ಮನೆ ಕಟ್ಟಡಕ್ಕೆ ಲೈಸನ್ಸ್ ಪಡೆದು ವಾಣಿಜ್ಯ ಕಟ್ಟಡ ನಿರ್ಮಾಣದಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ; ಆರೋಪ
ಮೈಸೂರು

ಮನೆ ಕಟ್ಟಡಕ್ಕೆ ಲೈಸನ್ಸ್ ಪಡೆದು ವಾಣಿಜ್ಯ ಕಟ್ಟಡ ನಿರ್ಮಾಣದಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ; ಆರೋಪ

December 1, 2018

ನಂಜನಗೂಡು: ನಗರದ ದೇವಿರಮ್ಮನಹಳ್ಳಿ ಪಂಚಾಯಿತಿ ಸೇರಿದಂತೆ ಕೆಲ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಕಟ್ಟಲು ಲೈಸನ್ಸ್ ಪಡೆದು ನಂತರ ವಾಣಿಜ್ಯ ಕಟ್ಟಡ ಗಳನ್ನಾಗಿ ಪರಿವರ್ತಿಸಿ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡುತ್ತಿದ್ದರೂ ಗ್ರಾಪಂ ಆಡಳಿತವಾಗಲಿ, ಅಧಿಕಾರಗಳಾಗಲಿ ಗಮನಹರಿಸುತ್ತಿಲ್ಲ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ ಆರೋಪಿಸಿದರು.
ನಗರದ ತಾಪಂ ಆವರಣದಲ್ಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ದನಿ ಎತ್ತಿದ ಅವರು, ಸಂಬಂಧಪಟ್ಟ ಅಧಿಕಾರಿ ಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನಪ್ರತಿ ನಿಧಿಗಳನ್ನು ಕಡೆಗಣಿಸಿ ಅಧಿಕಾರಿಗಳು ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಅಧ್ಯಕ್ಷ ಮಹಾದೇವಪ್ಪ, ಉಪಾಧ್ಯಕ್ಷ ಗೋವಿಂದರಾಜನ್ ಹಾಗೂ ಸ್ಥಾಯಿ ಸಮಿತಿ ಅಧÀ್ಯಕ್ಷ ಶಿವಣ್ಣ ಅಧಿಕಾರಿಗಳನ್ನು ಇದೇ ವೇಳೆ ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಕಲಾವತಿ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಈಗಾಗಲೇ ಒಂದು ಹೆಚ್1 ಎನ್1 ಪ್ರಕರಣ ವರದಿಯಾಗಿದ್ದು, ಕಾಯಿಲೆಯಿಂದ ಸೂರಳ್ಳಿ ಮಹಿಳೆ ಅಸುನೀಗಿ ದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸ ಲಾಗುತ್ತಿದೆ. ಯಾವುದೇ ರೀತಿಯ ಡೆಂಗ್ಯೂ ಪ್ರಕರಣ ಕಂಡುಬಂದಿಲ್ಲ ಎಂದು ಮಾಹಿತಿ ನೀಡಿದರಲ್ಲದೆ, ಮಾತೃ ಪೂರ್ಣ ಯೋಜನೆ ಯಲ್ಲಿ ಅಪೌಷ್ಟಿಕತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಗರ್ಭಿಣಿಯರಿಗೆ ಪ್ರಸವ ಪೂರ್ವ, ನಂತರ ತಿಂಗಳಿಗೆ ಸಾವಿರದಂತೆ ಆರು ತಿಂಗಳು ಸಹಾಯಧನ ನೀಡಲಾಗುತ್ತಿದೆ. ಯಡಿಯಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಣೆ ಯನ್ನು ಉದ್ಬವ ಎನ್‍ಜಿಓ ಸಂಸ್ಥೆ ವಹಿಸಿದ್ದು, ಸಂಪೂರ್ಣ ನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ ಮಾತನಾಡಿ, ಕೂಡ್ಲಪುರ, ಕಳಲೆ, ಹೆಡತಲೆ ವೈದ್ಯಾಧಿಕಾರಿ ಗಳು ಕೇವಲ ಅರ್ಧ ದಿನ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ವ್ಯಾಪಕ ಅವ್ಯವಹಾರ ಕೇಳಿ ಬರುತ್ತಿದ್ದು. ಖುದ್ದು ಶಾಸಕರೇ ಪರಿಶೀಲಿಸಿ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪೂರೈಕೆ ಮಾಡುವುದನ್ನು ಖಂಡಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಮಕ್ಕಳು ತಿನ್ನುವ ಆಹಾರ ಕಳಪೆಯಿಂದ ಕೂಡಿದೆ. ಆಹಾರ ಪೂರೈಕೆಗೆ ಟೆಂಡರ್ ಕರೆಯಬೇಕು. ಅಲ್ಲದೆ ಸಾರಿಗೆಗೂ ಕೂಡ ನೂತನವಾಗಿ ಟಂಡರ್ ಕರೆಯಬೇಕು ಎಂದು ಆಗ್ರಹಿಸಿದರು.
ಶಿಶು ಅಧಿಕಾರಿ ಗೀತಾಲಕ್ಷ್ಮಿ ಮಾತಾನಾಡಿ, ಅಹಾರ ಪೂರೈಕೆಯಲ್ಲಿ ಯಾವುದೇ ಕಳಪೆ ಸಾಮಗ್ರಿ ಪೂರೈಸಿಲ್ಲ ಎಂದು ಸ್ಪಷ್ಟಪಡಿಸಿ ದರಲ್ಲದೆ, ಕಳೆದ ಏಳೆಂಟು ವರ್ಷದಿಂದ ಸಾರಿಗೆಗೆ ಟೆಂಡರ್ ಕರೆದಿಲ್ಲ. ಈ ಬಾರಿ ಟೆಂಡರ್ ಕರೆಯುವುದಾಗಿ ಸಮಜಾಯಿಸಿ ನೀಡಿದರು.

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಶ್ರೀನಿವಾಸ ಎಂಬ ವ್ಯಕ್ತಿ ಮುಕ್ತವಾಗಿ ಸಾಗುವಳಿ ಚೀಟಿ ನೀಡಲು ಬಡ ರೈತ ಮಹಿಳೆಯ ಬಳಿ 25,000 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಹಣ ನೀಡದೇ ಇದ್ದುದರಿಂದ ಆಕೆಗೆ ಇನ್ನು ಸಾಗುವಳಿ ಚೀಟಿ ನೀಡಿಲ್ಲ. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲಾ ಧಿಕಾರಿಗೆ ಪತ್ರ ಬರೆಯಬೇಕು ಎಂದು ಉಪತಹಶೀಲ್ದಾರ್ ಸುಬ್ರಹ್ಮಣ್ಯರಿಗೆ ನಿರ್ದೇ ಶನ ನೀಡಿದರು. ಕಾರ್ಯನಿರ್ವಹಣಾಧಿ ಕಾರಿ ಶ್ರೀಕಂಠೇರಾಜ್ ಅರಸ್ ಸೇರಿದಂತೆ ವಿವಿಧÀ ಇಲಾÁಖಾಧಿಕಾರಿಗಳಿದ್ದರು.

Translate »