ಮೈಸೂರು: ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್‍ಟಿಸಿ) ನೌಕರರ ಸಮಸ್ಯೆಗಳನ್ನು ಪರಿ ಹರಿಸಲು ನನ್ನಿಂದ ಸಾಧ್ಯವಾಗದಿದ್ದರೇ ಅಧಿಕಾರದಿಂದ ಕೆಳಗಿಳಿಯುತ್ತೇನೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು. ನಗರದ ಜಗನ್ಮೋಹನ ಅರಮನೆಯಲ್ಲಿ ಕೆಎಸ್‍ಆರ್‍ಟಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗಗಳ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಗುರುವಾರ ಆಯೋ ಜಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ನನಗೆ ಅಧಿಕಾರದ ಮೇಲೆ ಆಸೆ ಇಲ್ಲ. ನಾನು ಯಾರಿಗೂ ಹೆದರುವುದೂ ಇಲ್ಲ….
ಯುವ ಜನೋತ್ಸವದಲ್ಲಿ ಸಾಂಸ್ಕøತಿಕ ಸೊಬಗು ಅನಾವರಣ
November 30, 2018ಮೈಸೂರು: ಬಗೆಬಗೆಯ ನೃತ್ಯ, ನಾನಾ ಗಾಯನ, ವೈವಿಧ್ಯಮಯ ವಾದ್ಯ ಸಂಗೀತದ ಮೋಡಿಯ ಮೂಲಕ ಯುವ ಪ್ರತಿಭೆಗಳು ಸಾಂಸ್ಕøತಿಕ ಕಲಾ ಕೌಶಲ್ಯ ಮೆರೆದರು. ಮೈಸೂರಿನ ಜೆಕೆ ಮೈದಾನದ ಮೈಸೂರು ವೈದ್ಯ ಕೀಯ ಕಾಲೇಜಿನ ಅಮೃತ ಮಹೋತ್ಸವ ಭವನದಲ್ಲಿ ಈ ಬಗೆಯ ಸಾಂಸ್ಕøತಿಕ ಸೊಬಗು ಅನಾವರಣ ಗೊಂಡು ನೋಡುಗರ ಮನಸೂರೆಗೊಂಡಿತು. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯು ಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ ಹಾಗೂ ಮೈಸೂರು…
ಡಿ.23ರಂದು ಸಂತೆ ಶಿವರದಲ್ಲಿ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರಿಂದ ಸಂವಾದ ಕಾರ್ಯಕ್ರಮ
November 30, 2018ಬೆಂಗಳೂರು: ಮೈಸೂರಿನ ಖ್ಯಾತ ಕಾದಂಬರಿಕಾರರು, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತರು ಹಾಗೂ ಸಾಹಿತ್ಯ ದಿಗ್ಗಜರಾದ ಡಾ. ಎಸ್.ಎಲ್.ಭೈರಪ್ಪನವರು ಯುವ ಮತ್ತು ಉದ ಯೋನ್ಮುಖ ಕನ್ನಡ ಕಾದಂಬರಿಕಾರರೊಂದಿಗೆ ಡಿ. 23ರಂದು ತಮ್ಮ ಹುಟ್ಟೂರಾದ ಸಂತೆ ಶಿವರದಲ್ಲಿ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೌರಮ್ಮ ಟ್ರಸ್ಟ್ ಆಶ್ರಯದಲ್ಲಿ ಯುವ ಮತ್ತು ಹವ್ಯಾಸಿ ಬರಹಗಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಂತಹ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಒಂದು ದಿನದ ಕಾರ್ಯಾಗಾರದಲ್ಲಿ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು…
ನಾಳೆ `ಅಂಬಿ ನಮನ- ಕಲ್ಯಾಣ ಗಾನ ಲಹರಿ’
November 30, 2018ಮೈಸೂರು: ನಟ, ಮಾಜಿ ಸಚಿವ ಅಂಬರೀಶ್ ಅವರ ಸಾಧನೆ ಯನ್ನು ಸ್ಮರಿಸಿ, ಹಳೇ ಹಾಡುಗಳ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಪರಿವರ್ತನಂ ಟ್ರಸ್ಟ್ ಡಿ.1ರಂದು ಸಂಜೆ 5.30 ಗಂಟೆಗೆ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ `ಅಂಬಿ ನಮನ – ಕಲ್ಯಾಣ ಗಾನ ಲಹರಿ’ ಕಾರ್ಯಕ್ರಮ ಆಯೋಜಿಸಿದೆ. ಟ್ರಸ್ಟ್ ಉಪಾಧ್ಯಕ್ಷ ಅಜಯ್ ಶಾಸ್ತ್ರಿ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿ, ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಚಿತ್ರ ಸಾಹಿತ್ಯ ಹಾಡುಗಳ ಮೂಲಕ ಮತ್ತು…
ರೈತ ಸಮಸ್ಯೆ ಚರ್ಚೆಗಾಗಿ ವಿಶೇಷ ಸಂಸತ್ ಅಧಿವೇಶನಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ
November 30, 2018ಮೈಸೂರು: ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಕೃಷಿ ಕ್ಷೇತ್ರದ ತೊಡಕುಗಳನ್ನು ನಿವಾರಿಸು ವುದಕ್ಕೆ ಚರ್ಚಿಸಲು ಸಂಬಂಧಿಸಿ ಕೂಡಲೇ ಕೇಂದ್ರ ಸರ್ಕಾರ ವಿಶೇಷ ಸಂಸತ್ ಅಧಿವೇ ಶನ ಕರೆಯುವಂತೆ ಆಗ್ರಹಿಸಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಪ್ರಾಂತ್ಯ ರೈತ ಸಂಘದ ವತಿಯಿಂದ ಗುರುವಾರ ನಡೆದ ಪ್ರತಿಭಟನೆಯಲ್ಲಿ ಹಲವಾರು ರೈತ ಮುಖಂ ಡರು ಪಾಲ್ಗೊಂಡು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು…
ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಫೆಲೋ ಆಗಿ ಆಯ್ಕೆಯಾಗಿರುವ ಗುಲ್ಬರ್ಗ ವಿವಿ ಕುಲಪತಿ ಪ್ರೊ.ಎಸ್.ಆರ್.ನಿರಂಜನರಿಗೆ ಇಂದು ಅಭಿನಂದನಾ ಕಾರ್ಯಕ್ರಮ
November 30, 2018ಮೈಸೂರು: ಜೀವ ವಿಜ್ಞಾನ ಸಂಶೋ ಧನಾ ಕ್ಷೇತ್ರದ ಕೊಡುಗೆಯಾಗಿ ರಾಷ್ಟ್ರೀಯ ವಿಜ್ಞಾನ ಅಕಾ ಡೆಮಿಯ ಫೆಲೋ ಆಗಿ ನೇಮಕಗೊಂಡಿರುವ ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ ಅವರಿಗೆ ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘ, ಡಾ.ಎಸ್.ಆರ್.ನಿರಂಜನ ಅಭಿನಂದನಾ ಸಮಿತಿಯಿಂದ ಡಿ.1ರಂದು ಅಭಿನಂದಿಸಲಾಗುವುದು ಎಂದು ಸಮಿತಿಯ ಡಾ.ವಸಂತಕುಮಾರ್ ತಿಮಕಾಪುರ ಇಂದಿಲ್ಲಿ ತಿಳಿಸಿದರು. ಅಂದು ಸಂಜೆ 4 ಗಂಟೆಗೆ ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರೊ.ಎಸ್.ಆರ್.ನಿರಂಜನ ಅವರನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸನ್ಮಾನಿಸುವರು. ಬೆಂಗಳೂರು ವಿವಿ ವಿಶ್ರಾಂತ…
ಮಹಿಳಾ ಸಬಲೀಕರಣ ಅಳೆಯಲು ಸರಿಯಾದ ಮಾನದಂಡ ಅಗತ್ಯ
November 30, 2018ಮೈಸೂರು: ಮಹಿಳಾ ಸಬಲೀಕರಣವನ್ನು ಕೇವಲ ಬಾಯಲ್ಲಿ ಹೇಳುವ ಬದಲು ಸಮರ್ಪಕವಾಗಿ ಕಾರ್ಯ ಗತಗೊಳಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮೈಸೂರು ಪೊಲೀಸ್ ತರ ಬೇತಿ ಶಾಲೆಯ ಪ್ರಾಂಶುಪಾಲರಾದ ಡಾ. ಧರಣೀದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು. ಮಹಾರಾಣಿ ಮಹಿಳಾ ಕಲಾ ಕಾಲೇ ಜಿನ ಎನ್‍ಎಸ್‍ಎಸ್, ಮೈಸೂರು ವಿಶ್ವ ವಿದ್ಯಾನಿಲಯದ ಎನ್‍ಎಸ್‍ಎಸ್, ಕ್ರೆಡಿಟ್- ಐ ಸಂಸ್ಥೆಗಳು ರಾಷ್ಟ್ರೀಯ ಸೇವಾ ಯೋಜ ನೆಯ ಸುವರ್ಣ ಮಹೋತ್ಸವದ ಅಂಗವಾಗಿ ಮೈಸೂರಿನ ಪುರಭವನದಲ್ಲಿ ಏರ್ಪಡಿ ಸಿದ್ದ `ಮಹಿಳಾ ಸಬಲೀಕರಣ’ ಕುರಿತ ರಾಜ್ಯ ಮಟ್ಟದ ವಿಚಾರ…
ನಾಳೆಯಿಂದ ಮಾನಸಿಕ, ದೈಹಿಕ ಯೋಗಕ್ಷೇಮ ಕುರಿತ ಬೃಹತ್ ಮೇಳ, ಸಂಗೀತ ಸಂಜೆ
November 30, 2018ಮೈಸೂರು: ಮೈಸೂರು ಲಯನ್ಸ್ ಕ್ಲಬ್ ಆಫ್ ವೆಸ್ಟ್ ವತಿಯಿಂದ ಡಿ.1 ಮತ್ತು 2ರಂದು ಮೈಸೂರಿನ ಜೆ.ಕೆ.ಮೈದಾನದಲ್ಲಿ ಮಾನಸಿಕ, ದೈಹಿಕ ಯೋಗಕ್ಷೇಮ ಕುರಿತಂತೆ ಬೃಹತ್ ಮೇಳ ಮತ್ತು ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಧರ್ಮೇಂದ್ರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.1ರಂದು ಬೆಳಿಗ್ಗೆ ಯೋಗಾಸನ, ಅಡುಗೆ ಮತ್ತು ನೃತ್ಯ ಸ್ಪರ್ಧೆಗಳಿರುತ್ತವೆ. ಸಂಜೆ 6 ಗಂಟೆಗೆ ಕವಿ, ಸಾಹಿತಿ ಜಯಂತ್ ಕಾಯ್ಕಿಣಿ ರಚಿಸಿರುವ ಕೆಲವು ಅಪರೂಪದ ಆಯ್ದೆ ಹಾಡುಗಳ ಸಂಗೀತ…
ನವೀಕೃತ ಇಎಸ್‍ಐ ಆಸ್ಪತ್ರೆ ಲೋಕಾರ್ಪಣೆ
November 29, 2018ಮೈಸೂರು: ಮೈಸೂರಿನ ಬಹು ನಿರೀಕ್ಷಿತ ನವೀಕೃತ ಇಎಸ್‍ಐ ಆಸ್ಪತ್ರೆ ನೂತನ ಕಟ್ಟಡವನ್ನು ರಾಜ್ಯ ಕಾರ್ಮಿಕ ಸಚಿವ ವೆಂಕಟರಮಣಪ್ಪ ಉದ್ಘಾಟಿಸಿದರು. ಕಾರ್ಮಿಕ ರಾಜ್ಯ ವಿಮಾ ನಿಗಮದಿಂದ ಕೇಂದ್ರ ಸರ್ಕಾರದ 35 ಕೋಟಿ ರೂ. ವೆಚ್ಚ ದಲ್ಲಿ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನವೀಕೃತ ಇಎಸ್‍ಐ ಆಸ್ಪತ್ರೆ ನೂತನ ಕಟ್ಟಡಕ್ಕೆ 2011ರ ಫೆಬ್ರವರಿ 19ರಂದು ಅಂದಿನ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಆರಂಭದಲ್ಲಿ ಕೇಂದ್ರದ ಕಾರ್ಮಿಕ ಸಚಿ ವಾಲಯದಿಂದ…
ಸಚಿವ ವೆಂಕಟರಮಣಪ್ಪ, ಸಂಸದ ಪ್ರತಾಪ್ ಸಿಂಹ ಜಟಾಪಟಿ
November 29, 2018ಮೈಸೂರು: ಇಎಸ್‍ಐ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ ನೇಮಕ ವಿಚಾರವಾಗಿ ಸಚಿವ ವೆಂಕಟರಮಣಪ್ಪ ಮತ್ತು ಸಂಸದ ಪ್ರತಾಪ್ ಸಿಂಹ ವೇದಿಕೆಯಲ್ಲೇ ಜಟಾಪಟಿ ನಡೆಸಿದ ಪ್ರಸಂಗ ಇಂದು ನಡೆಯಿತು. ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿ ನಿರ್ಮಿಸಿರುವ 35 ಕೋಟಿ ರೂ. ವೆಚ್ಚದ ಇಎಸ್‍ಐ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉಭಯ ನಾಯಕರ ನಡುವೆ ಆಸ್ಪತ್ರೆಗೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಒದಗಿಸಬೇಕೆಂಬ ವಿಷಯದ ಸಂಬಂಧ ಪರಸ್ಪರ ವಾಕ್ಸಮರ ನಡೆಯಿತು. ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ…