ಮೈಸೂರು

ನ.29ರಂದು ಕೈಗಾರಿಕೋದ್ಯಮಿಗಳಿಗೆ  ಮೈಸೂರಲ್ಲಿ ಅರಿವು ಕಾರ್ಯಕ್ರಮ
ಮೈಸೂರು

ನ.29ರಂದು ಕೈಗಾರಿಕೋದ್ಯಮಿಗಳಿಗೆ  ಮೈಸೂರಲ್ಲಿ ಅರಿವು ಕಾರ್ಯಕ್ರಮ

November 27, 2018

ಮೈಸೂರು:  ಕರ್ನಾಟಕ ಸರ್ಕಾರದ ಎಂಎಸ್‍ಎಂಇ ನಿರ್ದೇಶನಾಲಯ, ಭಾರತ ಸರ್ಕಾರದ ಎಂಎಸ್‍ಎಂಇ ಅಭಿವೃದ್ಧಿ ಸಂಸ್ಥೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್, ಮೈಸೂರು ಕೈಗಾರಿಕೆಗಳ ಸಂಘ ಹಾಗೂ ಮೈಸೂರಿನ ಎಲ್ಲಾ ಕೈಗಾರಿಕಾ ಸಂಸ್ಥೆ ಸಂಯುಕ್ತಾಶ್ರಯ ದಲ್ಲಿ ಕರ್ನಾಟಕ ಸರ್ಕಾರದ ಕೈಗಾರಿಕಾ ನೀತಿ 2014-19 ಹಾಗೂ ವ್ಯವಹಾರ ಚಟು ವಟಿಕೆಗೆ ಸರಳೀಕೃತ ಪರಿಸರದ ಅರಿವು ಮೂಡಿಸುವ…

ಮಂಡ್ಯದಲ್ಲಿ ಅಂಬರೀಶ್‍ಗೆ ಅಪಾರ ಅಶ್ರುತರ್ಪಣ
ಮಂಡ್ಯ, ಮೈಸೂರು

ಮಂಡ್ಯದಲ್ಲಿ ಅಂಬರೀಶ್‍ಗೆ ಅಪಾರ ಅಶ್ರುತರ್ಪಣ

November 26, 2018

ಮಂಡ್ಯ: ಭಾನುವಾರ ಮುಸ್ಸಂಜೆ ನಗರದೆಲ್ಲೆಡೆ ದುಃಖದ ಕಾರ್ಮೋಡ ಕವಿದಿತ್ತು. ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದೊಳಕ್ಕೆ ಸೂರ್ಯನ ಕಿರಣಗಳು ಸಹ `ಮಂಡ್ಯದ ಗಂಡಿನ’ ಅಂತಿಮ ದರ್ಶನ ಪಡೆಯಲು ಪರದಾಡುವಷ್ಟು ಅಭಿಮಾನಿಗಳ ಸಾಗರವೇ ತುಂಬಿತ್ತು. ಅಭಿಮಾನಿಗಳ ಕಂಬನಿ ಹರಿದಿತ್ತು, ವೇದಿಕೆಗೆ ಹತ್ತಿದಾಗಲೆಲ್ಲಾ ಸಿಳ್ಳೆ, ಕೇಕೆ ಹಾಕುತ್ತಾ ಅಂಬರೀಶ್ ಅಣ್ಣಾಂಗೇ… ಎಂದು ಗದ್ದಲ ವೆಬ್ಬಿಸುವ ಅಭಿಮಾನಿಗಳನ್ನು `ಲೇ ಸುಮ್ಮನಿ ರಲ್ಲೋ, ಸುಮ್ನೆ ನಿಂತ್ಕೊಳ್ರೋ ಅಂತೆಲ್ಲಾ ಸದಾ ಕೆಂಡಕಾರುತ್ತಿದ್ದ ಕಣ್ಣುಗಳು ಸೋತು ಎವೆಯಿಕ್ಕದೆ ಮುಚ್ಚಿದ್ದವು, ಮೈಸೂರು ಪೇಟ ಧರಿಸಿ ಮಲಗಿದ್ದ ಅಂಬರೀಶ್ ಯಾವ ಕ್ಷಣದಲ್ಲಾದರೂ ಎದ್ದು…

ಕಂಠೀರವ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನರಿಂದ ಅಂಬರೀಶ್ ಅಂತಿಮ ದರ್ಶನ
ಮೈಸೂರು

ಕಂಠೀರವ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನರಿಂದ ಅಂಬರೀಶ್ ಅಂತಿಮ ದರ್ಶನ

November 26, 2018

ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಚಿತ್ರ ರಂಗದ ಗಣ್ಯರು, ರಾಜಕೀಯ ಧುರೀಣರು ಹಾಗೂ ಲಕ್ಷಾಂತರ ಅಭಿಮಾನಿಗಳು ಶನಿವಾರ ರಾತ್ರಿ ನಿಧನ ಹೊಂದಿದ ಮಾಜಿ ಸಚಿವ, ಕನ್ನಡ ಚಿತ್ರರಂಗದ `ದೊಡ್ಡಣ್ಣ’ ಅಂಬರೀಶ್ ಅವರ ಅಂತಿಮ ದರ್ಶನ ಪಡೆದು, ಅಶ್ರುತರ್ಪಣಗೈದರು. ಶನಿವಾರ ತಡರಾತ್ರಿ ಬೆಂಗಳೂರಿನ ವಿಕ್ರಂ ಆಸ್ಪತ್ರೆ ಬಳಿ ಅಪಾರ ಸಂಖ್ಯೆ ಯಲ್ಲಿ ಅಭಿಮಾನಿಗಳು ನೆರೆದಿದ್ದರಿಂದ ಮುಂಜಾನೆ ವೇಳೆಗೆ ಅಂಬರೀಶ್ ಪಾರ್ಥಿವ ಶರೀರವನ್ನು ಆಸ್ಪತ್ರೆ ಹಿಂಬಾಗಿಲ ಮೂಲಕ ಜೆ.ಪಿ.ನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಇಲ್ಲಿ ಅವರ ಕುಟುಂಬ ವರ್ಗ, ಸಂಬಂಧಿ…

ಹುಟ್ಟೂರಲ್ಲಿ ಅಂಬಿ ಅಂತ್ಯಕ್ರಿಯೆಗೆ ಗ್ರಾಮಸ್ಥರ ಆಗ್ರಹ
ಮಂಡ್ಯ, ಮೈಸೂರು

ಹುಟ್ಟೂರಲ್ಲಿ ಅಂಬಿ ಅಂತ್ಯಕ್ರಿಯೆಗೆ ಗ್ರಾಮಸ್ಥರ ಆಗ್ರಹ

November 26, 2018

ಭಾರತೀನಗರ: ಚಿತ್ರನಟ ಅಂಬರೀಶ್ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ದೊಡ್ಡರಸಿನ ಕೆರೆಯಲ್ಲೇ ನಡೆಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ದೊಡ್ಡ ರಸಿನಕೆರೆ ಗೇಟ್ ಬಳಿ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಅಂಬರೀಶ್ ಪರ ಘೋಷಣೆ ಕೂಗಿದ ದೊಡ್ಡರಸಿನಕೆರೆ ಗ್ರಾಮಸ್ಥರು, ಅಂಬರೀಶ್ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ನಡೆಸದೇ ಅವರ ಹುಟ್ಟೂರಿ ನಲ್ಲಿಯೇ ನೆರವೇರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಗ್ರಾಮದ ಮುಖಂಡರಾದ ಜಯರಾಮು ಮಾತನಾಡಿ, ದೊಡ್ಡರಸಿನ ಕೆರೆ ಅಂಬರೀಶ್ ಅವರ ಹುಟ್ಟೂರು. ಅವರು ಹಾಗೂ ನಮ್ಮ ನಡುವೆ ಅಪಾರ ಪ್ರೀತಿಯಿತ್ತು. ಅವರು ಆಗಾಗ…

ಇಂದು ಅಂಬರೀಶ್ ಅಂತ್ಯಕ್ರಿಯೆ
ಮೈಸೂರು

ಇಂದು ಅಂಬರೀಶ್ ಅಂತ್ಯಕ್ರಿಯೆ

November 26, 2018

ಬೆಂಗಳೂರು: ಶನಿವಾರ ರಾತ್ರಿ ನಿಧನರಾದ ಮಾಜಿ ಸಚಿವ ಹಾಗೂ ಕನ್ನಡ ಚಿತ್ರನಟ ಅಂಬರೀಶ್ ಅವರ ಅಂತ್ಯಕ್ರಿಯೆ ನಾಳೆ (ನ.26) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ನಾಳೆ ಬೆಳಿಗ್ಗೆ 9 ಗಂಟೆಗೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಸೇನಾ ಹೆಲಿಕಾಪ್ಟರ್‍ನಲ್ಲಿ ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ನಂತರ ಕಂಠೀರವ ಕ್ರೀಡಾಂಗಣಕ್ಕೆ ಕೊಂಡೊಯ್ದು, ಅಲ್ಲಿಂದ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಅಲ್ಲಿ ಸಕಲ ಸರ್ಕಾರಿ ಗೌರವಗ ಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಅಂಬರೀಶ್…

ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ನಿಧನ
ಮೈಸೂರು

ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ನಿಧನ

November 26, 2018

ಬೆಂಗಳೂರು: ಹಿರಿಯ ನಟ ಹಾಗೂ ಮಾಜಿ ಕೇಂದ್ರ ಸಚಿವ ಅಂಬರೀಶ್ ಬೆನ್ನಲ್ಲೇ ಮತ್ತೋರ್ವ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಸಿ.ಕೆ.ಜಾಫರ್ ಷರೀಫ್ ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ಷರೀಫ್ ಅವರನ್ನು ಕಳೆದ ಶುಕ್ರವಾರ ಕನ್ನಿಂಗ್ ಹ್ಯಾಂ ರಸ್ತೆಯ ಫೋರ್ಟೀಸ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ನಿಧನರಾಗಿದ್ದಾರೆ. ಅವರು ಉರ್ದುವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್ ನೆನಪಿನಾರ್ಥ `ಇಂಡಿಯಾ ವಿನ್ಸ್ ಫ್ರೀಡಂ’ ಪುಸ್ತಕವನ್ನು ಬರೆದಿದ್ದು,…

ಅಂಬರೀಶ್ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ
ಮೈಸೂರು

ಅಂಬರೀಶ್ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ

November 26, 2018

ಮೈಸೂರು: ಅಂಬರೀಶ್ ಅವರು ನಿಧನರಾದುದು ಅತೀವ ವಿಷಾ ದದ ಸಂಗತಿ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಹುಟ್ಟಿದ್ದು, ಬೆಳೆದದ್ದು, ವ್ಯಾಸಂಗ ಮಾಡಿದ್ದು ಎಲ್ಲಾ ಮೈಸೂರಿನಲ್ಲಿ. ಅನಂತರ `ಮಂಡ್ಯದ ಗಂಡು’ ಎಂದು ಖ್ಯಾತರಾದರು. ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಇವರಲ್ಲಿದ್ದ ಪ್ರತಿಭೆ ಯನ್ನು ಗಮನಿಸಿ `ನಾಗರಹಾವು’ ಚಿತ್ರದಲ್ಲಿ ಪಾತ್ರ ನೀಡಿ, ರಾತ್ರೋರಾತ್ರಿ ಕರ್ನಾಟಕದ ಆಕರ್ಷಣೆಯ ಕೇಂದ್ರಬಿಂದುವನ್ನಾಗಿ ಮಾಡಿ ದರು. ಕನ್ನಡ, ತಮಿಳು, ತೆಲುಗು, ಮಲ ಯಾಳಂ, ಹಿಂದಿ ಹೀಗೆ ಹಲವಾರು…

ಎಂಆರ್‍ಸಿಯೊಂದಿಗೆ ಅಂಬಿ ಬಹು ವರ್ಷದ ಸಂಬಂಧ
ಮೈಸೂರು

ಎಂಆರ್‍ಸಿಯೊಂದಿಗೆ ಅಂಬಿ ಬಹು ವರ್ಷದ ಸಂಬಂಧ

November 26, 2018

ಮೈಸೂರು: ಅಂಬರೀಶ್ ಅವರಿಗೆ ಕುದುರೆ ರೇಸ್ ಎಂದರೆ ಬಲು ಇಷ್ಟ. ತಮ್ಮ ವಿದ್ಯಾರ್ಥಿ ದಿಸೆಯಲ್ಲೇ ಶೂ, ಕೂಲಿಂಗ್ ಗ್ಲಾಸ್‍ನಲ್ಲೇ ಮಿಂಚುತ್ತಿದ್ದ ಅಂಬಿ, ಮೈಸೂರಿನ ಧನ್ವಂತರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಮಹಾರಾಣಿ ಕಾಲೇಜು ಸುತ್ತಲಿನ ರಸ್ತೆಗಳು, ಚಾಮುಂಡಿಪುರಂ ಸರ್ಕಲ್‍ನಲ್ಲಿ ಸದಾ ಅಡ್ಡಾಡುತ್ತಿದ್ದರಂತೆ. ಕಾರು ಓಡಿಸುವ ಕ್ರೇಜ್ ಹೆಚ್ಚಾಗಿದ್ದ ಅಂಬಿ, ಅಜೀಜ್ ಸೇಟ್‍ರಂತೆ ಸಿಗರೇಟ್ ಹಚ್ಚಿಕೊಂಡು ಮೈಸೂರಿನ ರಸ್ತೆಗಳಲ್ಲಿ ಕಾರು ಚಾಲನೆ ಮಾಡುವುದೆಂದರೆ ಬಲು ಇಷ್ಟ ಎಂದು ಅವರನ್ನು ಹತ್ತಿರದಿಂದ ಬಲ್ಲ ಹಿರಿಯರಾದ ಕೃಷ್ಣಪ್ಪ ಹೇಳುತ್ತಾರೆ. ಇನ್ನು ಮೈಸೂರು ರೇಸ್…

ರೆಬೆಲ್ ಸ್ಟಾರ್ ಅಂಬರೀಶ್‍ಗೆ ಆತಿಥ್ಯ: ಇನ್ನು ನೆನಪಷ್ಟೆ!
ಮೈಸೂರು

ರೆಬೆಲ್ ಸ್ಟಾರ್ ಅಂಬರೀಶ್‍ಗೆ ಆತಿಥ್ಯ: ಇನ್ನು ನೆನಪಷ್ಟೆ!

November 26, 2018

ಮೈಸೂರು: ಒರಟು ಮಾತು, ಕೆಂಗಣ್ಣಿನಲ್ಲಿ ಗದರಿಸುತ್ತಿದ್ದ ಅಂಬ ರೀಶ್ ಗುಂಡಿಗೆಯೊಳಗಿದ್ದ ಮನಸ್ಸು ಮಾತ್ರ ಮಲ್ಲಿಗೆಯಷ್ಟೇ ಮೃದುವಾಗಿತ್ತು. ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಎಲ್ಲರನ್ನೂ ಒಂದೇ ರೀತಿ ಕಾಣುತ್ತಿದ್ದ ಸ್ನೇಹಜೀವಿ ಅವರಾಗಿದ್ದರು. ದೇಶ-ವಿದೇಶಗಳಲ್ಲಿ ಸ್ನೇಹಸೌಧ ಕಟ್ಟಿರುವ ಅಂಬರೀಶ್, ನಡೆದು ಬಂದ ಹಾದಿಯನ್ನೂ ಎಂದೂ ಮರೆತವರಲ್ಲ. ಐಷಾರಾಮಿ ಜಗತ್ತು ಮುಂದಿದ್ದರೂ, ಹಿಂದಿನ ನಂಟನ್ನು ಕಾಪಾಡಿಕೊಂಡು ಬಂದಿದ್ದರು. ಹಾಗೆಯೇ ಮೈಸೂರಿನಲ್ಲಿ ಅಂಬರೀಶ್‍ಗೆ ಪ್ರಿಯವಾದ ಸಾಕಷ್ಟು ಸ್ಥಳಗಳಿದ್ದು, ಅಲ್ಲೆಲ್ಲಾ ಈಗ ಉಳಿದಿರುವುದು ಅಂಬಿಯ ನೆನಪು ಮಾತ್ರ. ಮೊದಲ ಕಸ್ಟಮರ್: ಮೈಸೂರಿನ ಮಂಡಿ ಮೊಹಲ್ಲಾದಲ್ಲಿರುವ ಹನುಮಂತು…

ದುಖಃದಲ್ಲೂ ಅಪ್ಪನಂತೆಯೇ ಮಾನವೀಯತೆ ಮೆರೆದ ಅಭಿಷೇಕ್..!
ಮೈಸೂರು

ದುಖಃದಲ್ಲೂ ಅಪ್ಪನಂತೆಯೇ ಮಾನವೀಯತೆ ಮೆರೆದ ಅಭಿಷೇಕ್..!

November 26, 2018

ಮಂಡ್ಯ:  ನಟ ಅಂಬರೀಶ್ ಅಂತಿಮಯಾತ್ರೆ ಹಲವು ವಿಶೇಷತೆಗಳಿಗೂ ಸಾಕ್ಷಿಯಾಯಿತು. ಅಪ್ಪನಂತೆ ಮಗನೂ ಸಹ ವಿಕಲಾಂಗನೋರ್ವನಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರೆ, ಭದ್ರತೆಯ ನಡುವೆಯೂ ಹೆಲಿಕಾಪ್ಟರ್‍ನತ್ತ ನುಗ್ಗಲೆತ್ನಿಸಿದ ವ್ಯಕ್ತಿಯೋರ್ವನಿಗೆ ಪೊಲೀಸರು ಗೂಸಾ ಕೊಟ್ಟ ಘಟನೆಯೂ ಜರುಗಿತು. ದುಖಃದಲ್ಲೂ ವಿಕಲಚೇತನನಿಗೆ ಹೆಲ್ಪ್..!? : ನಟ ಅಂಬರೀಶ್ ಇನ್ನು ನೆನಪು ಮಾತ್ರ. ಸಿನಿಮಾ, ರಾಜಕೀಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಅವರು ಅವರದ್ದೇ ಛಾಪು ಮೂಡಿಸಿದ್ದರು. ಸ್ಟೈಲ್, ಮಾತು, ಸ್ನೇಹ, ಮಾನವೀಯತೆಗೆ ಅಂಬರೀಶ್ ಇನ್ನೊಂದು ಹೆಸರಾಗಿದ್ದರು. ಅಭಿಮಾನಿಗಳು ಅವರಿಗೆ ಕಲಿಯುಗದ ಕರ್ಣ…

1 1,263 1,264 1,265 1,266 1,267 1,611
Translate »