ಮೈಸೂರು: ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳ ಜನರ ವಿಶ್ವಾಸ ಗಳಿಸುವುದರೊಂದಿಗೆ ಗ್ರಾಮಗಳಿಗೆ ಪ್ರಾಣಿಗಳು ನುಗ್ಗಿದ ಮಾಹಿತಿಯನ್ನು ತ್ವರಿತಗತಿಯಲ್ಲಿ ಪಡೆದು ಕೊಳ್ಳುವುದಕ್ಕಾಗಿ ವೈರ್‍ಲೆಸ್ ಅನ್ನು ನೀಡಲು ಮುಂದಾಗಿದೆ. ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಕಳೆದ ವರ್ಷ ಸೂಕ್ಷ್ಮ ಪರಿಸರ ವಲಯ ಎಂದು ಘೋಷಣೆಯಾಗುತ್ತಿದ್ದಂತೆ ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದ ಸುತ್ತಲೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಸುಮಾರು 35 ಗ್ರಾಮಗಳು ಸಂಪರ್ಕದ ಕೊರತೆ ಎದುರಿಸುತ್ತಿವೆ. ಚಂಗಡಿ, ಪೊನ್ನಾಚಿ,…
ಮೈಸೂರು ವಕೀಲರ ಸಂಘದ ಅಧ್ಯಕ್ಷರಾಗಿ ಎಸ್.ಆನಂದಕುಮಾರ್
November 19, 2018ಮೈಸೂರು: ಮೈಸೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಸ್. ಆನಂದಕುಮಾರ್ ಆಯ್ಕೆಯಾಗಿದ್ದಾರೆ. ಮೈಸೂರು ನ್ಯಾಯಾಲಯದ ಆವರಣದಲ್ಲಿ ಭಾನುವಾರ ವಕೀಲರ ಸಂಘ 2018-20ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 829 ಮತ ಗಳೊಂದಿಗೆ ಎಸ್.ಆನಂದಕುಮಾರ್ ನೂತನ ಅಧ್ಯಕ್ಷರಾಗಿ, ಎಸ್.ಜಿ.ಶಿವಣ್ಣೇಗೌಡ 1020 ಮತ ಗಳೊಂದಿಗೆ ಉಪಾಧ್ಯಕ್ಷರಾಗಿ, ಬಿ.ಶಿವಣ್ಣ 811 ಮತಗಳೊಂದಿಗೆ ಕಾರ್ಯದರ್ಶಿಯಾಗಿ, ಸಿ.ಕೆ. ರುದ್ರಮೂರ್ತಿ 1106 ಮತಗಳೊಂದಿಗೆ ಜಂಟಿ ಕಾರ್ಯದರ್ಶಿಯಾಗಿ, ಎಂ.ಮನೋನ್ಮಣಿ 1010 ಮತಗಳೊಂದಿಗೆ ಮಹಿಳಾ ಜಂಟಿ ಕಾರ್ಯ ದರ್ಶಿಯಾಗಿ, ಜಿ.ಪಿ.ಚಂದ್ರಶೇಖರ 932 ಮತ ಗಳೊಂದಿಗೆ ಖಜಾಂಚಿಯಾಗಿ ಜಯಭೇರಿ…
ಶ್ರೀನಗರ ಬಡಾವಣೆಗೆ ಮೂಲ ಸೌಲಭ್ಯ: ಕ್ರಿಯಾ ಯೋಜನೆ ರೂಪಿಸಲು ಸಚಿವ ಜಿಟಿಡಿ ಸೂಚನೆ
November 19, 2018ಮೈಸೂರು: ಕಡಕೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀನಗರ ಬಡಾವಣೆಗೆ ಕುಡಿಯುವ ನೀರನ್ನು ಪೂರೈ ಸಲು ಕ್ರಿಯಾ ಯೋಜನೆ ತಯಾರಿಸುವುದೂ ಸೇರಿದಂತೆ ಇನ್ನಿತರ ಮೂಲಸೌಲಭ್ಯ ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರ ಸಚಿವ ಜಿ.ಟಿ.ದೇವೇಗೌಡ ಸೂಚನೆ ನೀಡಿದರು. ಭಾನುವಾರ ಶ್ರೀನಗರಕ್ಕೆ ಭೇಟಿ ನೀಡಿ, ನಿವಾಸಿಗಳ ಮನವಿ ಆಲಿಸಿದ ಅವರು, ಸ್ಥಳ ದಲ್ಲೇ ಅಧಿಕಾರಿಗಳಿಗೆ ನಿವಾಸಿಗಳ ಸಮಸ್ಯೆ ಗಳನ್ನು ಪರಿಹರಿಸಲು ಸೂಕ್ತ ಕ್ರಮ ವಹಿಸು ವಂತೆ ನಿರ್ದೇಶನ ನೀಡಿದರು. ಬಡಾವಣೆಗೆ ಕಬಿನಿ…
ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಸಾಮಾನ್ಯ ಜ್ಞಾನ ಸ್ಪರ್ಧೆ
November 19, 2018ಮೈಸೂರು: ಮೈಸೂ ರಿನ ರಾಮಕೃಷ್ಣ ವಿದ್ಯಾಶಾಲೆಯ ಸಂಸ್ಥಾ ಪಕ ಅಧ್ಯಕ್ಷ ಸ್ವಾಮಿ ಶಾಂಭವಾನಂದಜಿ ಸ್ಮರಣಾರ್ಥ ಭಾನುವಾರ ವಿದ್ಯಾಶಾಲೆಯಲ್ಲಿ 47ನೇ ಸಾಮಾನ್ಯ ಜ್ಞಾನ ಲಿಖಿತ ಸ್ಪರ್ಧೆ ನಡೆಸಲಾಯಿತು. ಮೈಸೂರಿನ ವಿವಿಧ 36 ಶಾಲೆಗಳ 9 ಮತ್ತು 10ನೇ ತರಗತಿಯ 699 ವಿದ್ಯಾರ್ಥಿಗಳು ಲಿಖಿತ ಸ್ಪರ್ಧೆಯಲ್ಲಿ ತಮ್ಮ ಜ್ಞಾನವನ್ನು ಒರೆಗೆ ಹಚ್ಚಿದರು. ಒಟ್ಟು 16 ಕೊಠಡಿಗಳಲ್ಲಿ ಬೆಳಿಗ್ಗೆ 10ರಿಂದ 11.30ರವರೆಗೆ ನಡೆದ ಸ್ಪರ್ಧೆಗೆ ತೀರ್ಪು ಗಾರರಾದ `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ವ್ಯವಸ್ಥಾಪಕ ಸಂಪಾ ದಕ ವಿಕ್ರಮ್…
ಶೀಘ್ರ ಸಚಿವ ಸಂಪುಟ ವಿಸ್ತರಣೆ
November 19, 2018ಹುಬ್ಬಳ್ಳಿ: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿ ರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ನಡೆ ಯಲಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೊಂ ದಿಗೆ ಚರ್ಚಿಸಲಾಗಿದೆ. ಐದು ರಾಜ್ಯ ಗಳ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತೊಡ ಗಿಸಿಕೊಂಡಿರುವುದರಿಂದ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಸಮಯ ಸಿಗುತ್ತಿಲ್ಲ. ಅವರ ಭೇಟಿಗೆ ಸಮಯ…
ಪೇಜಾವರ ಶ್ರೀಗಳ ಬೆಂಗಾವಲು ವಾಹನ ಅಪಘಾತ: ದಂಪತಿ ದುರ್ಮರಣ
November 19, 2018ಚಿಕ್ಕಾಬಳ್ಳಾಪುರ: ಉಡುಪಿಯ ಪೇಜಾವರ ಶ್ರೀಗಳಿಗೆ ಭದ್ರತೆ ನೀಡು ತ್ತಿದ್ದ ಬೆಂಗಾವಲು ವಾಹನ ಮತ್ತು ಇಂಡಿಗೋ ಕಾರಿನ ನಡುವೆ ಡಿಕ್ಕಿ ಸಂಭ ವಿಸಿ ದಂಪತಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ರಾಮಕೃಷ್ಣಯ್ಯ(75) ಸರ್ವ ಲೋಚನಾ(70) ಮೃತ ದಂಪತಿ. ನಾಮ ಕರಣ ಕಾರ್ಯಕ್ರಮಕ್ಕೆ ಜ್ಯುವೆಲ್ಲರಿ ಶಾಪ್ ಮಾಲೀಕರಾದ ರಾಮಕೃಷ್ಣಯ್ಯ ಕುಟುಂಬ ಸಮೇತ ಚಿಂತಾಮಣಿಯಿಂದ ಬೆಂಗಳೂ ರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮತ್ತೊಂದೆಡೆ ಡಿಕ್ಕಿ ಯಾದ ಹೈವೇ…
ಶಾಸಕ ರಾಮದಾಸ್‍ರಿಂದ `ಸ್ವಚ್ಛ ಭಾನುವಾರ-ಹಸಿರು ಭಾನುವಾರ’
November 19, 2018ಮೈಸೂರು: ಸ್ವಚ್ಛ ಭಾನುವಾರ- ಹಸಿರು ಭಾನುವಾರ’ ಎಂಬ ಸಂದೇಶದೊಂದಿಗೆ ಸ್ವಚ್ಛತಾ ಭಾರತ ಅಭಿಯಾನದಡಿ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಅವರು ಭಾನುವಾರ 53ನೇ ವಾರ್ಡ್ ವ್ಯಾಪ್ತಿಯ ಸಿದ್ದಾರ್ಥ ಲೇಔಟ್, ಸಿಐಟಿಬಿ ಕಲ್ಯಾಣ ಭನವ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿದರು. ಪೌರ ಕಾರ್ಮಿಕರು, ಸಂಘ ಸಂಸ್ಥೆಗಳು, ಸಾರ್ವ ಜನಿಕರ ಜೊತೆಗೂಡಿ ಸ್ವಚ್ಛತಾ ಕಾರ್ಯ ಕೈಗೊಂಡ ಅವರು, ಇಡೀ ರಾಜ್ಯದಲ್ಲಿ ಮೊದಲಿಗೆ ಹಸಿರು ಭಾನು ವಾರವನ್ನು ಆರಂಭಿಸಿ, 157 ಭಾನುವಾರಗಳನ್ನು ಬೆಂಗ ಳೂರಿನಲ್ಲಿ ಯಶಸ್ವಿಯಾಗಿ ನಡೆಸಿದ ದಿವಂಗತ ಅನಂತ ಕುಮಾರ್…
ಕಾಶ್ಮೀರ-ಬಗೆಹರಿಯದ ಸಮಸ್ಯೆ: ಮಾಜಿ ರಾಜತಾಂತ್ರಿಕ ದುಲತ್ ವಿಷಾದ
November 19, 2018ಮೈಸೂರು: ಕಳೆದ 70 ವರ್ಷಗಳಿಂದ ಕಾಶ್ಮೀರದಿಂದ ಪಾಕಿಸ್ತಾನಕ್ಕೆ ನೀರು-ರಕ್ತ ಹೊಳೆಯಾಗಿ ಹರಿದಿದೆ. ಈ ವೇಳೆ ಅನೇಕ ಮಹಾ ನಾಯಕರು ಎರಡು ದೇಶಗಳಲ್ಲಿ ಆಳ್ವಿಕೆ ನಡೆಸಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಮಾಜಿ ರಾಜತಾಂತ್ರಿಕ ಎ.ಎಸ್.ದುಲತ್ ಬೇಸರ ವ್ಯಕ್ತಪಡಿಸಿದರು. ನಜರ್‍ಬಾದ್‍ನ ಖಾಸಗಿ ಹೋಟೆಲ್‍ನಲ್ಲಿ ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ ವತಿಯಿಂದ ನಡೆದ ಮೈಸೂರು ಸಾಹಿತ್ಯ ಹಬ್ಬದಲ್ಲಿ `ಪ್ರಸ್ತುತ ಜಮ್ಮು-ಕಾಶ್ಮೀರ ರಾಜಕೀಯ ಸ್ಥಿತಿ-ಗತಿ’ ಕುರಿತು ಮಾತನಾಡಿದರು. ಭಾರತ ಮತ್ತು ಪಾಕಿಸ್ತಾನ ವಿಭಜನೆ ಆಗಿ…
ಮಹಾರಾಜರನ್ನು ಕುರಿತು ಪದ್ಯ ಬರೆದರು.. ಪರಂಪರೆ ಬಿಂಬಿಸಿದರು..
November 19, 2018ಮೈಸೂರು: ಇದೊಂದು ವಿಶಿಷ್ಟ ಸ್ಪರ್ಧೆ. ಮಕ್ಕಳೇ ತಮ್ಮ ತಂದೆ, ತಾಯಿ, ಪೋಷಕರ ಬಗ್ಗೆ ಘೋಷಣೆಗಳನ್ನು ಬರೆದರು. ಮೈಸೂರು ಮಹಾರಾಜರನ್ನು ಕುರಿತು ಪದ್ಯ ಬರೆದರು. ನಮ್ಮ ಪರಂಪರೆ ಕುರಿತು ಚಿತ್ರಕಲೆ ರಚಿಸಿ ಮೈಸೂರಿನ ಬಗ್ಗೆ ಅಭಿಮಾನ ಪ್ರದರ್ಶಿಸಿದರು. ಮೈಸೂರು ಸಂಸ್ಕೃತಿ ಮತ್ತು ಪರಂಪರೆಗಳನ್ನು ಉತ್ತೇಜಿಸಲು ಮೀಸಲಾಗಿರುವ ವೃತ್ತಿಪರರ ತಂಡ ವಾದ `ಭೇರುಂಡ’ ಮೈಸೂರು ಅರಮನೆ ಆವರಣ ದಲ್ಲಿ ಭಾನುವಾರ ಆಯೋಜಿಸಿದ್ದ `ಮಕ್ಕಳ ಹಬ್ಬ’ (ರಾಯಲ್ ಕಿಡ್ಸ್ ಫೆಸ್ಟ್)ದಲ್ಲಿ 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಇಂತಹದ್ದೊಂದು ವಿಶಿಷ್ಟ ಕಾರ್ಯ…
ಫೈನಲ್‍ನಲ್ಲಿ ಬೆಂಗಳೂರು ವಿರುದ್ಧ ಮೈಸೂರು ತಂಡಕ್ಕೆ ಮೂರು ವಿಕೆಟ್‍ಗಳ ಭರ್ಜರಿ ಜಯ
November 19, 2018ಮೈಸೂರು: ಇಂದಿಲ್ಲಿ ದಿವ್ಯಾಂಗರಿಗಾಗಿ ನಡೆದ ದಕ್ಷಿಣ ಭಾರತ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು ವಿರುದ್ಧ ಮೈಸೂರು ದಿವ್ಯಾಂಗ ತಂಡ 3 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮೈಸೂರಿನ ವಿಜಯನಗರ 1ನೇ ಹಂತ ದಲ್ಲಿರುವ ಮುಡಾ ಕ್ರೀಡಾಂಗಣದಲ್ಲಿ ಭಾನು ವಾರ ಮೈಸೂರು ಹಾಗೂ ಬೆಂಗಳೂರು ದಿವ್ಯಾಂಗರ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾ ವಳಿಯ ಫೈನಲ್ ಪಂದ್ಯದಲ್ಲಿ ಬೆಂಗ ಳೂರು ನೀಡಿದ 63 ರನ್‍ಗಳ ಗುರಿಯನ್ನು ಬೆನ್ನತ್ತಿದ ಮೈಸೂರು ತಂಡ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಗೆಲುವಿನ…