ಡಿ.23ರಂದು ಸಂತೆ ಶಿವರದಲ್ಲಿ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರಿಂದ ಸಂವಾದ ಕಾರ್ಯಕ್ರಮ
ಮೈಸೂರು

ಡಿ.23ರಂದು ಸಂತೆ ಶಿವರದಲ್ಲಿ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರಿಂದ ಸಂವಾದ ಕಾರ್ಯಕ್ರಮ

November 30, 2018

ಬೆಂಗಳೂರು:  ಮೈಸೂರಿನ ಖ್ಯಾತ ಕಾದಂಬರಿಕಾರರು, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತರು ಹಾಗೂ ಸಾಹಿತ್ಯ ದಿಗ್ಗಜರಾದ ಡಾ. ಎಸ್.ಎಲ್.ಭೈರಪ್ಪನವರು ಯುವ ಮತ್ತು ಉದ ಯೋನ್ಮುಖ ಕನ್ನಡ ಕಾದಂಬರಿಕಾರರೊಂದಿಗೆ ಡಿ. 23ರಂದು ತಮ್ಮ ಹುಟ್ಟೂರಾದ ಸಂತೆ ಶಿವರದಲ್ಲಿ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೌರಮ್ಮ ಟ್ರಸ್ಟ್ ಆಶ್ರಯದಲ್ಲಿ ಯುವ ಮತ್ತು ಹವ್ಯಾಸಿ ಬರಹಗಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಂತಹ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಒಂದು ದಿನದ ಕಾರ್ಯಾಗಾರದಲ್ಲಿ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು ಕಾದಂಬರಿ ಬರೆಯುವ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಯುವಕರು ಕಾದಂಬರಿಗಳನ್ನು ಬರೆಯಲು ಆಸಕ್ತಿ ತೋರಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಯುವ ಬರಹಗಾರರಿಗೆ ಕಾದಂಬರಿ ಬರೆಯಲು ಬೇಕಾಗುವ ಮಾರ್ಗದರ್ಶನ ಮತ್ತು `ಕಾದಂಬರಿ ಬರೆಯುವುದು ಹೇಗೆ’ ಎಂಬುದರ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಕಾರ್ಯಾಗಾರದಲ್ಲಿ ಸಾಮಾನ್ಯ ಸಾಹಿತ್ಯ ಬರವಣಿಗೆ ಮತ್ತು ಕಾದಂಬರಿ ಬರ ವಣಿಗೆಯಲ್ಲಿನ ವಿವಿಧ ದೃಷ್ಟಿಕೋನಗಳು ಅದರಲ್ಲೂ ಪಾತ್ರಗಳ ಸೃಷ್ಟಿ, ಜಟಿಲತೆ, ಭಾವನೆ, ಥೀಮ್, ಸಂಘರ್ಷ ಮತ್ತು ಸಾಮಾಜಿಕ ಪ್ರಸ್ತುತತೆ ಕುರಿತು ಚರ್ಚಿಸಲಾಗುವುದು.
ಪ್ರತಿ ವರ್ಷ ಸಂತೆ ಶಿವರ ಮತ್ತು ಡಾ. ಎಸ್.ಎಲ್. ಭೈರಪ್ಪನವರ ಅಭಿಮಾನಿಗಳು, ಗೌರಮ್ಮ ಟ್ರಸ್ಟ್ ಆಶ್ರಯದಲ್ಲಿ ಸಂತೆ ಶಿವರದಲ್ಲಿ ಸಾಂಸ್ಕøತಿಕ ಮತ್ತು ಸಾಮಾಜಿಕ ಕಾರ್ಯ ಕ್ರಮಗಳನ್ನು ನಡೆಸುತ್ತಾ ಬಂದಿವೆ. 20ರಿಂದ 40 ವರ್ಷ ವಯೋಮಾನದವರು ಮತ್ತು ಕನಿಷ್ಠ ಪಕ್ಷ ಒಂದು ಪುಸ್ತಕವನ್ನು ಬರೆದು ಪ್ರಕಟಿಸಿರುವವರು ಕಾರ್ಯಾಗಾರದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಪ್ರಥಮ ಕೃತಿಯನ್ನು ಬರೆಯಲು ಆರಂಭಿಸಿರು ವವರು ಕೂಡ ಭಾಗವಹಿಸಬಹುದು. ಕಾರ್ಯಾಗಾರದ ನೋಂದಣಿಗೆ 50 ಮಂದಿ ಯನ್ನು ಮಾತ್ರ ಆಯ್ಕೆ ಮಾಡಲಾಗುವುದು. ಆಸಕ್ತರು ಇಮೇಲ್ ವಿವರ, ಹೆಸರು, ವಿಳಾಸ, ತಾವು ಬರೆಯುತ್ತಿರುವ ಪುಸ್ತಕದ ಹೆಸರು ಮತ್ತು ಪ್ರಕಾಶಕರು ಮತ್ತು ದೂ.ಸಂಖ್ಯೆಯನ್ನು ಬರೆದು [email protected] ಗೆ ಕಳುಹಿಸ ಬೇಕು. ಹೆಚ್ಚಿನ ಮಾಹಿತಿಗೆ ಮೊ. +91 9986688607 ಅನ್ನು ಸಂಪರ್ಕಿಸಬಹುದು.

Translate »