ನಾಳೆಯಿಂದ ಮಾನಸಿಕ, ದೈಹಿಕ ಯೋಗಕ್ಷೇಮ ಕುರಿತ ಬೃಹತ್ ಮೇಳ, ಸಂಗೀತ ಸಂಜೆ
ಮೈಸೂರು

ನಾಳೆಯಿಂದ ಮಾನಸಿಕ, ದೈಹಿಕ ಯೋಗಕ್ಷೇಮ ಕುರಿತ ಬೃಹತ್ ಮೇಳ, ಸಂಗೀತ ಸಂಜೆ

November 30, 2018

ಮೈಸೂರು:  ಮೈಸೂರು ಲಯನ್ಸ್ ಕ್ಲಬ್ ಆಫ್ ವೆಸ್ಟ್ ವತಿಯಿಂದ ಡಿ.1 ಮತ್ತು 2ರಂದು ಮೈಸೂರಿನ ಜೆ.ಕೆ.ಮೈದಾನದಲ್ಲಿ ಮಾನಸಿಕ, ದೈಹಿಕ ಯೋಗಕ್ಷೇಮ ಕುರಿತಂತೆ ಬೃಹತ್ ಮೇಳ ಮತ್ತು ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಧರ್ಮೇಂದ್ರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.1ರಂದು ಬೆಳಿಗ್ಗೆ ಯೋಗಾಸನ, ಅಡುಗೆ ಮತ್ತು ನೃತ್ಯ ಸ್ಪರ್ಧೆಗಳಿರುತ್ತವೆ. ಸಂಜೆ 6 ಗಂಟೆಗೆ ಕವಿ, ಸಾಹಿತಿ ಜಯಂತ್ ಕಾಯ್ಕಿಣಿ ರಚಿಸಿರುವ ಕೆಲವು ಅಪರೂಪದ ಆಯ್ದೆ ಹಾಡುಗಳ ಸಂಗೀತ ರಸಸಂಜೆ ಏರ್ಪಡಿಸಿದೆ. ಶಾಸಕ ಎಲ್.ನಾಗೇಂದ್ರ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು.

2ನೇ ದಿನ ಬೆಳಿಗ್ಗೆ 6.30 ಗಂಟೆಗೆ ಆರೋಗ್ಯ ನಡಿಗೆ ಕಾರ್ಯಕ್ರಮವಿದ್ದು, ಮಾಜಿ ಶಾಸಕ ವಾಸು ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರ ರಚನಾ ಸ್ಪರ್ಧೆ, ಉದ್ಯೋಗ ಮಾರ್ಗದರ್ಶಿ ಕಾರ್ಯಕ್ರಮವಿದೆ. ಪರೀಕ್ಷೆ ಎದುರಿಸುವುದು ಹೇಗೆ ಇತ್ಯಾದಿ ಕಾರ್ಯಕ್ರಮಗಳಿರುತ್ತವೆ ಎಂದರು. ಬಡವರ್ಗದವರಿಗೆ ಶೇ.50ರ ರಿಯಾಯಿತಿಯಲ್ಲಿ ಡಯಾಲಿಸಿಸ್ ಸೌಲಭ್ಯ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದುವರೆಗೆ 10 ಸಾವಿರ ಮಂದಿಗೆ ನೆರವಾಗಿದ್ದು, ಮಿಷನ್ ಆಸ್ಪತ್ರೆ, ಬೃಂದಾವನ, ಗೋಪಾಲಗೌಡ ಆಸ್ಪತ್ರೆಗಳು ನಮ್ಮೊಂದಿಗೆ ಕೈಜೋಡಿಸಿವೆ ಎಂದರು. ಗೋಷ್ಠಿ ಯಲ್ಲಿ ಕಾರ್ಯದರ್ಶಿ ನಾಗರಾಜನ್, ಡಾ.ಮಹೇಶ್‍ರಾವ್, ಗುರುರಾಜ್ ಇದ್ದರು..

Translate »