ಬ್ಯಾಂಕಿಗೆ ಸುಳ್ಳು ದಾಖಲೆ ನೀಡಿ 9 ಲಕ್ಷ ರೂ. ವಂಚನೆ: ಉದ್ಯಮಿಗೆ ಜೈಲು ಶಿಕ್ಷೆ
ಮೈಸೂರು

ಬ್ಯಾಂಕಿಗೆ ಸುಳ್ಳು ದಾಖಲೆ ನೀಡಿ 9 ಲಕ್ಷ ರೂ. ವಂಚನೆ: ಉದ್ಯಮಿಗೆ ಜೈಲು ಶಿಕ್ಷೆ

December 1, 2018

ಮೈಸೂರು: ಬ್ಯಾಂಕಿಗೆ ಸುಳ್ಳು ದಾಖಲೆ ನೀಡಿ 9 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಗೆ ಮೈಸೂರಿನ 1ನೇ ಸಿಜೆಎಂ ನ್ಯಾಯಾಲಯ 1 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮೈಸೂರು ಬಸವೇಶ್ವರ ರಸ್ತೆ ಮಕ್ಕಂ ಟ್ರೇಡರ್ಸ್ ಮಾಲೀಕ ಎಂ.ಎನ್.ಮೋಹನ್ ಗುಪ್ತ ಶಿಕ್ಷೆಗೊಳಗಾದವರು. ಇವರು ಚಾಮುಂಡಿಪುರಂನ ಕರ್ಣಾಟಕ ಬ್ಯಾಂಕ್‍ನಿಂದ 9 ಲಕ್ಷ ರೂ. ಓ.ಡಿ. ಸೌಲಭ್ಯ ಪಡೆಯಲು ಬೆಂಗಳೂರಿನ ಬೃಂದಾರಾಣಿ ಮತ್ತು ಎಂ.ನಾಗರಾಜು ಎಂಬುವರ ಹೆಸರಿಗೆ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಮಂಜೂರಾಗಿ, ನೊಂದಣಿಯಾಗಿದ್ದ ನಿವೇಶನದ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ನಂತರದಲ್ಲಿ ಬೇರೆ ಇಬ್ಬರನ್ನು ಬೃಂದಾರಾಣಿ ಮತ್ತು ನಾಗರಾಜು ಎಂದು ಬ್ಯಾಂಕಿಗೆ ಸುಳ್ಳು ಮಾಹಿತಿ ಮತ್ತು ದಾಖಲೆಗಳನ್ನು ನೀಡಿ, 1999ರಲ್ಲಿ 9 ಲಕ್ಷ ರೂ. ಓ.ಡಿ ಪಡೆದಿದ್ದರು. ಆದರೆ, ಹಣವನ್ನು ಪಾವತಿಸದಿದ್ದರಿಂದ ಬ್ಯಾಂಕಿನವರು ಬೃಂದಾರಾಣಿ ಮತ್ತು ನಾಗರಾಜು ಅವರಿಗೆ ನೋಟೀಸ್ ನೀಡಿದ್ದರು. ಇದರಿಂದ ಭಯ ಗೊಂಡ ಇಬ್ಬರೂ ಬ್ಯಾಂಕಿಗೆ ಹಾಜರಾಗಿ ತಮ್ಮ ದಾಖಲೆ ಗಳನ್ನು ನೀಡಿ ತಾವು ಜಾಮೀನು ದಾರರಲ್ಲ ಎಂದು ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಗಿರಿಧರ್ ಎಂ.ದೇಸಾಯಿ ಅವರು ಕೆ.ಆರ್.ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾ ಧೀಶರಾದ ಯಶವಂತ್ ಕುಮಾರ್, ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರ ಅಭಿಯೋ ಜಕ ಕೆ.ಎಂ.ಸಿ.ಶಿವಶಂಕರಮೂರ್ತಿ ವಾದಿಸಿದ್ದರು.

Translate »