ಕೆಎಸ್‍ಆರ್‍ಟಿಸಿ ನೌಕರರ ಸಮಸ್ಯೆ ಬಗೆಹರಿಸದಿದ್ದರೆ ಅಧಿಕಾರ ತ್ಯಾಗ
ಮೈಸೂರು

ಕೆಎಸ್‍ಆರ್‍ಟಿಸಿ ನೌಕರರ ಸಮಸ್ಯೆ ಬಗೆಹರಿಸದಿದ್ದರೆ ಅಧಿಕಾರ ತ್ಯಾಗ

November 30, 2018

ಮೈಸೂರು:  ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್‍ಟಿಸಿ) ನೌಕರರ ಸಮಸ್ಯೆಗಳನ್ನು ಪರಿ ಹರಿಸಲು ನನ್ನಿಂದ ಸಾಧ್ಯವಾಗದಿದ್ದರೇ ಅಧಿಕಾರದಿಂದ ಕೆಳಗಿಳಿಯುತ್ತೇನೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಕೆಎಸ್‍ಆರ್‍ಟಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗಗಳ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಗುರುವಾರ ಆಯೋ ಜಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ನನಗೆ ಅಧಿಕಾರದ ಮೇಲೆ ಆಸೆ ಇಲ್ಲ. ನಾನು ಯಾರಿಗೂ ಹೆದರುವುದೂ ಇಲ್ಲ. ಬೆದರುವುದೂ ಇಲ್ಲ, ಸಾರಿಗೆ ನೌಕರರ ಸಮಸ್ಯೆ ಪರಿಹರಿ ಸಲು ಸಾಧ್ಯ ವಾಗದಿದ್ದರೆ ಈ ಸ್ಥಾನವೇ ಬೇಡ ರಾಜೀ ನಾಮೆ ನೀಡುವುದಾಗಿ ತಿಳಿಸಿದರು.

ಸಾರಿಗೆ ಸಂಸ್ಥೆಯ ಡ್ರೈವರ್, ಕಂಡಕ್ಟರ್, ಮೆಕ್ಯಾನಿಕ್ ಸೇರಿದಂತೆ ಇನ್ನಿತರ ನೌಕ ರರು ಹಲವಾರು ಸಮಸ್ಯೆಗಳನ್ನು ಎದುರಿ ಸುತ್ತಿದ್ದಾರೆ. ಸರಿಯಾದ ವಸತಿ ಸೌಲಭ್ಯ ಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ಹಾಗೆಯೇ ಅಪಘಾತಗಳು ನಡೆದಾಗÀ ಚಾಲಕರನ್ನು ಸೇವೆಯಿಂದ ವಜಾಗೊಳಿಸುವ ನಿಯಮಗಳಿಂದ ಹಲ ವಾರು ತೊಂದರೆಗಳನ್ನು ಅನುಭವಿಸುತ್ತಿ ದ್ದಾರೆ. ಮುಂದಿನ ದಿನಗಳಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಸಾರಿಗೆ ನೌಕರ ರಿಗೆ ವಸತಿ ನಿಲಯ ಕಟ್ಟಿಕೊಡಬೇಕು ಎಂಬ ಉz್ದÉೀಶವಿದೆ. ಸ್ಥಳೀಯವಾಗಿ ವಸತಿ ನೀಡುವುದರಿಂದ ವರ್ಗಾವಣೆ ಸಮಸ್ಯೆ ತಪ್ಪುತ್ತದೆ. ಸಾರಿಗೆ ಸಂಸ್ಥೆ ನೌಕರರನ್ನೂ ಆರೋಗ್ಯ ಸಂಜೀವಿನಿ ಯೋಜನೆಗೆ ಸೇರ್ಪಡೆಗೊಳಿಸುವಂತೆ ಸಿಎಂ ಜೊತೆ ಮಾತನಾಡುತ್ತೇನೆ. ನೌಕರರ ಸಮಸ್ಯೆ ಪರಿಹರಿಸುತ್ತೇನೆ. ಹಾಗೆಯೇ ಇತರೆ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ನಮ್ಮ ನೆಲ, ಜಲ, ಭಾಷೆ ಉಳಿಸಿಕೊಳ್ಳು ವುದು ನಮ್ಮ ಆದ್ಯ ಕರ್ತವ್ಯ. ಅಂತೆಯೇ ಅಧಿಕಾರಿಗಳು, ಸರ್ಕಾರ ಕೂಡ ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ವರ್ಷ ದಲ್ಲಿ ಒಮ್ಮೆ ಮಾತ್ರ ಕನ್ನಡ ತಾಯಿ ಭುವನೇ ಶ್ವರಿಯನ್ನು ನೆನೆದು ಪೂಜೆ ಸಲ್ಲಿಸುತ್ತೇವೆ. ಇಂದು ಮಾಡಿದ್ದು ಬಿಟ್ಟರೆ, ಮುಂದಿನ ಕನ್ನಡ ರಾಜ್ಯೋತ್ಸವ ಬರುವವರೆಗೆ ಕನ್ನ ಡದ ಅಭಿಮಾನ ಮರೆಯುತ್ತೇವೆ. ಈ ರೀತಿ ಆಗಬಾರದು ಪ್ರತಿಯೊಬ್ಬ ಕನ್ನಡಿ ಗನೂ ಕನ್ನಡಕ್ಕಾಗಿ ಏನಾದರೂ ಕೊಡುಗೆ ನೀಡಬೇಕು. ಹಾಗೂ ಅದೇ ಎಚ್ಚರಿಕೆ ಯಲ್ಲಿ ಬದುಕಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಮಲೆ ಯೂರು ಗುರುಸ್ವಾಮಿ ಅವರಿಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಸಾರಿಗೆ ಸಂಸ್ಥೆ ನೌಕರರ ಕಲ್ಯಾಣ ಮಂಟಪದ ಬದಲು ವಸತಿ ನಿಲಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಅದರಿಂದ ಅವರ ಹಲವಾರು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಮನವಿ ಮಾಡಿದರು.

ನಂತರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಕನ್ನಡಿ ಗರು ಬೇಡುವವರಲ್ಲ, ನೀಡುವವರು. ಶಿP್ಷÀಣ ಬೆಳೆದಂತೆ ಜಾತಿ ಕಡಿಮೆಯಾಗು ತ್ತದೆ. ಕನ್ನಡ ಭಾಷೆ ಕಲಿಯುವುದರೊಂ ದಿಗೆ ಇತರ ಭಾಷೆ ಕಲಿಸಬೇಕು. ಬೇರೆ ರಾಜ್ಯದವರಿಗೂ ಕನ್ನಡ ಕಲಿಯಲು ಹೇಳಬೇಕು ಎಂದರು.

ಇದಕ್ಕೂ ಮೊದಲು ಕೆಎಸ್‍ಆರ್‍ಟಿಸಿ ನೌಕರರಾದ ಎಂ.ಎ.ಯೋಗೇಶ್, ಜಗ ದೀಶ್, ನಂದಕುಮಾರ್ ಹಾಗೂ ಸಿಂಚನ ಕನ್ನಡ ಭಾಷೆ ಕುರಿತಾದ ಸುಮಧುರ ಕನ್ನಡ ಚಿತ್ರಗಳನ್ನು ಹಾಡಿ ರಂಜಿಸಿದರು.

ಸಂಸ್ಕøತಿ ಚಿಂತಕ ಶಂಕರ್ ದೇವ ನೂರು, ಕನ್ನಡ ಕ್ರಿಯಾಸಮಿತಿ ಅಧ್ಯಕ್ಷವ.ಚ. ಚನ್ನೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕಸಾಪ ಮಾಜಿ ಅಧ್ಯಕ್ಷ ರಾದ ಮಡ್ಡಿಕೆರೆ ಗೋಪಾಲ್, ಎಂ.ಚಂದ್ರ ಶೇಖರ್, ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಎನ್.ಇಂಗ ಳಗಿ, ಗ್ರಾಮಾಂತರ ವಿಭಾಗದ ವಿಭಾ ಗೀಯ ನಿಯಂತ್ರಣಾಧಿಕಾರಿ ಎಂ.ವಾಸು, ನಗರ ವಿಭಾಗದ ನಿಯಂತ್ರಣಾಧಿಕಾರಿ ಕೆ.ಎಚ್. ಶ್ರೀನಿವಾಸ್, ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಪ್ರಭು ಸ್ವಾಮಿ, ಖಜಾಂಚಿ ಹುಸೇನ್, ನಗರ ವಿಭಾಗದ ಅಧ್ಯಕ್ಷ ಮಾ.ಷಡP್ಷÀರಿ, ಗ್ರಾಮಾಂ ತರ ವಿಭಾಗದ ಅಧ್ಯಕ್ಷ ಕೆ.ಲೋಕೇಶ್, ಪ್ರಧಾನ ಕಾರ್ಯದರ್ಶಿಗಳಾದ ಸಿ.ಡಿ. ವಿಶ್ವನಾಥ್, ಪ್ರಕಾಶ್, ಖಜಾಂಚಿ ಕೆ. ಮಹದೇವ ಸ್ವಾಮಿ, ಎಸ್. ವೀರಭದ್ರಯ್ಯ ಉಪಸ್ಥಿತರಿದ್ದರು.

Translate »