ಬೈಕ್-ಬಸ್ ಡಿಕ್ಕಿ; ಸ್ಥಳದಲ್ಲೇ ಸವಾರ ಸಾವು
ಮೈಸೂರು

ಬೈಕ್-ಬಸ್ ಡಿಕ್ಕಿ; ಸ್ಥಳದಲ್ಲೇ ಸವಾರ ಸಾವು

November 17, 2018

ತಿ.ನರಸೀಪುರ: ಬೈಕ್-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಸವಾರ ಸಾವನ್ನಪಿದ್ದು,್ಪ ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ತಾಲೂಕಿನ ನೆರಗ್ಯಾತನಹಳ್ಳಿ ಗ್ರಾಮದ ಬಳಿ ಕಿರುಗಾವಲು ಮುಖ್ಯರಸ್ತೆಯಲ್ಲಿ ಸಂಭವಿಸಿದೆ.

ತಾಲೂಕಿನ ಕೊತ್ತೇಗಾಲ ಗ್ರಾಮದ ಮಹದೇವಯ್ಯ(32) ಮೃತಪಟ್ಟಿದ್ದು, ಕಿರಗಸೂರು ಗ್ರಾಮದ ಪುಟ್ಟಸ್ವಾಮಚಾರ್(52) ತೀವ್ರವಾಗಿ ಗಾಯಗೊಂಡು ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಂಪನಪುರ ಗ್ರಾಮದ ಪತ್ನಿ ಮನೆಗೆ ತೆರಳಿದ್ದ ಮಹದೇವಯ್ಯ ತಮ್ಮ ಹಿರೋ ಸ್ಪ್ಲೆಂಡರ್ ಬೈಕ್(ಕೆಎ55, ಯು 3267)ನಲ್ಲಿ ಕೊತ್ತೇಗಾಲಕ್ಕೆ ವಾಪಸ್ಸಾ ಗುತ್ತಿದ್ದಾಗ ನರಸೀಪುರದಿಂದ ಕಿರುಗಾವಲು ಕಡೆಗೆ ತೆರಳುತ್ತಿದ್ದ ಎಸ್‍ಎಂಎಸ್ ಖಾಸಗಿ ಬಸ್(ಕೆಎ09, ಎ9815) ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಮಹದೇವಯ್ಯ ಸ್ಥಳದಲ್ಲೇ ಸಾವನ್ನಪ್ಪಿದರೆ, ಹಿಂಬದಿಯಲ್ಲಿ ಕುಳಿತಿದ್ದ ಪುಟ್ಟ ಸ್ವಾಮಾಚಾರಿ ಗಾಯಗೊಂಡಿ ದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹ ವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಎಸ್‍ಐ ಅಜರುದ್ಧೀನ್, ಮುಖ್ಯಪೇದೆ ಮಲ್ಲೇಶ ಅವರು ವಾಹನಗಳೆರಡನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »