ಯುವ ಜನೋತ್ಸವದಲ್ಲಿ ಸಾಂಸ್ಕøತಿಕ ಸೊಬಗು ಅನಾವರಣ
ಮೈಸೂರು

ಯುವ ಜನೋತ್ಸವದಲ್ಲಿ ಸಾಂಸ್ಕøತಿಕ ಸೊಬಗು ಅನಾವರಣ

November 30, 2018

ಮೈಸೂರು:  ಬಗೆಬಗೆಯ ನೃತ್ಯ, ನಾನಾ ಗಾಯನ, ವೈವಿಧ್ಯಮಯ ವಾದ್ಯ ಸಂಗೀತದ ಮೋಡಿಯ ಮೂಲಕ ಯುವ ಪ್ರತಿಭೆಗಳು ಸಾಂಸ್ಕøತಿಕ ಕಲಾ ಕೌಶಲ್ಯ ಮೆರೆದರು. ಮೈಸೂರಿನ ಜೆಕೆ ಮೈದಾನದ ಮೈಸೂರು ವೈದ್ಯ ಕೀಯ ಕಾಲೇಜಿನ ಅಮೃತ ಮಹೋತ್ಸವ ಭವನದಲ್ಲಿ ಈ ಬಗೆಯ ಸಾಂಸ್ಕøತಿಕ ಸೊಬಗು ಅನಾವರಣ ಗೊಂಡು ನೋಡುಗರ ಮನಸೂರೆಗೊಂಡಿತು.

ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯು ಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ ಹಾಗೂ ಮೈಸೂರು ಜಿಲ್ಲಾ ಮಟ್ಟದ ಯುವ ಜನೋತ್ಸವದಲ್ಲಿ ವಿವಿಧ ಶಾಲಾ-ಕಾಲೇಜು ಗಳ ಯುವ ಜನರು ತಮ್ಮ ಕಲಾ ನೈಪುಣ್ಯತೆ ಮೆರೆದರು.

ಭರತ ನಾಟ್ಯ, ನಾನಾ ಜನಪದ ನೃತ್ಯ ಪ್ರದರ್ಶನ, ಜನಪದ ಗೀತೆ ಗಾಯನ, ಶಾಸ್ತ್ರೀಯ ಸಂಗೀತ ಗಾಯನ ಮತ್ತು ಸಂಗೀತ ವಾದ್ಯಗಳ ನಾದಮಯ ಲೋಕ ಅನಾವರಣಗೊಂಡಿತು. ಶಾಸ್ತ್ರೀಯ ನೃತ್ಯಗಳಾದ ಭರತ ನಾಟ್ಯ, ಒಡಿಸ್ಸಿ, ಮಣಿಪುರಿ, ಕುಚುಪುಡಿ, ಕಥಕ್ ಪ್ರದರ್ಶನ ಗಮನ ಸೆಳೆದವು. ಶಾಸ್ತ್ರೀಯ ವಾದ್ಯ ಗಳಾದ ಸೀತಾರ್, ಕೊಳಲು, ತಬಲ, ವೀಣೆ, ಮೃದಂಗ, ಹಾರ್ಮೋನಿಯಂ, ಗಿಟಾರ್ ವಾದನ ಹಾಗೂ ಶಾಸ್ತ್ರೀಯ ಗಾಯನ ಕಲೆಯ ಸಂಭ್ರಮವನ್ನು ಸೃಷ್ಟಿಸಿತು.

ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನಾ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ಪರ್ಧೆಗಳಲ್ಲಿ ಹೆಣ್ಣು ಗಂಡು ಎಂಬ ಬೇಧ ಭಾವ ಮರೆತು ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವೇ ಹೊರತು ಗೆಲುವೊಂದೇ ಮುಖ್ಯವಲ್ಲ ಎಂದು ಕಿವಿಮಾತು ಹೇಳಿದರು.

ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಮಾತನಾಡಿ, ಪದವಿ ಗಳಿಸಿದರಷ್ಟೇ ವಿದ್ಯೆ ಸಂಪಾದಿಸಿ ದಂತಲ್ಲ. ಬದಲಾಗಿ ನೈತಿಕ ಮೌಲ್ಯಗಳೊಂದಿಗೆ ತನ್ನ ಸಮಾಜದ ಬದುಕನ್ನು ಅಸನು ಮಾಡುವ ಮನೋ ಭಾವ ಬೆಳೆಸಿಕೊಂಡವರೇ ನಿಜವಾದ ವಿದ್ಯಾವಂತರು ಹಾಗೂ ಜ್ಞಾನವಂತರು ಆಗಲಿದ್ದಾರೆ. ವಿವೇಕಾನಂದರು ಯುವಜನರೇ ದೇಶದ ಭವಿಷ್ಯ ಎಂದು ಹೇಳಿದ್ದರು. ಇದನ್ನು ನಮ್ಮ ಯುವ ಸಮುದಾಯ ಅರಿತು ಬಾಳಬೇಕು ಎಂದು ಸಲಹೆ ನೀಡಿದರು.

ಪಾಲ್ಗೊಳ್ಳಲು ನಿರುತ್ಸಾಹ: 15ರಿಂದ 29 ವರ್ಷ ದೊಳಗಿನ ಎಲ್ಲಾ ಯುವಕ, ಯುವತಿಯರು, ನಾನಾ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೋಂದಣಿಯಾದ ಯುವಕ ಸಂಘಗಳು, ಯುವತಿ ಮಂಡಳಿಗಳು ಹಾಗೂ ರಾಜೀವ್ ಗಾಂಧಿ ಯುವಶಕ್ತಿ ಸಂಘಗಳ ಪದಾಧಿಕಾರಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದ ಭಾಗವಹಿಸುವಿಕೆ ಕಂಡು ಬರಲಿಲ್ಲ. ಜಿಲ್ಲಾ ಮಟ್ಟದಲ್ಲಿ ಯುವ ಜನೋತ್ಸವದಲ್ಲಿ ಭಾಗವಹಿಸಲು 20 ತಿಂಗಳ ಹಿಂದೆಯೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅರ್ಜಿ ಆಹ್ವಾನಿಸಿತ್ತು.

ಹೆಚ್ಚು ಶಾಲಾ-ಕಾಲೇಜುಗಳು ಮತ್ತು ಯುವ ಸಂಘಟನೆಗಳು ನೋಂದಾಯಿಸಿಕೊಳ್ಳದ ಕಾರಣ ಇಂದು ಕೂಡ ನೇರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೂ 18 ಕಾಲೇಜುಗಳು ಹಾಗೂ 8 ಶಾಲೆಗಳು ಮಾತ್ರ ಪಾಲ್ಗೊಂಡಿದ್ದವು. ಯುವಜನರ ಪ್ರತಿಭೆ ಅನಾವರಣಕ್ಕಾಗಿಯೇ ಇರುವ ಯುವಜನೋ ತ್ಸವಕ್ಕೆ ಶಾಲಾ-ಕಾಲೇಜುಗಳು ನಿರುತ್ಸಾಹ ತೋರಿದ್ದಾ ದರೂ ಏಕೆ ಎಂಬ ಪ್ರಶ್ನೆ ಮಾತ್ರ ಕಾಡದಿರದು.

ತಡವಾಯ್ತು: ಬೆಳಿಗ್ಗೆ 10ಕ್ಕೆ ನಿಗದಿಯಾಗಿದ್ದ ಕಾರ್ಯ ಕ್ರಮ ತಡವಾಗಿ 11.45ಕ್ಕೆ ಆರಂಭವಾಯಿತು. ಉದ್ಘಾಟನೆ ನೆರವೇರಿಸಬೇಕಿದ್ದ ಸಚಿವ ಜಿ.ಟಿ.ದೇವೇಗೌಡರು ಗೈರಾಗಿ ದ್ದರು. ಜಿಪಂ ಅಧ್ಯಕ್ಷೆ ನಯಿಮಾ ಅವರ ಹೊರತಾಗಿ ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದ ಜನಪ್ರತಿನಿಧಿಗಳು ಯಾರೂ ಬರಲಿಲ್ಲ. ಜಿಪಂ ಸದಸ್ಯೆ ಚಂದ್ರಿಕಾ ಸುರೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಮತ್ತಿತರರು ಹಾಜರಿದ್ದರು.

Translate »