ಮೈಸೂರು

ಸಮಾಜಕ್ಕೆ ಕೊಡುಗೆ ನೀಡಿದರೆ ಮನುಷ್ಯ ಜನ್ಮ ಸಾರ್ಥಕ
ಮೈಸೂರು

ಸಮಾಜಕ್ಕೆ ಕೊಡುಗೆ ನೀಡಿದರೆ ಮನುಷ್ಯ ಜನ್ಮ ಸಾರ್ಥಕ

November 24, 2018

ಎಚ್.ಡಿ.ಕೋಟೆ: ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಆಗ ಮಾತ್ರ ಮನುಷ್ಯ ಜನ್ಮ ಸಾರ್ಥಕ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯಪಟ್ಟರು. ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಂಗಳೂರಿನ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ಎಚ್.ಡಿ.ಕೋಟೆಯ ಮದ್ಯವರ್ಜನಾ ಶಿಬಿರ ವ್ಯವಸ್ಥಾಪನಾ ಸಮಿತಿಯು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಟ್ಟಣದ ಗುರುಭವನದಲ್ಲಿ 8 ದಿನಗಳಿಂದ ಹಮ್ಮಿಕೊಂಡಿರುವ ಮದ್ಯವರ್ಜನಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮನುಷ್ಯ ಮನಸ್ಸು ಮಾಡಿದರೆ ದೊಡ್ಡ ಬಂಡೆಯನ್ನೇ ಪುಡಿ…

ಎಂ.ಎಸ್.ಕಿರಣ ಮೂಗೂರು ಗ್ರಾಪಂ ನೂತನ ಉಪಾಧ್ಯಕ್ಷ
ಮೈಸೂರು

ಎಂ.ಎಸ್.ಕಿರಣ ಮೂಗೂರು ಗ್ರಾಪಂ ನೂತನ ಉಪಾಧ್ಯಕ್ಷ

November 24, 2018

ತಿ.ನರಸೀಪುರ: ತಾಲೂಕಿನ ಮೂಗೂರು ಗ್ರಾಪಂ ನೂತನ ಉಪಾಧ್ಯಕ್ಷ ರಾಗಿ ಎಂ.ಎಸ್.ಕಿರಣ ಆಯ್ಕೆಯಾದರು. ತಾಲೂಕಿನ ಮೂಗೂರು ಗ್ರಾಪಂನಲ್ಲಿ ಹಿಂದಿನ ಉಪಾಧ್ಯಕ್ಷ ಎಂ.ಬಿ.ಅರವಿಂದ ರಮೇಶ ನಿಧನರಾಗಿದ್ದ ಹಿನ್ನೆಲೆಯಲ್ಲಿ ಇಂದು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆ ಯಿತು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಎಂ.ಎಸ್.ಕಿರಣ ಹಾಗೂ ಎಂ.ಎನ್. ರಾಜು ನಾಮಪತ್ರ ಸಲ್ಲಿಸಿದ್ದರು. 14 ಮತ ಗಳನ್ನು ಪಡೆದ ಎಂ.ಎಸ್.ಕಿರಣ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡರೆ, ಪ್ರತಿಸ್ಪರ್ಧಿ ಎಂ.ಎನ್.ರಾಜು 10 ಮತ ಪಡೆದು ಪರಾಭವ ಗೊಂಡರು. ಒಂದು ಕುಲಗೆಟ್ಟ ಮತವಾಗಿ ಚಲಾವಣೆಯಾಗಿತ್ತು. ಚುನಾವಣಾಧಿಕಾರಿ ಯಾಗಿ…

ನಾಳೆ ಮಾಳೇಟಿರ ಬಿ.ತಿಮ್ಮಯ್ಯರವರ ‘ನಾವ್ಯಾರು ಕೊಡವರು’ ಕೃತಿ ಬಿಡುಗಡೆ
ಮೈಸೂರು

ನಾಳೆ ಮಾಳೇಟಿರ ಬಿ.ತಿಮ್ಮಯ್ಯರವರ ‘ನಾವ್ಯಾರು ಕೊಡವರು’ ಕೃತಿ ಬಿಡುಗಡೆ

November 24, 2018

ಮೈಸೂರು: ಮೈಸೂರು ಕುವೆಂಪುನಗರದ ಡಿ.ಎಂ.ಟ್ರಸ್ಟ್ ಆಶ್ರಯದಲ್ಲಿ ಅಮೇರಿಕಾ ನಿವಾಸಿ ಮಾಳೇಟಿರ ಬಿ.ತಿಮ್ಮಯ್ಯ ಅವರ ‘ನಾವ್ಯಾರು ಕೊಡವರು’ ಕೃತಿಯ ಕನ್ನಡ ಹಾಗೂ ಇಂಗ್ಲಿಷ್ ಅವತರಣಿಕೆ ಬಿಡುಗಡೆ ಸಮಾರಂಭವು ನ.25ರ ಭಾನುವಾರ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಮೈಸೂರು ಝಾನ್ಸಿ ರಾಣಿ ಲಕ್ಷ್ಮಿಬಾಯಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ‘ಮೈಸೂರು ಮಿತ್ರ’ ಹಾಗೂ ‘ಸ್ಟಾರ್ ಆಫ್ ಮೈಸೂರು’ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಕೃತಿಗಳನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ಖ್ಯಾತ ನ್ಯಾಯ ವಾದಿ ಜೆ.ಎಂ.ಅಯ್ಯಣ್ಣ ವಹಿಸಲಿದ್ದು, ಕೃತಿ…

ಮೀಟರ್ ಬಡ್ಡಿ ದಂಧೆಯಿಂದ ಬೀದಿಬದಿ ವ್ಯಾಪಾರಿಗಳ ರಕ್ಷಣೆಗೆ `ಬಡವರ ಬಂಧು’
ಮೈಸೂರು

ಮೀಟರ್ ಬಡ್ಡಿ ದಂಧೆಯಿಂದ ಬೀದಿಬದಿ ವ್ಯಾಪಾರಿಗಳ ರಕ್ಷಣೆಗೆ `ಬಡವರ ಬಂಧು’

November 23, 2018

ಬೆಂಗಳೂರು: ಲೇವಾ ದೇವಿದಾರರ ಕಿರುಕುಳದಿಂದ ಬೀದಿಬದಿ ವ್ಯಾಪಾರಿಗಳನ್ನು ವಿಮುಕ್ತಗೊಳಿಸುವ ಮಹತ್ವಾ ಕಾಂಕ್ಷೆಯ `ಬಡವರ ಬಂಧು’ ಯೋಜನೆಗೆ ಇಂದಿಲ್ಲಿ ಚಾಲನೆ ನೀಡಲಾಯಿತು. ನಗರದ ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ನೂತನ ಯೋಜನೆಗೆ ಚಾಲನೆ ನೀಡಿ, ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬೀದಿಬದಿ ವ್ಯಾಪಾರಿಗಳಿಗೆ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಎಂದರು. ಅಂಗಡಿಗಳನ್ನು ತೆರವುಗೊಳಿಸದೆ ವ್ಯಾಪಾರ ಮಾಡಿ ಅವರಿಗೂ ಬದುಕಲು ಅವಕಾಶ ನೀಡಿ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಾಗ ಗುರುತಿಸಿಕೊಡಿ, ಅಕ್ರಮವಾಗಿ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಿ….

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜಿ.ಡಿ.ಹರೀಶ್‍ಗೌಡ ಅವಿರೋಧ ಆಯ್ಕೆ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜಿ.ಡಿ.ಹರೀಶ್‍ಗೌಡ ಅವಿರೋಧ ಆಯ್ಕೆ

November 23, 2018

ಮೈಸೂರು: ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ (ಎಂಸಿಡಿಸಿಸಿ) ಅಧ್ಯಕ್ಷರಾಗಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್‍ಗೌಡ ಅವಿರೋಧವಾಗಿ ಆಯ್ಕೆಗೊಂಡರು. ಹುಣಸೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ ಕ್ಷೇತ್ರದಿಂದ ನ.12ರಂದು ನಡೆದ ನಿರ್ದೇಶಕರ ಚುನಾವಣೆಯಲ್ಲೂ ಅವಿರೋಧವಾಗಿ ಆಯ್ಕೆಯಾಗಿದ್ದ ಜಿ.ಡಿ.ಹರೀಶ್‍ಗೌಡ, ಇದೀಗ ಅಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಂಜನಗೂಡು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ಬಿ.ಎನ್.ಸದಾನಂದ ಇದೇ ವೇಳೆ…

ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ: ಡಿಸಿಎಂ
ಮೈಸೂರು

ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ: ಡಿಸಿಎಂ

November 23, 2018

ಬೆಂಗಳೂರು: ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಂಚ ರಾಜ್ಯಗಳ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಅವರಿಗೆ ಬಿಡುವಿಲ್ಲ. ನವಂಬರ್‍ನಲ್ಲೇ ರಾಜ್ಯ ಸಂಪುಟ ವಿಸ್ತರಣೆ ಮಾಡಬೇಕೆಂಬುದು ನಮ್ಮ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಇಚ್ಛೆಯೂ ಆಗಿದೆ. ಸಂಪುಟ…

ವಾರದಲ್ಲಿ ಎಫ್‌ಆರ್‌ಪಿ ಬಾಕಿ ಪಾವತಿಸಿ
ಮೈಸೂರು

ವಾರದಲ್ಲಿ ಎಫ್‌ಆರ್‌ಪಿ ಬಾಕಿ ಪಾವತಿಸಿ

November 23, 2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರು ವಾರ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ಯಾವುದೇ ಒಮ್ಮತ ಮೂಡಿಲ್ಲ. ಆದರೂ ಒಂದು ವಾರದಲ್ಲಿ ರೈತರಿಗೆ ಕಡ್ಡಾಯವಾಗಿ ಎಫ್‌ಆರ್‌ಪಿ ದರ ಪಾವತಿಸಬೇಕು ಎಂದು ಸಿಎಂ ಕಾರ್ಖಾನೆ ಮಾಲೀಕರಿಗೆ ಸೂಚಿಸಿದ್ದಾರೆ. ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಎಫ್‌ಆರ್‌ಪಿ ದರಕ್ಕಿಂತ 150 ರು. ಹೆಚ್ಚು ನೀಡುವಂತೆ ಕುಮಾರಸ್ವಾಮಿ ಅವರು ಕಾರ್ಖಾನೆ ಮಾಲೀಕರಿಗೆ ಸೂಚಿಸಿದರು. ಆದರೆ ಇದಕ್ಕೆ ಒಪ್ಪದ ಮಾಲೀಕರು ಸಭೆಯುದ್ದಕ್ಕೂ ತಮ್ಮ ಸಮಸ್ಯೆಗಳನ್ನೇ ಸಿಎಂ ಮುಂದಿಟ್ಟರು. ಪ್ರಸಕ್ತ…

ಕುಕ್ಕರಹಳ್ಳಿ ಕೆರೆ ಪ್ರವಾಸಿ ತಾಣವಾಗಿಸಲು ಸಚಿವ ಸಾರಾ ನಿರ್ಧಾರ
ಮೈಸೂರು

ಕುಕ್ಕರಹಳ್ಳಿ ಕೆರೆ ಪ್ರವಾಸಿ ತಾಣವಾಗಿಸಲು ಸಚಿವ ಸಾರಾ ನಿರ್ಧಾರ

November 23, 2018

ಮೈಸೂರು: ತಾಂತ್ರಿಕ ತಜ್ಞರ ಕಮಿಟಿ ವರದಿಯಂತೆ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿಯನ್ನು ಮುಂದುವರೆಸಿ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮೈಸೂರು ವಿಶ್ವವಿದ್ಯಾನಿಲಯದ ಇಂಜಿನಿಯರ್‌ಗಳಿಗೆ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ 2009-10ನೇ ಸಾಲಿನಲ್ಲಿ ಮಂಜೂರಾ ಗಿದ್ಧ 2 ಕೋಟಿ ರೂ. ಅನುದಾನದಲ್ಲಿ ಕುಕ್ಕರಹಳ್ಳಿ ಕೆರೆ ಆವರಣವನ್ನು ಮೂಲ ಸೌಲಭ್ಯ ಕಲ್ಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ವಿಶ್ವವಿದ್ಯಾನಿಲಯವು ಪೂರೈಸಿದೆ. ಅದನ್ನು ಪರಿಶೀಲನೆ ನಡೆಸಿದ ಸಚಿವರು. ಈಗಾಗಲೇ 1.5 ಕೋಟಿ ರೂಗಳನ್ನು ಖರ್ಚು ಮಾಡಿ…

ರಾಸಲೀಲೆ ನೋಡಿದ್ದೇ ಬಾಲಕಿ ಜೀವಕ್ಕೆ ಕಂಟಕವಾಯ್ತು!
ಮೈಸೂರು

ರಾಸಲೀಲೆ ನೋಡಿದ್ದೇ ಬಾಲಕಿ ಜೀವಕ್ಕೆ ಕಂಟಕವಾಯ್ತು!

November 23, 2018

ಮೈಸೂರು: ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಅಪ್ರಾಪ್ತ ಬಾಲಕಿ ಹತ್ಯೆ ಪ್ರಕರಣ ಬಯಲಿಗೆಳೆದಿರುವ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, ಮಹಿಳೆ ಸೇರಿ ಇಬ್ಬರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂಜನಗೂಡಿನ ನಿವಾಸಿಗಳಾದ ಸಿದ್ದರಾಜು ಅಲಿಯಾಸ್ ಸ್ವಾಮಿ ಮತ್ತು ರಾಜಮ್ಮ, ಅಪ್ರಾಪ್ತ ಬಾಲಕಿ ಕೊಂದು ತಲೆಮರೆಸಿ ಕೊಂಡಿದ್ದವರು. ಹತ್ಯೆ ಪ್ರಕರಣ ಪತ್ತೆ ಕಾರ್ಯಾಚರಣೆ ಕುರಿತಂತೆ ಮೈಸೂರು ಜಿಲ್ಲಾ ಎಸ್ಪಿ ಅಮಿತ್‍ಸಿಂಗ್ ಇಂದು ಮೈಸೂ ರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದರು. ಆರೋಪಿಗಳಾದ ಸಿದ್ದರಾಜು ಮತ್ತು ರಾಜಮ್ಮ, ಬಾಲಕಿಯ…

ಮೈಸೂರು ವಕೀಲರ ಸಂಘದ ಅಧ್ಯಕ್ಷ  ಎಸ್.ಆನಂದಕುಮಾರ್ ತಂಡ ಪದಗ್ರಹಣ
ಮೈಸೂರು

ಮೈಸೂರು ವಕೀಲರ ಸಂಘದ ಅಧ್ಯಕ್ಷ  ಎಸ್.ಆನಂದಕುಮಾರ್ ತಂಡ ಪದಗ್ರಹಣ

November 23, 2018

ಮೈಸೂರು:  ಮೈಸೂರು ವಕೀಲರ ಸಂಘದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಎಸ್. ಆನಂದಕುಮಾರ್ ಮತ್ತು ಅವರ ತಂಡದ ಇತರೆ ಪದಾಧಿಕಾರಿಗಳು ಗುರುವಾರ ಅಧಿಕಾರ ಸ್ವೀಕರಿಸಿದರು. ನ್ಯಾಯಾಲಯದ ಆವರಣ ದಲ್ಲಿರುವ ಸಂಘದ ಕಚೇರಿಯಲ್ಲಿ ನಿರ್ಗಮಿತ ಅಧ್ಯಕ್ಷ ಜಿ.ವಿ.ರಾಮ ಮೂರ್ತಿ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಎಸ್. ಆನಂದಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, ಕ್ಯಾಂಟೀನ್ ಸುಧಾರಣೆ ಮಾಡುವುದಾಗಿ ಹೇಳಿದರು….

1 1,266 1,267 1,268 1,269 1,270 1,611
Translate »