ಮೈಸೂರು

ಅಜ್ಜು ಸಹೋದರರ ಕಾಂಗ್ರೆಸ್ ಸೇರ್ಪಡೆಗೆ ವಿರೋಧ
ಮೈಸೂರು

ಅಜ್ಜು ಸಹೋದರರ ಕಾಂಗ್ರೆಸ್ ಸೇರ್ಪಡೆಗೆ ವಿರೋಧ

November 17, 2018

ಮೈಸೂರು: ಕಾಂಗ್ರೆಸ್ ವಿರೋಧಿ ಚಟುವಟಿಕೆ ನಡೆಸಿದ ಅಜ್ಜು ಸಹೋದರರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ಮೈಸೂರಿನ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಇರ್ಫಾನ್ ಪಾಷಾ ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ತಮ್ಮ ಅಸಮಾಧಾನ ವನ್ನು ಹೊರ ಹಾಕಿದರು. ಅಜ್ಜು ಸಹೋದರರು ಜೆಡಿಎಸ್, ಬಿಎಸ್ಪಿ, ಎಸ್‍ಡಿಪಿಐ ಪಕ್ಷದೊಂದಿಗೆ ಗುರುತಿಸಿಕೊಂಡು ಕಾಂಗ್ರೆಸ್ ವಿರೋಧಿ ಚಟುವಟಿಕೆ ನಡೆಸಿದ್ದರು. ಕಳೆದ ಚುನಾವಣೆ ಯಲ್ಲಿ ಈ ಸಹೋದರರು ಶಾಸಕ ತನ್ವೀರ್‍ಸೇಠ್…

ನರೇಗ ಕಾಮಗಾರಿಗಳ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ
ಮೈಸೂರು

ನರೇಗ ಕಾಮಗಾರಿಗಳ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ

November 17, 2018

ಬೈಲಕುಪ್ಪೆ: ಕೇಂದ್ರ ಸರ್ಕಾರದ ಅನುದಾನ ನೇರವಾಗಿ ಗ್ರಾಪಂ ಖಾತೆಗೆ ಬಾರದಿದ್ದರೆ ಗ್ರಾಪಂಗಳು ಕೈಕಟ್ಟಿ ಕೂರಬೇಕಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು. ಪಿರಿಯಾಪಟ್ಟಣ ತಾಲೂಕು ಕೊಪ್ಪ ಮತ್ತು ಬೈಲಕುಪ್ಪೆ ಗ್ರಾಪಂನಲ್ಲಿ ನರೇಗ ಯೋಜನೆ ಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಹಲವು ಸಂಸದರ ಮನವಿ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು 14ನೇ ಹಣಕಾಸು ಯೋಜನೆಯಡಿ ನೀಡುವ ಅನುದಾನವನ್ನು ನೇರ ವಾಗಿ ಗ್ರಾಪಂಗಳಿಗೆ ಬರುವ ಹಾಗೇ ಮಾಡಿದ್ದಾರೆ ಎಂದು ಹೇಳಿದರು. ನರೇಗ ಯೋಜನೆಯಡಿ ಗ್ರಾಪಂಗಳು ರೈತರಿಗೆ…

ನಂಜನಗೂಡಿನಲ್ಲಿ ಗಾಪಂ ನೌಕರರ ಪ್ರತಿಭಟನೆ
ಮೈಸೂರು

ನಂಜನಗೂಡಿನಲ್ಲಿ ಗಾಪಂ ನೌಕರರ ಪ್ರತಿಭಟನೆ

November 17, 2018

ನಂಜನಗೂಡು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ತಾಪಂ ಕಚೇರಿ ಎದುರು ತಾಲೂಕಿನ ಗ್ರಾಪಂ ನೌಕರರು ಪ್ರತಿಭಟಿಸಿದರು. ತಾಲೂಕಿನ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಡಿ.ಬಿ.ನಂಜುಂಡಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿ ಗಳಲ್ಲಿ ಕೈಬಿಟ್ಟಿರುವ 18,000 ಸಿಬ್ಬಂದಿಗೆ ಇಎಫ್‍ಎಂಎಸ್‍ನಲ್ಲಿ ಸೇರಿಸಲು ಅ.5 ರಂದು ಆದೇಶ ಹೊರಡಿಸಿ ತಿಂಗಳು ಕಳೆದರೂ ರಾಜ್ಯದ ಪಿಡಿಓಗಳು ಮತ್ತು ಇಓ ಅವರು ಈವರೆಗೆ ನೌಕರರ ವಿವರ ಸಂಗ್ರಹಿಸಿ ಸಂಬಂಧಪಟ್ಟ ಜಿಲ್ಲಾ ಪಂಚಾ ಯಿತಿಗೆ ತಲುಪಿಸಿಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಕ್ತ ನಿರ್ದೇಶನ…

ಬೈಕ್-ಬಸ್ ಡಿಕ್ಕಿ; ಸ್ಥಳದಲ್ಲೇ ಸವಾರ ಸಾವು
ಮೈಸೂರು

ಬೈಕ್-ಬಸ್ ಡಿಕ್ಕಿ; ಸ್ಥಳದಲ್ಲೇ ಸವಾರ ಸಾವು

November 17, 2018

ತಿ.ನರಸೀಪುರ: ಬೈಕ್-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಸವಾರ ಸಾವನ್ನಪಿದ್ದು,್ಪ ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ತಾಲೂಕಿನ ನೆರಗ್ಯಾತನಹಳ್ಳಿ ಗ್ರಾಮದ ಬಳಿ ಕಿರುಗಾವಲು ಮುಖ್ಯರಸ್ತೆಯಲ್ಲಿ ಸಂಭವಿಸಿದೆ. ತಾಲೂಕಿನ ಕೊತ್ತೇಗಾಲ ಗ್ರಾಮದ ಮಹದೇವಯ್ಯ(32) ಮೃತಪಟ್ಟಿದ್ದು, ಕಿರಗಸೂರು ಗ್ರಾಮದ ಪುಟ್ಟಸ್ವಾಮಚಾರ್(52) ತೀವ್ರವಾಗಿ ಗಾಯಗೊಂಡು ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಂಪನಪುರ ಗ್ರಾಮದ ಪತ್ನಿ ಮನೆಗೆ ತೆರಳಿದ್ದ ಮಹದೇವಯ್ಯ ತಮ್ಮ ಹಿರೋ ಸ್ಪ್ಲೆಂಡರ್ ಬೈಕ್(ಕೆಎ55, ಯು 3267)ನಲ್ಲಿ ಕೊತ್ತೇಗಾಲಕ್ಕೆ ವಾಪಸ್ಸಾ ಗುತ್ತಿದ್ದಾಗ ನರಸೀಪುರದಿಂದ ಕಿರುಗಾವಲು ಕಡೆಗೆ ತೆರಳುತ್ತಿದ್ದ ಎಸ್‍ಎಂಎಸ್ ಖಾಸಗಿ…

ಕೆಆರ್‌ಎಸ್‌ ಡಿಸ್ನಿಲ್ಯಾಂಡ್ ಯೋಜನೆ 2 ವರ್ಷದಲ್ಲಿ ಪೂರ್ಣಗೊಳಿಸುವ ಗುರಿ
ಮೈಸೂರು

ಕೆಆರ್‌ಎಸ್‌ ಡಿಸ್ನಿಲ್ಯಾಂಡ್ ಯೋಜನೆ 2 ವರ್ಷದಲ್ಲಿ ಪೂರ್ಣಗೊಳಿಸುವ ಗುರಿ

November 16, 2018

ಮೈಸೂರು: ವಿಶ್ವ ವಿಖ್ಯಾತ ಕೆಆರ್‌ಎಸ್‌ನ ಉದ್ಯಾನವನವನ್ನು ಅಮೇರಿಕಾದ ಡಿಸ್ನಿಲ್ಯಾಂಡ್‍ನಂತೆ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣ ಗೊಳಿಸುವ ಗುರಿ ಹೊಂದಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಈ ಸಂಬಂಧ ಬುಧವಾರ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ತಾವು ಜಂಟಿಯಾಗಿ ಉನ್ನತ ಅಧಿಕಾರಿ ಗಳ ಸಭೆ ನಡೆಸಿದ್ದು, ಅಲ್ಲಿ ಈ ಮಹತ್ವದ ಈ ತೀರ್ಮಾ ನಕ್ಕೆ ಬರಲಾಗಿದೆ ಎಂದರು. ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕನ್ನಡಿಗರ ಭಾವನಾತ್ಮ ಕತೆಯ ಪ್ರತೀಕವಾಗಿರುವ ಕಾವೇರಿ ಮಾತೆಯ…

ರಾಜ್ಯ ಮಟ್ಟದ ಖಾದಿ ಉತ್ಸವ-2018ಕ್ಕೆ ಚಾಲನೆ
ಮೈಸೂರು

ರಾಜ್ಯ ಮಟ್ಟದ ಖಾದಿ ಉತ್ಸವ-2018ಕ್ಕೆ ಚಾಲನೆ

November 16, 2018

ಮೈಸೂರು: ಮೈಸೂರು ಜೆ.ಕೆ.ಮೈದಾನದಲ್ಲಿ ಇಂದಿ ನಿಂದ ನ.29ರವರೆಗೆ ಆಯೋಜಿಸಿರುವ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ `ಖಾದಿ ಉತ್ಸವ-2018’ಕ್ಕೆ ಗುರುವಾರ ಚಾಲನೆ ನೀಡಲಾಯಿತು. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋ ದ್ಯೋಗ ಮಂಡಳಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಂಯುಕ್ತಾಶ್ರಯ ದಲ್ಲಿ ಆಯೋಜಿಸಿರುವ ಖಾದಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಸಚಿವ ಜಿ.ಟಿ.ದೇವೇ ಗೌಡ…

ಸಾಂಪ್ರದಾಯಿಕ ಗಂಜೀಫಾ ಕಲೆಯಲ್ಲಿ ಅರಳಿದ  ರಾಮಾಯಣದ ನಾನಾ ಸನ್ನಿವೇಶಗಳು
ಮೈಸೂರು

ಸಾಂಪ್ರದಾಯಿಕ ಗಂಜೀಫಾ ಕಲೆಯಲ್ಲಿ ಅರಳಿದ  ರಾಮಾಯಣದ ನಾನಾ ಸನ್ನಿವೇಶಗಳು

November 16, 2018

ಮೈಸೂರು:  ರಾಷ್ಟ್ರಕವಿ ಕುವೆಂಪು ವಿರಚಿತ `ಶ್ರೀ ರಾಮಾಯಣ ದರ್ಶನಂ’ ರಂಗಪ್ರಸ್ತುತಿ ಅಂಗವಾಗಿ ರಂಗಾಯಣದ ಆವರಣದಲ್ಲಿ ಹಮ್ಮಿ ಕೊಂಡಿರುವ ರಾಮಾಯಣದ ನಾನಾ ರೋಚಕ ಸನ್ನಿವೇಶಗಳನ್ನು ಕಣ್ಮುಂದೆ ತರುವ ಕಲಾಕೃತಿಗಳ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಲಾಯಿತು. ಸಾಂಪ್ರದಾಯಿಕ ಗಂಜೀಫಾ ಕಲೆಯಲ್ಲಿ ಅಂತಾ ರಾಷ್ಟ್ರೀಯ ಖ್ಯಾತಿ ಗಳಿಸಿರುವ ಗಂಜೀಫಾ ರಘುಪತಿ ಭಟ್ ಕೈಚಳಕದಲ್ಲಿ ಈ ಕಲಾಕೃತಿಗಳು ಅರಳಿದ್ದು, ಇವರು 12 ಕಲಾಕೃತಿಗಳಲ್ಲಿ ರಾಮಾಯಣದ ಪ್ರಮುಖ ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದಾರೆ. ರಾಮ ಹಾಗೂ ರಾವಣನ ನಡುವಿನ ಕಾಳಗದ ರೋಚಕ ದೃಶ್ಯ, ವನವಾಸಕ್ಕೆ ಹೊರಟ ರಾಮ,…

ಪುಸ್ತಕ ಉಡುಗೊರೆ ನೀಡುವ ಅಭ್ಯಾಸ ಬೆಳೆಸಿಕೊಳ್ಳಿ
ಮೈಸೂರು

ಪುಸ್ತಕ ಉಡುಗೊರೆ ನೀಡುವ ಅಭ್ಯಾಸ ಬೆಳೆಸಿಕೊಳ್ಳಿ

November 16, 2018

ಮೈಸೂರು: ಹುಟ್ಟು ಹಬ್ಬ, ಮದುವೆ, ಮುಂಜಿ ಇನ್ನಿತರ ಶುಭ ಸಮಾರಂಭಗಳ ಸಂದರ್ಭದಲ್ಲಿ ಪುಸ್ತಕ ಗಳನ್ನು ಉಡುಗೊರೆಯಾಗಿ ನೀಡುವ ಅಭ್ಯಾಸ ವನ್ನು ಎಲ್ಲರೂ ಬೆಳೆಸಿಕೊಳ್ಳುವ ಮೂಲಕ ಪುಸ್ತಕ ಓದಲು ಪ್ರೇರೇಪಿಸಬೇಕು ಎಂದು ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಇಂದಿಲ್ಲಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು ನಗರ ಗ್ರಂಥಾಲಯ ವತಿಯಿಂದ ಮೈಸೂರಿನ ವಿವೇಕಾನಂದ ನಗರ ಶಾಖಾ ಗ್ರಂಥಾಲಯದಲ್ಲಿ ಆಯೋ ಜಿಸಿದ್ದ `ಗ್ರಂಥಾಲಯ ಸಪ್ತಾಹ ಮತ್ತು ಪುಸ್ತಕ ಪ್ರದರ್ಶನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಂಥಾಲಯಗಳು…

‘ಸಮುದಾಯದತ್ತ ಶಾಲೆ’ ಪುನಾರಂಭ ಅಗತ್ಯ: ಎಚ್.ವಿಶ್ವನಾಥ್
ಮೈಸೂರು

‘ಸಮುದಾಯದತ್ತ ಶಾಲೆ’ ಪುನಾರಂಭ ಅಗತ್ಯ: ಎಚ್.ವಿಶ್ವನಾಥ್

November 16, 2018

ಹನಗೋಡು: ಶೈಕ್ಷಣಿಕ ಪ್ರಗತಿ ಜೊತೆಗೆ ಸವಲತ್ತು ವೃದ್ಧಿಸಿಕೊಳ್ಳಲು ಸಹ ಕಾರಿಯಾಗುವಂತೆ ತಿಂಗಳಿಗೊಮ್ಮೆ ‘ಸಮ ದಾಯದತ್ತ ಶಾಲೆ’ ಯೋಜನೆಯನ್ನು ತಾವು ಶಿಕ್ಷಣ ಸಚಿವರಾಗಿದ್ದ ವೇಳೆ ಜಾರಿಗೆ ತಂದು ಅಭಿವೃದ್ಧಿಗೆ ನೆರವಾಗಿದ್ದು, ಈ ಯೋಜನೆಯನ್ನು ಪುನರಾರಂಭಿಸುವ ಅವಶ್ಯವಿದೆ ಎಂದು ಶಾಸಕ ಎಚ್.ವಿಶ್ವನಾಥ್ ತಿಳಿಸಿದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹನಗೋಡು ಹೋಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಗ್ರಾಮ ಸಭೆಯನ್ನು ಮಕ್ಕಳಿಂದಲೇ ಉದ್ಘಾಟಿಸಿದ ಬಳಿಕ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ, ಯಾವುದೇ ಜನಪ್ರತಿನಿಧಿಗಳು ಶಿಕ್ಷಣದ ಬಗ್ಗೆ…

ಸಾಲ ಕೊಟ್ಟಿದ್ದ ವೃದ್ಧೆ ಕೊಂದು ಚಿನ್ನಾಭರಣ  ದೋಚಿದ್ದ ಆಟೋ ಚಾಲಕನಿಗೆ ಜೀವಾವಧಿ ಶಿಕ್ಷೆ
ಮೈಸೂರು

ಸಾಲ ಕೊಟ್ಟಿದ್ದ ವೃದ್ಧೆ ಕೊಂದು ಚಿನ್ನಾಭರಣ  ದೋಚಿದ್ದ ಆಟೋ ಚಾಲಕನಿಗೆ ಜೀವಾವಧಿ ಶಿಕ್ಷೆ

November 16, 2018

ಮೈಸೂರು: ತನಗೆ ಸಾಲ ನೀಡಿ ಸಹಕರಿಸಿದ್ದ ವೃದ್ದೆಯನ್ನೇ ಹತ್ಯೆಗೈದು ಚಿನ್ನಾಭರಣ ದೋಚಿದ್ದ ಆಟೋ ಚಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೈಸೂರಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಅಶ್ವಿನಿ ವಿ. ಶಿರಿಯಣ್ಣ ವರ ಅವರು ತೀರ್ಪು ನೀಡಿದ್ದಾರೆ. ಮೈಸೂರಿನ ಬೆಲವತ್ತ ಮಂಟಿ ನಿವಾಸಿ ಶ್ರೀನಿವಾಸ್ ಅಲಿಯಾಸ್ ಗಿರೀಶ್ ಅಲಿಯಾಸ್ ಮಂಟಿ ಸೀನ ಶಿಕ್ಷೆಗೊಳಗಾದ ಆಟೋ ಚಾಲಕ. ವಿವರ: ಬನ್ನಿಮಂಟಪದ ಹುಡ್ಕೋ ನಿವಾಸಿ ಜಯಮ್ಮ(60) ಅವರು ಲೇವಾದೇವಿ ಮಾಡುತ್ತಿದ್ದರು. ಅವರು ಎಲ್ಲಿಗೆ ಹೋಗಬೇಕಾದರೂ ಶ್ರೀನಿವಾಸ್‍ನ ಆಟೋದಲ್ಲೇ…

1 1,279 1,280 1,281 1,282 1,283 1,611
Translate »