ಮೈಸೂರು: ಚಾಮುಂಡಿಬೆಟ್ಟದ ಬೃಹತ್ ನಂದಿಗೆ ಭಾನುವಾರ 36 ವಿಧದ ದ್ರವ್ಯ, ಫಲ, ಪತ್ರೆ, ಪುಷ್ಪಾದಿಗಳಿಂದ ಮಹಾಭಿಷೇಕ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಪ್ರತಿ ವರ್ಷ 3ನೇ ಕಾರ್ತಿಕ ಮಾಸದ ಹಿಂದಿನ ಭಾನುವಾರದಂದು ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಬೆಟ್ಟದ ನಂದಿಗೆ ಮಹಾಭಿಷೇಕ ಆಯೋಜಿಸುತ್ತಾ ಬಂದಿದ್ದು, ಅಂತೆಯೇ ಭಾನುವಾರ ನಡೆದ 13ನೇ ವರ್ಷದ ಮಹಾಭಿಷೇಕದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರಾನಂದ ಸ್ವಾಮೀಜಿ, ಹೊಸ ಮಠ ಶ್ರೀ ಚಿದಾನಂದ ಸ್ವಾಮೀಜಿ…
ಅಂಬಿಗೆ ಗಣ್ಯರ ಕಂಬನಿ
November 26, 2018ಅಂಬರೀಶ್ ಅವರ ನಿಧನ ನನಗೆ ಬಹಳ ನೋವುಂಟು ಮಾಡಿದೆ. ನನಗೆ ಮಾತ್ರವಲ್ಲದೇ ರಾಜ್ಯದ ಜನತೆಗೂ ಈ ಅಕಾಲಿಕ ಸಾವು ನೋವು ತಂದಿದೆ. ಅಂಬರೀಶ್ ಓರ್ವ ಸ್ನೇಹಜೀವಿ. ಅವರಿಗೆ ಇದ್ದಷ್ಟು ಸ್ನೇಹಿತರು ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ. ಅವರು ನನಗೆ 1973 ರಿಂದಲೂ ಸ್ನೇಹಿತರು. ಅವರು ಮತ್ತು ನಾನು ಪರಸ್ಪರ ಗೌರವಿಸುತ್ತಿದ್ದೆವು. ಅಂಬರೀಶ್ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಚಿತ್ರರಂಗದಲ್ಲಿ ಅವರು ಟ್ರಬಲ್ ಶೂಟರ್ ಆಗಿದ್ದರು. ಯಾವುದೇ ಸಮಸ್ಯೆ ಇದ್ದರೂ ಅವರ ಮುಖಂ ಡತ್ವದಲ್ಲೇ ಇತ್ಯರ್ಥವಾಗುತ್ತಿತ್ತು….
ಕೊಡವರ ಕುರಿತ `ನಾವ್ಯಾರು ಕೊಡವರು’ ಕೃತಿ ಬಿಡುಗಡೆ
November 26, 2018ಮೈಸೂರು: ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಅಮೇರಿಕಾ ನಿವಾಸಿ ಮಾಳೇಟಿರ ಬಿ.ತಿಮ್ಮಯ್ಯ ಅವರು ರಚಿಸಿರುವ `ನಾವ್ಯಾರು ಕೊಡವರು’ (ಕನ್ನಡ) ಮತ್ತು `ಹು ಆರ್ ವಿ ಕೊಡವಾಸ್’(ಇಂಗ್ಲಿಷ್) ಕೃತಿಗಳನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು. ಡಿ.ಎಂ.ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರು ಕೃತಿಗಳನ್ನು ಬಿಡುಗಡೆಗೊಳಿಸಿದರು. ನಂತರ ಕೆ.ಬಿ.ಗಣಪತಿ ಅವರು ಮಾತನಾಡಿ, ಕೊಡವರಿಗೆ ಸಂಬಂಧಿಸಿದಂತೆ ಪುಸ್ತಕ ಬರೆಯುವುದು ಸಾಮಾನ್ಯದ ಕೆಲಸವಲ್ಲ. ಅನೇಕರು ಕೊಡವರ ಸಾಮಾಜಿಕ ಜೀವನ, ಕಲೆ, ಸಂಸ್ಕøತಿ, ಭಾಷೆ ಕುರಿತು…
3 ದಿನ ಮೈಸೂರು ಅರಮನೆ ದೀಪಾಲಂಕಾರ ರದ್ದು ಪ್ರವಾಸಿಗರಿಗೆ ಪ್ರವೇಶ ಎಂದಿನಂತಿರುತ್ತದೆ
November 26, 2018ಮೈಸೂರು: ಕನ್ನಡದ ಹಿರಿಯ ಮೇರು ನಟರಾದ ಮಾಜಿ ಸಚಿವ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಮೈಸೂರು ಅರಮನೆ ವಿದ್ಯುದ್ದೀಪಾಲಂಕಾರವನ್ನು ರದ್ದುಪಡಿಸಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ರಾಜ್ಯ ಸರ್ಕಾರ 3 ದಿನ ಶೋಕಾಚರಣೆ ಘೋಷಿಸಿರುವುದರಿಂದ ನವೆಂಬರ್ 27ರವರೆಗೆ ಮೈಸೂರು ಅರಮನೆಗೆ ದೀಪಾಲಂಕಾರ ಇರುವುದಿಲ್ಲ. ಆದರೆ ಅರಮನೆಗೆ ಪ್ರವಾಸಿಗರ ವೀಕ್ಷಣೆಗೆ ಪ್ರವೇಶ ಎಂದಿನಂತಿರುತ್ತದೆ. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಸುಬ್ರಹ್ಮಣ್ಯ ತಿಳಿಸಿದರು. ಬೆಂಗಳೂರು ಅರಮನೆ ವೀಕ್ಷಣೆ ರದ್ದು:…
ಅಂಬರೀಶ್, ಜಾಫರ್ ಷರೀಫ್‍ಗೆ ಅಂತಿಮ ನಮನ
November 26, 2018ಮೈಸೂರು: ಮಾಜಿ ಸಚಿವ, ನಟ ಅಂಬರೀಶ್ ಹಾಗೂ ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ನಿಧನದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಇಬ್ಬರು ನಾಯಕರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅಂತಿಮ ನಮನ ಸಲ್ಲಿಸಿದರು. ಚಾಮರಾಜ ಜೋಡಿ ರಸ್ತೆಯ ಶಾಂತಲಾ ಚಿತ್ರಮಂದಿ ರದ ಸಿಗ್ನಲ್ ಬಳಿ ನಿಲ್ಲಿಸಿದ್ದ ಬೃಹತ್ ಕಟೌಟ್‍ಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಮೈಸೂರು ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಸೇರಿದಂತೆ ಇತರೆ ಕಾಂಗ್ರೆಸ್ ಕಾರ್ಯಕರ್ತರು…
ಅಂಬರೀಶ್‍ಗೆ ಭಾವಪೂರ್ಣ ಶ್ರದ್ಧಾಂಜಲಿ
November 26, 2018ತಿ.ನರಸೀಪುರ: ಕಳೆದ ರಾತ್ರಿಯಷ್ಟೇ ಹೃದಯಾಘಾತದಿಂದ ನಿಧನರಾದ ಮಾಜಿ ಸಂಸದ, ಸಚಿವ ಹಾಗೂ ಮೇರುನಟ ಅಂಬರೀಶ್ ಅವರ ನಿಧನಕ್ಕೆ ಪಟ್ಟಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಪಟ್ಟಣದ ಹಳೇ ತಿರುಮಕೂಡಲು ವೃತ್ತ ದಲ್ಲಿ ಜಮಾವಣೆಗೊಂಡ ಅಭಿಮಾನಿಗಳು ಹಾಗೂ ನಿವಾಸಿಗಳು ಅಕಾಲಿಕ ಮರಣ ಹೊಂದಿದ್ದ ಊರಿನ ಮೊಮ್ಮಗ ಹಿರಿಯ ರಾಜಕಾರಣಿ ಹಾಗೂ ಚಿತ್ರನಟ ನಟ ಅಂಬ ರೀಶ್ ಅವರ ಎತ್ತರದ ಕಟೌಟ್‍ಗೆ ಹಾರ ಹಾಕಿ ಪೂಜೆ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಪಿಟೀಲು ಚೌಡಯ್ಯ ವಂಶಸ್ಥರಾದ, ಕಸಬಾ ಪಿಎಸಿಸಿಎಸ್ ನಿರ್ದೇಶಕ…
ಹುಣಸೂರಿನಲ್ಲಿ ಮಕ್ಕಳ ದಿನಾಚರಣೆ
November 26, 2018ಹುಣಸೂರು: ಮಾನವ, ಕೃಷಿ ಮತ್ತು ಪರಿಸರಕ್ಕೆ ಪೂರಕವಾಗಿರುವ ಪಕ್ಷಿಗಳ ಸಂರಕ್ಷಿಸುವ ಜೊತೆಗೆ ಅವುಗಳನ್ನು ಪ್ರೀತಿಯಿಂದ ಕಾಣಬೇಕು ಎಂದು ಮೈಸೂರಿನ ಪಕ್ಷಿ ಪ್ರೇಮಿ, ಸೆಂಟ್ ಥಾಮಸ್ ಸೆಂಟ್ರಲ್ ಸ್ಕೂಲ್‍ನ ಏಳನೇ ತರಗತಿ ವಿದ್ಯಾರ್ಥಿನಿ ಎಸ್.ವರ್ಷಿಣಿ ತಿಳಿಸಿದರು. ನಗರದ ಶಾಸ್ತ್ರೀ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯ ಅತಿಥಿಯಾಗಿದ್ದ ವರ್ಷಿಣಿ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿ, ಆಧುನಿಕತೆ ಬೆಳೆದಂತೆ ಪಕ್ಷಿಗಳ ಸಂತತಿಯೂ ಸಹ ನಶಿಸುತ್ತಿರುವುದು ಬೇಸರದ ಸಂಗತಿ, ಇಂದು ನಾವೆಲ್ಲ ಮೊಬೈಲ್ ಇಲ್ಲದ ಜೀವನವೇ ಇಲ್ಲವೆಂಬಂತೆ ಆಗಿದ್ದೇವೆ. ಆ ಮೊಬೈಲ್ ಟವರ್…
ಅಂಬರೀಶ್ ಇನ್ನಿಲ್ಲ
November 25, 2018ಬೆಂಗಳೂರು: ಮಂಡ್ಯದ ಗಂಡು, ಮಾಜಿ ಸಚಿವ, ಚಿತ್ರನಟ ಅಂಬರೀಶ್ ಅವರು ಇಂದು ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಅವರ ಪತ್ನಿ ಶ್ರೀಮತಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಅವರು ಅಂಬರೀಶ್ ಅವರನ್ನು ವಿಕ್ರಂ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆಯೇ ರಾತ್ರಿ 10.50ರ ವೇಳೆಗೆ ಅವರು ಕೊನೆಯುಸಿರೆಳೆದರು ಎಂದು ಹೇಳಲಾಗಿದೆ. ವಿಕ್ರಂ ಆಸ್ಪತ್ರೆಯ ಡಾ. ಸತೀಶ್ ನೇತೃತ್ವದ ತಂಡ ತುರ್ತು ನಿಗಾ ಘಟಕದಲ್ಲಿಟ್ಟು, ಪೂರ್ಣ ತಪಾಸಣೆ ನಂತರ ಅಧಿಕೃತ ವಾಗಿ ಅಂಬರೀಶ್ ನಿಧನರಾದ ವಿಷಯವನ್ನು…
ನಾಲೆಗೆ ಖಾಸಗಿ ಬಸ್ ಉರುಳಿ 30 ಮಂದಿ ಜಲ ಸಮಾಧಿ
November 25, 2018ಮಂಡ್ಯ: ವಿಶ್ವೇಶ್ವರಯ್ಯ ಉಪನಾಲೆಗೆ ಖಾಸಗಿ ಬಸ್ ಉರುಳಿ 30 ಮಂದಿ ಜಲ ಸಮಾಧಿಯಾಗಿರುವ ದಾರುಣ ಘಟನೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಸಮೀಪ ಶನಿವಾರ ಸಂಭವಿಸಿದ್ದು, ಅದೃಷ್ಟ ವಶಾತ್ ಓರ್ವ ಬಾಲಕ ಹಾಗೂ ಯುವಕ ಬದುಕುಳಿದಿದ್ದಾರೆ. ಮಂಡ್ಯ-ಪಾಂಡವಪುರ ಮಾರ್ಗದ ಕನಗನಮರಡಿ ಹಾಗೂ ವದೇಸಮುದ್ರ ಗ್ರಾಮಗಳ ನಡುವಿನ ವಿಶ್ವೇಶ್ವರಯ್ಯ ಉಪನಾಲೆಗೆ ಶನಿವಾರ ಮಧ್ಯಾಹ್ನ 12.15 ಗಂಟೆ ಸುಮಾರಿಗೆ `ರಾಜ್ ಕುಮಾರ್’ ಖಾಸಗಿ ಬಸ್, ಉರುಳಿ ಬಿದ್ದು, 15 ಮಹಿಳೆಯರು, 6 ಪುರುಷರು ಹಾಗೂ 9 ಮಕ್ಕಳು ಸೇರಿದಂತೆ ಒಟ್ಟು…
ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಶತಃಸಿದ್ಧ: ಸಿಎಂ ಕುಮಾರಸ್ವಾಮಿ
November 24, 2018ಮಂಡ್ಯ: ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಯೋಜನೆ ಕೈ ಬಿಡುವ ಪ್ರಶ್ನೆಯೇ ಇಲ್ಲ. ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾತ್ರವಲ್ಲ, ವಿಶ್ವಮಟ್ಟದ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ದುದ್ದ ಗ್ರಾಮದಲ್ಲಿಂದು ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 718 ಕೋಟಿ ರೂ. ವೆಚ್ಚದಲ್ಲಿ 54 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, 47 ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕೆಆರ್‌ಎಸ್‌ನಲ್ಲಿ ಉದ್ದೇಶಿತ ಡಿಸ್ನಿಲ್ಯಾಂಡ್…










