ಮಹಿಳಾ ಸಬಲೀಕರಣ ಅಳೆಯಲು ಸರಿಯಾದ ಮಾನದಂಡ ಅಗತ್ಯ
ಮೈಸೂರು

ಮಹಿಳಾ ಸಬಲೀಕರಣ ಅಳೆಯಲು ಸರಿಯಾದ ಮಾನದಂಡ ಅಗತ್ಯ

November 30, 2018

ಮೈಸೂರು:  ಮಹಿಳಾ ಸಬಲೀಕರಣವನ್ನು ಕೇವಲ ಬಾಯಲ್ಲಿ ಹೇಳುವ ಬದಲು ಸಮರ್ಪಕವಾಗಿ ಕಾರ್ಯ ಗತಗೊಳಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮೈಸೂರು ಪೊಲೀಸ್ ತರ ಬೇತಿ ಶಾಲೆಯ ಪ್ರಾಂಶುಪಾಲರಾದ ಡಾ. ಧರಣೀದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು.

ಮಹಾರಾಣಿ ಮಹಿಳಾ ಕಲಾ ಕಾಲೇ ಜಿನ ಎನ್‍ಎಸ್‍ಎಸ್, ಮೈಸೂರು ವಿಶ್ವ ವಿದ್ಯಾನಿಲಯದ ಎನ್‍ಎಸ್‍ಎಸ್, ಕ್ರೆಡಿಟ್- ಐ ಸಂಸ್ಥೆಗಳು ರಾಷ್ಟ್ರೀಯ ಸೇವಾ ಯೋಜ ನೆಯ ಸುವರ್ಣ ಮಹೋತ್ಸವದ ಅಂಗವಾಗಿ ಮೈಸೂರಿನ ಪುರಭವನದಲ್ಲಿ ಏರ್ಪಡಿ ಸಿದ್ದ `ಮಹಿಳಾ ಸಬಲೀಕರಣ’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಸಬಲೀಕರಣದ ಬಗ್ಗೆ ಹೇಳುವ ನಾವು, ನಮ್ಮ ಧೋರಣೆ ಬದಲಿಸಿಕೊಳ್ಳ ಬೇಕಿದೆ. ಪುರುಷರೇ ಮೇಲು ಎನ್ನುವ ಧೋರಣೆ ಹೋಗಬೇಕು. ಮಹಿಳೆ ಮತ್ತು ಪುರುಷ ಇಬ್ಬರೂ ಸಮಾನರು ಎಂಬ ಧೋರಣೆ ಬರಬೇಕು ಎಂದರು.

ಸಬಲೀಕರಣ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಅಳೆಯಲು ಸರಿಯಾದ ಅಳತೆಗೋಲು ಬೇಕು. ಕೆಲವು ಗುಣಾತ್ಮಕ ವಾದ ವಿಚಾರಗಳಿಗೆ ಅಳತೆಗೋಲು ಹೇಗಿವೆಯೋ ಅದೇ ರೀತಿ ಸಬಲೀಕರಣ ಅಳೆಯಲು ಮಾನದಂಡ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂದು ನಮ್ಮಲ್ಲಿ ವರ್ಗ, ಜಾತಿ, ಲಿಂಗಾ ಧಾರಿತ ಅಸಮಾನತೆ ಬಹಳ ಇದೆ. ಆರೋಗ್ಯ, ಶಿಕ್ಷಣ, ಆಡಳಿತ ಕ್ಷೇತ್ರ, ತಂತ್ರ ಜ್ಞಾನದಲ್ಲಿ ಮಹಿಳೆಯರಿಗೆ ಎಷ್ಟು ಪ್ರಾತಿ ನಿಧ್ಯ ಇದೆ ಎಂಬುದು ತಿಳಿಯಬೇಕು. ಇಡೀ ಸಮಾಜದಲ್ಲಿ ಅರ್ಧದಷ್ಟು ಮಹಿಳೆಯರು ಇರುವುದರಿಂದ ಈ ಅಸಮಾನತೆ ಹೋಗ ಲಾಡಿಸಲು ಸಮಾಜವೇ ಜವಾಬ್ದಾರಿ ಹೊರ ಬೇಕು ಎಂದು ತಿಳಿಸಿದರು.

ನಂತರ ನಡೆದ ಅಧಿವೇಶನದಲ್ಲಿ `ಕಲೆ ಮತ್ತು ಸಮಾಜ ಸೇವಾ ವಲಯದಲ್ಲಿ ಮಹಿಳೆಯ ಹೆಜ್ಜೆ ಗುರುತುಗಳು’ ಕುರಿತು ನವೀ ಮುಂಬೈನ ಖಾರ್‍ಘರ್ ಕರ್ನಾಟಕ ಸಂಘದ ಅಧ್ಯಕ್ಷೆ ಎಸ್.ನಳಿನಾ ಪ್ರಸಾದ್, `ಮಹಿಳಾ ಸಬಲೀಕರಣದ ಅಡಿಪಾಯ ಹಾಗೂ ಅವಕಾಶದ ಸಾಧ್ಯತೆಗಾಗಿ ಶಿಕ್ಷಣ’ ಕುರಿತು ಕೆ.ಅರ್.ಪೇಟೆ ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಆರ್. ಇಂದಿರಾ ಸತೀಶ್‍ಬಾಬು, `ಮಹಿಳಾ ವೃತ್ತಿಪರತೆಯ ಹೊಸ ಆಯಾಮಗಳು’ ಬಗ್ಗೆ ಶಿವಮೊಗ್ಗದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಪಿ.ದಿನೇಶ್, `ಕುಟುಂಬ ಮತ್ತು ಸಮಾಜದಲ್ಲಿ ಮಹಿಳಾ ಸಶಕ್ತತೆಯ ಸವಾಲು ಗಳು’ ಕುರಿತು ಸಮಾಜಶಾಸ್ತ್ರ ವಿಭಾಗದ ಡಾ.ದಿನಮಣಿ ವಿಚಾರ ಮಂಡಿಸಿದರು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಎಚ್.ಪ್ರಕಾಶ್ ಅಧ್ಯ ಕ್ಷತೆ ವಹಿಸಿದ್ದರು. ಯುವರಾಜ ಕಾಲೇಜು ಪ್ರಾಂಶುಪಾಲ ಡಾ.ಎಂ.ರುದ್ರಯ್ಯ, ಕ್ರೆಡಿಟ್ _ಐ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ. ಎಂ. ಪಿ.ವರ್ಷ, ಎನ್‍ಎಸ್‍ಎಸ್ ಕಾರ್ಯ ಕ್ರಮಾಧಿ ಕಾರಿಗಳಾದ ಪ್ರೊ.ಮನೋನ್ಮಣಿ, ಪ್ರೊ.ಮಹ ದೇವಸ್ವಾಮಿ, ಡಾ.ಆರ್.ರಾಘವೇಂದ್ರ ಇನ್ನಿ ತರರು ಕಾರ್ಯಕ್ರಮದಲ್ಲಿದ್ದರು.

Translate »