ನರೇಗ ಕಾಮಗಾರಿಗಳ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ
ಮೈಸೂರು

ನರೇಗ ಕಾಮಗಾರಿಗಳ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ

November 17, 2018

ಬೈಲಕುಪ್ಪೆ: ಕೇಂದ್ರ ಸರ್ಕಾರದ ಅನುದಾನ ನೇರವಾಗಿ ಗ್ರಾಪಂ ಖಾತೆಗೆ ಬಾರದಿದ್ದರೆ ಗ್ರಾಪಂಗಳು ಕೈಕಟ್ಟಿ ಕೂರಬೇಕಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ತಾಲೂಕು ಕೊಪ್ಪ ಮತ್ತು ಬೈಲಕುಪ್ಪೆ ಗ್ರಾಪಂನಲ್ಲಿ ನರೇಗ ಯೋಜನೆ ಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಹಲವು ಸಂಸದರ ಮನವಿ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು 14ನೇ ಹಣಕಾಸು ಯೋಜನೆಯಡಿ ನೀಡುವ ಅನುದಾನವನ್ನು ನೇರ ವಾಗಿ ಗ್ರಾಪಂಗಳಿಗೆ ಬರುವ ಹಾಗೇ ಮಾಡಿದ್ದಾರೆ ಎಂದು ಹೇಳಿದರು.

ನರೇಗ ಯೋಜನೆಯಡಿ ಗ್ರಾಪಂಗಳು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದನದ ಕೊಟ್ಟಿಗೆ, ಜಮೀನಿಗೆ ಬಂಡು ಹಾಕಿಸುವುದು, ಕಣ ನಿರ್ಮಾಣ ಸೇರಿದಂತೆ 21 ವಿವಿಧ ಕಾಮಗಾರಿಗಳಿಗೆ ಅನುದಾನದ ಹಣ ಭರಿಸಬಹುದು. ಗ್ರಾಪಂಗಳಲ್ಲಿ ನರೇಗ ಯೋಜನೆಯಡಿ 50ಸಾವಿರದಿಂದ 3.5 ಕೋಟಿ ರೂ.ವರೆಗೂ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದರು.

ಇದೇ ವೇಳೆ ಕೊಪ್ಪ ಗ್ರಾಮಸ್ಥರು, ತಮ್ಮ ಪಂಚಾಯಿತಿ ವ್ಯಾಪ್ತಿಯ ಗಿರಿಜನರ ಹಾಡಿಗಳಾದ ರಾಣಿಗೇಟ್ ಹಾಗೂ ಲಿಂಗಾಪುರಕ್ಕೆ ವಿದ್ಯುತ್ ಸರಬರಾಜು ಇಲ್ಲದೆ ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದು, ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರಿದರೂ ಪ್ರಯೋಜನವಾಗಿಲ್ಲ ಎಂದು ಅವಲತ್ತು ಕೊಂಡರು. ತಕ್ಷಣ ಸಂಬಂಧಪಟ್ಟ ಅಧಿಕಾರಿ ಯನ್ನು ಸಂಸದರು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದರಲ್ಲದೆ, ಕೂಡಲೇ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ವಹಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಕೊಪ್ಪ ಮತ್ತು ಬೈಲಕುಪ್ಪೆ ಗ್ರಾಪಂ ಅಧ್ಯಕ್ಷರಾದ ಶಾಹಿನಾ ಭಾನು, ರೇಣುಕಮ್ಮ, ಅಭಿವೃದ್ಧಿ ಅಧಿಕಾರಿ ಗಳಾದ ರವಿ, ಶಿಯೋಗ, ತಾಲೂಕು ಬಿಜೆಪಿ ಅಧ್ಯಕ್ಷ ರವಿ, ಮುಖಂಡ ರಾದ ಜೈರಾ ಮೇಗೌಡ, ರಮೇಶ, ರವಿ, ಪ್ರವೀಣ್, ಅಣ್ಣಪ್ಪ, ಮಂಜುನಾಥ, ಮಂಜು, ಮಂಚದೇವನಹಳ್ಳಿ ಮಂಜುನಾಥ, ಗ್ರಾಪಂ ಸದಸ್ಯರಾದ ರಘು, ಹೆಚ್.ಎ. ಮಂಜುನಾಥ, ಕೆ.ಕೆ. ರಾಮಸ್ವಾಮಿ, ಸಾವಿತ್ರಿ, ಆಶಾ, ಸಾರ್ವ ಜನಿಕರು ಸೇರಿದಂತೆ ಮತ್ತಿತರರಿದ್ದರು.

Translate »