ಪ್ರಕೃತಿ ವಿಕೋಪ ಪರಿಹಾರ, ಪುನರ್‍ವಸತಿ  ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಎಡಿಜಿಪಿ
ಕೊಡಗು

ಪ್ರಕೃತಿ ವಿಕೋಪ ಪರಿಹಾರ, ಪುನರ್‍ವಸತಿ ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಎಡಿಜಿಪಿ

November 30, 2018

ಮಡಿಕೇರಿ: ಪ್ರಕೃತಿ ವಿಕೋಪ ಪರಿ ಹಾರ ಹಾಗೂ ಪುನರ್‍ವಸತಿ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯ ಗಳ ಬಗ್ಗೆ ಲೋಕಾಯುಕ್ತ ಎಡಿಜಿಪಿ ಎ.ಎನ್.ಎಸ್.ಮೂರ್ತಿ ಜಿಲ್ಲಾಡಳಿತ ದಿಂದ ಮಾಹಿತಿ ಪಡೆದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಗುರುವಾರ ಮಾಹಿತಿ ಪಡೆದ ಲೋಕಾಯುಕ್ತ ಎಡಿಜಿಪಿ ಪ್ರಕೃತಿ ವಿಕೋಪ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡಿ ರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪ ಡಿಸಿದರು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾಹಿತಿ ನೀಡಿ ಕೊಡಗು ಜಿಲ್ಲೆಯ 34 ಗ್ರಾಪಂ ವ್ಯಾಪ್ತಿಯಲ್ಲಿ ಮಹಾಮಳೆಯಿಂದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಯಿತು. ಇದರಿಂದಾಗಿ ಜನ, ಜಾನುವಾರು, ಮನೆ ಹಾನಿ, ಬೆಳೆ ಹಾನಿಯಾಯಿತು. ರಸ್ತೆ ಸಂಪರ್ಕ ಕಡಿದು ಹೋಯಿತು. ಪ್ರವಾಹ ಭೂಕುಸಿತದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ತಲಾ 3,800 ರೂ. ಪರಿಹಾರ ಭತ್ಯೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆರಂಭದಲ್ಲಿ 51 ಪರಿಹಾರ ಕೇಂದ್ರಗ ಳನ್ನು ತೆರೆಯಲಾಗಿತ್ತು. ಈಗ 7 ಪರಿಹಾರ ಕೇಂದ್ರಗಳಿದ್ದು, 530 ಮಂದಿ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಕೃತಿ ವಿಕೋಪದಿಂದಾಗಿ ಪುನರ್ ವಸತಿ ಕೇಂದ್ರಗಳಿಗೆ 333 ವಿದ್ಯಾರ್ಥಿಗಳು ದಾಖ ಲಾಗಿದ್ದರು, 62 ವಿದ್ಯಾರ್ಥಿಗಳನ್ನು ಸಮೀ ಪದ ಸರ್ಕಾರಿ ಶಾಲೆಗಳಿಗೆ ದಾಖಲಿಸ ಲಾಗಿದೆ. 177 ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗೆ ದಾಖಲಿಸಲಾಗಿದೆ. ಉಳಿದ 65 ವಿದ್ಯಾರ್ಥಿಗಳು ಆಯಾಯ ಶಾಲೆಯಲ್ಲಿಯೇ ವ್ಯಾಸಂಗ ಮುಂದುವರಿಸಿದ್ದಾರೆ. ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿ ವಿತರಿಸಲಾಗಿದೆ ಎಂದು ಅವರು ವಿವರಿಸಿದರು. ಕೂಡಿಗೆ ಜರ್ಸಿತಳಿ ಸಂವ ರ್ಧನಾ ಕೇಂದ್ರದಲ್ಲಿ ಗೋಶಾಲೆಯನ್ನು ಪ್ರಾರಂಭಿಸಲಾಗಿದೆ. 10 ಸಾವಿರ ಕೆ.ಜಿ. ಪಶು ಆಹಾರವನ್ನು ದಾಸ್ತಾನಿರಿಸಿ ಗೋಶಾಲೆ ಯಲ್ಲಿ ಉಪಯೋಗಿಸಲಾಗುತ್ತಿದೆ. ಪಶು ಆಹಾರವನ್ನು ದಾಸ್ತಾನಿರಿಸಿ ಗೋಶಾಲೆಯಲ್ಲಿ ಹಾಗೂ ಗ್ರಾಮಗಳಿಗೆ ತೆರಳಿ ವಿತರಿಸಲಾಗಿರು ತ್ತದೆ. ತೊಂದರೆಗೀಡಾದ ಗ್ರಾಮಗಳಿಗೆ ತೆರಳಿ ಪಶು ಹಾಗೂ ಹಂದಿ ಆಹಾರವನ್ನು ವಿತರಿಸಲಾಗಿದೆ. ಅಗತ್ಯ ಔಷಧಿ ಹಾಗೂ ಲವಣ ಮಿಶ್ರಣವನ್ನು ಖರೀದಿಸಲಾಗಿದ್ದು ಉಪಯೋಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನಿರಾಶ್ರಿತ ಕುಟುಂಬಗಳಿಗೆ ಮನೆ ನಿರ್ಮಿ ಸುವ ನಿಟ್ಟಿನಲ್ಲಿ ಈಗಾಗಲೇ ಜಾಗ ಗುರ್ತಿ ಸಲಾಗಿದ್ದು, ಸದ್ಯದಲ್ಲಿಯೇ ಮನೆ ನಿರ್ಮಾ ಣಕ್ಕೆ ಚಾಲನೆ ದೊರೆಯಲಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿಪಂ ಸಿಇಒ ಲಕ್ಷ್ಮಿ ಪ್ರಿಯ, ಹೆಚ್ಚುವರಿ ಜಿಲ್ಲಾ ಧಿಕಾರಿ ಜಗದೀಶ್, ಉಪ ವಿಭಾಗಾಧಿ ಕಾರಿ ಟಿ.ಜವರೇಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ನಾನಾ
ಇಲಾಖೆ ಅಧಿಕಾರಿಗಳು ಇದ್ದರು.

Translate »