ಮೈಸೂರು ವಕೀಲರ ಸಂಘದ ಅಧ್ಯಕ್ಷರಾಗಿ ಎಸ್.ಆನಂದಕುಮಾರ್
ಮೈಸೂರು

ಮೈಸೂರು ವಕೀಲರ ಸಂಘದ ಅಧ್ಯಕ್ಷರಾಗಿ ಎಸ್.ಆನಂದಕುಮಾರ್

November 19, 2018

ಮೈಸೂರು: ಮೈಸೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಸ್. ಆನಂದಕುಮಾರ್ ಆಯ್ಕೆಯಾಗಿದ್ದಾರೆ.

ಮೈಸೂರು ನ್ಯಾಯಾಲಯದ ಆವರಣದಲ್ಲಿ ಭಾನುವಾರ ವಕೀಲರ ಸಂಘ 2018-20ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 829 ಮತ ಗಳೊಂದಿಗೆ ಎಸ್.ಆನಂದಕುಮಾರ್ ನೂತನ ಅಧ್ಯಕ್ಷರಾಗಿ, ಎಸ್.ಜಿ.ಶಿವಣ್ಣೇಗೌಡ 1020 ಮತ ಗಳೊಂದಿಗೆ ಉಪಾಧ್ಯಕ್ಷರಾಗಿ, ಬಿ.ಶಿವಣ್ಣ 811 ಮತಗಳೊಂದಿಗೆ ಕಾರ್ಯದರ್ಶಿಯಾಗಿ, ಸಿ.ಕೆ. ರುದ್ರಮೂರ್ತಿ 1106 ಮತಗಳೊಂದಿಗೆ ಜಂಟಿ ಕಾರ್ಯದರ್ಶಿಯಾಗಿ, ಎಂ.ಮನೋನ್ಮಣಿ 1010 ಮತಗಳೊಂದಿಗೆ ಮಹಿಳಾ ಜಂಟಿ ಕಾರ್ಯ ದರ್ಶಿಯಾಗಿ, ಜಿ.ಪಿ.ಚಂದ್ರಶೇಖರ 932 ಮತ ಗಳೊಂದಿಗೆ ಖಜಾಂಚಿಯಾಗಿ ಜಯಭೇರಿ ಬಾರಿಸಿದ್ದಾರೆ.

ಹಿರಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಆರ್.ಭಾಸ್ಕರ್ ಆರಾಧ್ಯ (1241 ಮತ), ಅನಿತಾ ಎ.ಜೋಷಿ (1178 ಮತ), ಟಿ. ಸೀನಾ (1004 ಮತ), ಶಂಕರ್ ಸಿಂಗ್ (950 ಮತ) ಹಾಗೂ ಆರ್.ಲಕ್ಷ್ಮಣ ರಾಜ್ (910 ಮತ), ಕಿರಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಆರ್. ಚರಣ್‍ರಾಜ್ (1462 ಮತ), ಎಂ.ಇ. ಸುನೀಲ್ ಕುಮಾರ್ (1285 ಮತ), ಬಿ.ಎಂ. ಶಂಭುಲಿಂಗಸ್ವಾಮಿ (1231 ಮತ), ಎಂ.ಅಮೃತ ರಾಜ್ (1227 ಮತ) ಹಾಗೂ ಕೆ.ಚಂದ್ರಶೇಖರ (1004 ಮತ) ಆಯ್ಕೆಯಾಗಿದ್ದಾರೆ. ಮೈಸೂರು ವಕೀಲರ ಸಂಘದ ಆಡಳಿತ ಮಂಡಳಿಯ ಒಟ್ಟು 16 ಸ್ಥಾನಗಳಿಗೆ 41 ಮಂದಿ ಸ್ಪರ್ಧಿಸಿದ್ದರು. ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೂ 7 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಒಟ್ಟು 2650 ಮತದಾರ ವಕೀಲರಲ್ಲಿ 2244 ಮಂದಿ ಹಕ್ಕು ಚಲಾಯಿಸಿದರು. ಸಹಕಾರ ಇಲಾಖೆಯ ಅಧಿಕಾರಿ ಹರೀಶ್ ಚುನಾವಣಾಧಿಕಾರಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಲಕ್ಷ್ಮೀಪುರಂ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿ ದ್ದರು. ರಾಮಮೂರ್ತಿ ಈ ಹಿಂದಿನ ಸಾಲಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

Translate »