ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಫೆಲೋ ಆಗಿ ಆಯ್ಕೆಯಾಗಿರುವ ಗುಲ್ಬರ್ಗ ವಿವಿ ಕುಲಪತಿ ಪ್ರೊ.ಎಸ್.ಆರ್.ನಿರಂಜನರಿಗೆ ಇಂದು ಅಭಿನಂದನಾ ಕಾರ್ಯಕ್ರಮ
ಮೈಸೂರು

ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಫೆಲೋ ಆಗಿ ಆಯ್ಕೆಯಾಗಿರುವ ಗುಲ್ಬರ್ಗ ವಿವಿ ಕುಲಪತಿ ಪ್ರೊ.ಎಸ್.ಆರ್.ನಿರಂಜನರಿಗೆ ಇಂದು ಅಭಿನಂದನಾ ಕಾರ್ಯಕ್ರಮ

November 30, 2018

ಮೈಸೂರು: ಜೀವ ವಿಜ್ಞಾನ ಸಂಶೋ ಧನಾ ಕ್ಷೇತ್ರದ ಕೊಡುಗೆಯಾಗಿ ರಾಷ್ಟ್ರೀಯ ವಿಜ್ಞಾನ ಅಕಾ ಡೆಮಿಯ ಫೆಲೋ ಆಗಿ ನೇಮಕಗೊಂಡಿರುವ ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ ಅವರಿಗೆ ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘ, ಡಾ.ಎಸ್.ಆರ್.ನಿರಂಜನ ಅಭಿನಂದನಾ ಸಮಿತಿಯಿಂದ ಡಿ.1ರಂದು ಅಭಿನಂದಿಸಲಾಗುವುದು ಎಂದು ಸಮಿತಿಯ ಡಾ.ವಸಂತಕುಮಾರ್ ತಿಮಕಾಪುರ ಇಂದಿಲ್ಲಿ ತಿಳಿಸಿದರು. ಅಂದು ಸಂಜೆ 4 ಗಂಟೆಗೆ ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರೊ.ಎಸ್.ಆರ್.ನಿರಂಜನ ಅವರನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸನ್ಮಾನಿಸುವರು. ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಚ್.ಎ.ರಂಗನಾಥ್ ಅಭಿನಂದಿತರ ಕುರಿತು ಮಾತ ನಾಡುವರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಧ್ಯಕ್ಷತೆ ವಹಿಸುವರು. ಭಾರತೀಯ ವಿಜಾÐನ ಕಾಂಗ್ರೆಸ್ ಸಂಸ್ಥೆಯ ಅಧ್ಯಕ್ಷ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ವಸಂತಕುಮಾರ್ ತಿಮಕಾಪುರ ಇನ್ನಿತರರು ಭಾಗವಹಿಸುವರು ಎಂದು ಅವರು ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಲವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಪ್ರೊ.ಎಸ್.ಆರ್.ನಿರಂಜನ, ಪಾಂಡಿತ್ಯ, ದಕ್ಷತೆ ಜೊತೆಗೆ ಸ್ಮøಜನಾತ್ಮಕ ವ್ಯಕ್ತಿತ್ವದ ಶ್ರೇಷ್ಠ ವಿಜ್ಞಾನಿ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರೊ.ಎಸ್.ಕೆ.ಲೋಕೇಶ್, ಡಾ.ಎಸ್.ಉಮೇಶ್, ಅಮೃತೇಶ್ ಉಪಸ್ಥಿತರಿದ್ದರು.

Translate »