ರೈತ ಸಮಸ್ಯೆ ಚರ್ಚೆಗಾಗಿ ವಿಶೇಷ ಸಂಸತ್ ಅಧಿವೇಶನಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ
ಮೈಸೂರು

ರೈತ ಸಮಸ್ಯೆ ಚರ್ಚೆಗಾಗಿ ವಿಶೇಷ ಸಂಸತ್ ಅಧಿವೇಶನಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ

November 30, 2018

ಮೈಸೂರು:  ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಕೃಷಿ ಕ್ಷೇತ್ರದ ತೊಡಕುಗಳನ್ನು ನಿವಾರಿಸು ವುದಕ್ಕೆ ಚರ್ಚಿಸಲು ಸಂಬಂಧಿಸಿ ಕೂಡಲೇ ಕೇಂದ್ರ ಸರ್ಕಾರ ವಿಶೇಷ ಸಂಸತ್ ಅಧಿವೇ ಶನ ಕರೆಯುವಂತೆ ಆಗ್ರಹಿಸಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಪ್ರಾಂತ್ಯ ರೈತ ಸಂಘದ ವತಿಯಿಂದ ಗುರುವಾರ ನಡೆದ ಪ್ರತಿಭಟನೆಯಲ್ಲಿ ಹಲವಾರು ರೈತ ಮುಖಂ ಡರು ಪಾಲ್ಗೊಂಡು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾ ಗಿನಿಂದ ಕೃಷಿ ಬಿಕ್ಕಟ್ಟು ಜಟಿಲಗೊಂಡಿದೆ. ನವ ಉದಾರೀಕರಣವನ್ನು ಕೃಷಿ ಕ್ಷೇತ್ರದಲ್ಲಿ ಜಾರಿ ಮಾಡುವ ಬರದಲ್ಲಿ ರೈತರ ಹಿತಾ ಸಕ್ತಿಯನ್ನು ಬಲಿಕೊಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ, ಒಳ್ಳೆಯ ದಿನಗಳನ್ನು ತರುತ್ತೇನೆ, ಸಾಲಬಾಧೆ ನಿವಾರಿಸಿ ರೈತರ ಆತ್ಮಹತ್ಯೆ ತಡೆಯುತ್ತೇನೆ ಎಂದು ಭರವಸೆ ನೀಡಿ ದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಕಾಪೆರ್Çರೇಟ್ ಕಂಪನಿಗಳ ಸಾಲ ಮನ್ನಾ ಮಾಡಿ ರೈತರನ್ನು ಕಡೆಗಣಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೇಂದ್ರ ಸರ್ಕಾರವೂ ರೈತರ ಸಾಲ ಮನ್ನಾ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರು ನಿರಾಶೆಗೀಡಾಗಿದ್ದಾರೆ. ಕಷ್ಟಪಟ್ಟು ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡು ವಲ್ಲಿ ಸರ್ಕಾರ ವಿಫಲವಾಗಿದೆ. ಬೆಳೆ ವಿಮೆ ಯನ್ನು ಕೇಂದ್ರ ಸರ್ಕಾರ ಖಾಸಗಿ ಕಂಪನಿ ಗಳಿಗೆ ವಹಿಸುವ ಮೂಲಕ ಹಗರಣಕ್ಕೆ ಎಡೆ ಮಾಡಿಕೊಟ್ಟಿದೆ. ಡಾ.ಎಂ.ಎಸ್.ಸ್ವಾಮಿ ನಾಥನ್ ಆಯೋಗದ ವರದಿ ಜಾರಿ ಮಾಡು ವುದಕ್ಕೆ ಹಿಂದೇಟು ಹಾಕುವ ಮೂಲಕ ರೈತರನ್ನು ನಿರ್ಲಕ್ಷಿಸುತ್ತಿದೆ ಎಂದು ದೂರಿದರು.

ಪ್ರಕೃತಿ ವಿಕೋಪ, ಹುಳು ಬಾಧೆ, ಬೆಲೆ ಕುಸಿತಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಅವರ ಎಲ್ಲ ಸಾಲವನ್ನು ಮನ್ನಾ ಮಾಡ ಬೇಕು. ಈ ಬೇಡಿಕೆಗಳ ಬಗ್ಗೆ ಚರ್ಚಿಸಲು ಹಾಗೂ ಅವುಗಳನ್ನು ಈಡೇರಿಸುವ ಸಂಬಂಧ ವಾಗಿ ವಿಶೇಷ ಸಂಸತ್ ಅಧಿವೇಶನವನ್ನು ಕರೆಯಲು ಒತ್ತಾಯಿಸಿ ನ.30ರಂದು ದೆಹಲಿ ಯಲ್ಲಿ ನಡೆಯಲಿರುವ ರೈತರ ಬೃಹತ್ ಪ್ರತಿಭಟನೆಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವ ರಾಜು, ಮುಖಂಡರಾದ ಚಿಕ್ಕಣ್ಣೇಗೌಡ, ಜಗದೀಶ್ ಸೂರ್ಯ, ಪಿ.ಮರಂಕಯ್ಯ, ವಸಂತಕುಮಾರ್, ಎನ್.ಎಲ್.ಭರತ್ ರಾಜ್, ಬಿಳಿಗೆರೆ ಗುರುಲಿಂಗೇಗೌಡ ಸೇರಿ ದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »