿ ಪಂಚಾಯಿತಿ ಸೇರಿದಂತೆ ಕೆಲ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಕಟ್ಟಲು ಲೈಸನ್ಸ್ ಪಡೆದು ನಂತರ ವಾಣಿಜ್ಯ ಕಟ್ಟಡ ಗಳನ್ನಾಗಿ ಪರಿವರ್ತಿಸಿ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡುತ್ತಿದ್ದರೂ ಗ್ರಾಪಂ ಆಡಳಿತವಾಗಲಿ, ಅಧಿಕಾರಗಳಾಗಲಿ ಗಮನಹರಿಸುತ್ತಿಲ್ಲ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ ಆರೋಪಿಸಿದರು. ನಗರದ ತಾಪಂ ಆವರಣದಲ್ಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ದನಿ ಎತ್ತಿದ ಅವರು, ಸಂಬಂಧಪಟ್ಟ ಅಧಿಕಾರಿ ಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು….

ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಅಧಿಕೃತ
ಮೈಸೂರು

ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಅಧಿಕೃತ

December 1, 2018

ಮೈಸೂರು:  ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ದುರ್ಬಳಕೆ ಮಾಡಿ ಕೊಳ್ಳುತ್ತಿರುವ ಬಗ್ಗೆ ದಾಖಲಿಸಿದ್ದ ಮೊಕದ್ದಮೆ ಸಂಬಂಧ ಸಂಘಟನೆಯ ಹೆಸರನ್ನು ಅನಧಿ ಕೃತ ವ್ಯಕ್ತಿಗಳು ಬಳಸದಂತೆ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಶಾಶ್ವತ ತಡೆಯಾಜ್ಞೆ ನೀಡಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್‍ಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆಯು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕಾರ ನೋಂದಣಿಯಾಗಿದೆ. ಟಿ.ಎ.ನಾರಾಯಣಗೌಡ ವೇದಿಕೆಯ ರಾಜ್ಯಾಧ್ಯಕ್ಷರಾಗಿ ದ್ದಾರೆ. ಆದರೆ ಸಂಘದ…

ಪಪಂ ಆಡಳಿತದಿಂದ ಗೌರವ ಧನ: ಪ್ರತಿಭಟನೆ ಹಿಂಪಡೆದ ಪೌರಕಾರ್ಮಿರು
ಮೈಸೂರು

ಪಪಂ ಆಡಳಿತದಿಂದ ಗೌರವ ಧನ: ಪ್ರತಿಭಟನೆ ಹಿಂಪಡೆದ ಪೌರಕಾರ್ಮಿರು

December 1, 2018

ಸರಗೂರು: ಪಟ್ಟಣ ಪಂಚಾಯ್ತಿ ಅಧ್ಯಕ್ಷರು-ಉಪಾಧ್ಯಕ್ಷರು, ಸದಸ್ಯರು ಗೌರವ ಧನ ನೀಡಿ ಕರ್ತವ್ಯದಲ್ಲಿ ತೊಡಗಲು ಮನವಿ ಮಾಡಿದ ಹಿನ್ನೆಲೆ ವೇತನಕ್ಕಾಗಿ ಪಪಂ ಮುಂದೆ ಪೌರಕಾರ್ಮಿರು ಮೂರು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಹಿಂಪಡೆದರು. ಮೂರು ದಿನಗಳಿಂದ ಪಟ್ಟಣದಲ್ಲಿ ಸ್ವಚ್ಛತೆ, ಕುಡಿ ಯುವ ನೀರು ರಸ್ತೆ ಚರಂಡಿ ನಿರ್ವಹಣೆ ಹಾಗೂ ಬೀದಿ ದೀಪಗಳ ನಿರ್ವಹಣೆ ಇಲ್ಲದೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರು. ತಾಲೂಕಿನ ಶಾಸಕರು ಪ್ರತಿಭಟನಾಕಾರರನ್ನು ಮನವಲಿಸುವ ಪ್ರಯತ್ನ ವಿಫಲವಾಗಿತ್ತು. ಪಟ್ಟಣದ ನಾಗರಿಕರ ಹಿತದೃಷ್ಟಿಯಿಂದ ಇಂದು ಪಪಂ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರ ಗೌರವ…

ಬಸ್‍ಗೆ ಲಾರಿ ಡಿಕ್ಕಿ: ಹಲವರಿಗೆ ಗಾಯ
ಮೈಸೂರು

ಬಸ್‍ಗೆ ಲಾರಿ ಡಿಕ್ಕಿ: ಹಲವರಿಗೆ ಗಾಯ

December 1, 2018

ಮೈಸೂರು:  ಲಾರಿಯೊಂದು ಸಾರಿಗೆ ಸಂಸ್ಥೆ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ 9 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮೈಸೂರಿನ ರಿಂಗ್ ರಸ್ತೆಯಲ್ಲಿ ಗುರುವಾರ ಸಂಜೆ ನಡೆದಿದೆ. ಬಸ್‍ನಲ್ಲಿದ್ದ ಲಕ್ಷ್ಮೀ, ಸಿದ್ದರಾಜಮ್ಮ, ಶಿವಸ್ವಾಮಿ, ನೂರ್ ಅಸ್ಮಾ, ಮಂಗಳ, ಸುಧಾ, ಅಕ್ಷತಾ, ಶ್ರೀನಿವಾಸ್ ಹಾಗೂ ಮಹದೇವ ಅವರಿಗೆ ಸಣ್ಣಪುಟ್ಟ ಗಾಯ ಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮೈಸೂರಿನಿಂದ ಮಳವಳ್ಳಿಗೆ ಸಂಚರಿಸುತ್ತಿದ್ದ ಪಾಂಡವ ಪುರ ಡಿಪೋಗೆ ಸೇರಿದ ಬಸ್(ಕೆಎ-11, ಎಫ್-0170) ರಿಂಗ್ ರಸ್ತೆ ದೇವೇ ಗೌಡ ವೃತ್ತದ ಬಳಿ ಹೋಗುತ್ತಿದ್ದಾಗ, ಕೊಲಂಬಿಯಾ…

ಬ್ಯಾಂಕಿಗೆ ಸುಳ್ಳು ದಾಖಲೆ ನೀಡಿ 9 ಲಕ್ಷ ರೂ. ವಂಚನೆ: ಉದ್ಯಮಿಗೆ ಜೈಲು ಶಿಕ್ಷೆ
ಮೈಸೂರು

ಬ್ಯಾಂಕಿಗೆ ಸುಳ್ಳು ದಾಖಲೆ ನೀಡಿ 9 ಲಕ್ಷ ರೂ. ವಂಚನೆ: ಉದ್ಯಮಿಗೆ ಜೈಲು ಶಿಕ್ಷೆ

December 1, 2018

ಮೈಸೂರು: ಬ್ಯಾಂಕಿಗೆ ಸುಳ್ಳು ದಾಖಲೆ ನೀಡಿ 9 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಗೆ ಮೈಸೂರಿನ 1ನೇ ಸಿಜೆಎಂ ನ್ಯಾಯಾಲಯ 1 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮೈಸೂರು ಬಸವೇಶ್ವರ ರಸ್ತೆ ಮಕ್ಕಂ ಟ್ರೇಡರ್ಸ್ ಮಾಲೀಕ ಎಂ.ಎನ್.ಮೋಹನ್ ಗುಪ್ತ ಶಿಕ್ಷೆಗೊಳಗಾದವರು. ಇವರು ಚಾಮುಂಡಿಪುರಂನ ಕರ್ಣಾಟಕ ಬ್ಯಾಂಕ್‍ನಿಂದ 9 ಲಕ್ಷ ರೂ. ಓ.ಡಿ. ಸೌಲಭ್ಯ ಪಡೆಯಲು ಬೆಂಗಳೂರಿನ ಬೃಂದಾರಾಣಿ ಮತ್ತು ಎಂ.ನಾಗರಾಜು ಎಂಬುವರ ಹೆಸರಿಗೆ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ…

ಆಟೋರಿಕ್ಷಾ-ಬೈಕ್ ಮುಖಾಮುಖಿ ಡಿಕ್ಕಿ: ಓರ್ವ ಸಾವು
ಮೈಸೂರು

ಆಟೋರಿಕ್ಷಾ-ಬೈಕ್ ಮುಖಾಮುಖಿ ಡಿಕ್ಕಿ: ಓರ್ವ ಸಾವು

December 1, 2018

ಕುಶಾಲನಗರ: ಸಂಬಂಧಿಕರ ಅಂತ್ಯಸಂಸ್ಕಾರಕ್ಕೆಂದು ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಗುರುವಾರ ರಾತ್ರಿ ಆನೆಕಾಡು ಬಳಿ ನಡೆದಿದೆ. ಮಡಿಕೇರಿ ನಗರಸಭೆಯ ಟ್ರ್ಯಾಕ್ಟರ್ ಚಾಲಕ ಮೂಲತಃ ಕೇರಳಾಪುರ ಸಮೀಪದ ಹೊನ್ನೇನಳ್ಳಿಯ ನಿವಾಸಿಯಾಗಿದ್ದ ಚಂದ್ರು (50) ಸಾವ ನ್ನಪ್ಪಿರುವ ವ್ಯಕ್ತಿ. ಬೈಕ್ ಮತ್ತು ಆಟೋರಿಕ್ಷಾ ನಡುವೆ ನಡೆದ ಅಪ ಘಾತದಲ್ಲಿ ಕುಶಾಲನಗರ ಬಳಿಯ ಓಲ್ಡ್ ಹೌಸಿಂಗ್ ಬೋರ್ಡ್ ಸಮೀಪದ ನಿವಾಸಿ ಅಸ್ಕರ್ (27), ಆತನ ಪತ್ನಿ ಮುನ್ಸೀರಾ…

ಕೊಡಗಿನ ನಿರಾಶ್ರಿತರ ಮನೆ ನಿರ್ಮಾಣಕ್ಕೆ ಡಿ.8ರಂದು ಸಿಎಂ ಹೆಚ್‍ಡಿಕೆ ಶಂಕುಸ್ಥಾಪನೆ
ಮೈಸೂರು

ಕೊಡಗಿನ ನಿರಾಶ್ರಿತರ ಮನೆ ನಿರ್ಮಾಣಕ್ಕೆ ಡಿ.8ರಂದು ಸಿಎಂ ಹೆಚ್‍ಡಿಕೆ ಶಂಕುಸ್ಥಾಪನೆ

November 30, 2018

ಮೈಸೂರು: ಕೊಡಗಿ ನಲ್ಲಿ ಸಂಭವಿಸಿದ ನೈಸರ್ಗಿಕ ವಿಪತ್ತಿನಿಂದ ಮನೆ ಕಳೆದುಕೊಂಡ ನಿರಾಶ್ರಿತ ಕುಟುಂಬ ಗಳಿಗೆ ಸರ್ಕಾರ ಮನೆ ಕಟ್ಟಿಕೊಡುವ ಯೋಜನೆ ಯನ್ನು ರೂಪಿಸಿದೆ ಎಂದು ನಗರಾಭಿ ವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಕಚೇರಿಯಲ್ಲಿ ಮುಡಾ ಅದಾಲತ್ ನಡೆಸಿದ ಸಚಿವರು, ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡುತ್ತಿದ್ದರು. ನೈಸರ್ಗಿಕ ವಿಪತ್ತಿನಲ್ಲಿ ನಿರಾ ಶ್ರಿತರಾದವರ ಕುಟುಂಬಗಳನ್ನು ಈಗಾ ಗಲೇ ಗುರುತಿಸಲಾಗಿದ್ದು, 2 ಬೆಡ್‍ರೂಮಿನ ಸುಸಜ್ಜಿತ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು. ಡಿಸೆಂಬರ್ 8ರಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೊಡಗು…

ಮೊಬೈಲ್ ಟವರ್‍ಗಳ ತಡೆಗೆ ಕ್ರಮ
ಮೈಸೂರು

ಮೊಬೈಲ್ ಟವರ್‍ಗಳ ತಡೆಗೆ ಕ್ರಮ

November 30, 2018

ಮೈಸೂರು: ಮೈಸೂರು-ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗಿದ್ದು, 3 ತಿಂಗಳ ಒಳಗೆ ಟವರ್‍ಗಳ ನೋಂದಣಿ ಮಾಡಿಸದಿದ್ದರೆ, ಕಿತ್ತೊಗೆಯುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಮೈಸೂರಿನ ಮುಡಾ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಟವರ್‍ಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ ಯಲ್ಲಿ ಹಲವು ದೂರುಗಳು ಸಲ್ಲಿಕೆಯಾಗಿವೆ. ಇದನ್ನು ಮನಗಂಡು ಮೊಬೈಲ್ ಟವರ್‍ಗಳ ಹಾವಳಿಯನ್ನು ನಿಯಂತ್ರಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ಎಲ್ಲೆಲ್ಲಿ, ಎಷ್ಟೆಷ್ಟು…

ಸ್ನೇಹಿತನ ಹುಟ್ಟುಹಬ್ಬಕ್ಕೆ ಕೇಕ್ ತರಲು ಹೋದ ಯುವಕ ಬೈಕ್‍ನಿಂದ ಬಿದ್ದು ಸಾವು
ಮೈಸೂರು

ಸ್ನೇಹಿತನ ಹುಟ್ಟುಹಬ್ಬಕ್ಕೆ ಕೇಕ್ ತರಲು ಹೋದ ಯುವಕ ಬೈಕ್‍ನಿಂದ ಬಿದ್ದು ಸಾವು

November 30, 2018

ಮೈಸೂರು: ಸ್ನೇಹಿತನ ಹುಟ್ಟು ಹಬ್ಬ ಆಚರಿಸಲು ಕೇಕ್ ತರಲೆಂದು ತೆರಳಿದ್ದ ಯುವಕ ಬೈಕಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ಸಂಭವಿಸಿದೆ. ಮೈಸೂರಿನ ಶಾರದಾದೇವಿನಗರ ನಿವಾಸಿ ಹರ್ಷಕುಮಾರ ಸಿಂಗ್ (28) ಸಾವನ್ನಪ್ಪಿದ ಯುವಕ ನವೆಂಬರ್ 25ರಂದು ಸಂಜೆ ತನ್ನ ಬೈಕಿನಲ್ಲಿ ಸ್ನೇಹಿತನ ಬರ್ತ್‍ಡೇಗೆ ಕೇಕ್ ತರಲೆಂದು ಹೋಗುತ್ತಿದ್ದಾಗ ಕೆ.ಆರ್. ಆಸ್ಪತ್ರೆ ಬಳಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಆಯ ತಪ್ಪಿ ಬಿದ್ದಿದ್ದರು. ತಲೆಗೆ ತೀವ್ರ ಗಾಯಗಳಾಗಿದ್ದ ಹರ್ಷಕುಮಾರ ಸಿಂಗ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ…

ಡಿ.10ರಂದು ಸರ್ಕಾರದ ವಿರುದ್ಧ  ಬಿಜೆಪಿ ಬೃಹತ್ ರೈತ ಸಮಾವೇಶ
ಮೈಸೂರು

ಡಿ.10ರಂದು ಸರ್ಕಾರದ ವಿರುದ್ಧ  ಬಿಜೆಪಿ ಬೃಹತ್ ರೈತ ಸಮಾವೇಶ

November 30, 2018

ಬೆಂಗಳೂರು: ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಡಿಸೆಂಬರ್ 10ರಂದು ಬೃಹತ್ ರೈತ ಸಮಾವೇಶ ನಡೆಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ. ಪಕ್ಷದ ಶಾಸಕಾಂಗ ಸಭೆ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೃಷಿ ಸಾಲ ಮನ್ನಾ, ಕಬ್ಬು ಬೆಳೆಗಾರರ ಬಾಕಿ ಪಾವತಿ, ಭತ್ತ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸದಿರುವುದನ್ನು ವಿರೋಧಿಸಿ ಬೆಳಗಾವಿಯಲ್ಲಿ ಸಮಾವೇಶ ನಡೆಸಲಾಗುವುದು ಎಂದರು. ಮೈತ್ರಿ ಸರ್ಕಾರದಲ್ಲಿ ಭಾಗಿಯಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ವಿಧಾನಸಭಾ ಚುನಾವಣಾ ಪೂರ್ವ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದ…

1 1,257 1,258 1,259 1,260 1,261 1,611
Translate »