ಪುಸ್ತಕ ಉಡುಗೊರೆ ನೀಡುವ ಅಭ್ಯಾಸ ಬೆಳೆಸಿಕೊಳ್ಳಿ
ಮೈಸೂರು

ಪುಸ್ತಕ ಉಡುಗೊರೆ ನೀಡುವ ಅಭ್ಯಾಸ ಬೆಳೆಸಿಕೊಳ್ಳಿ

November 16, 2018

ಮೈಸೂರು: ಹುಟ್ಟು ಹಬ್ಬ, ಮದುವೆ, ಮುಂಜಿ ಇನ್ನಿತರ ಶುಭ ಸಮಾರಂಭಗಳ ಸಂದರ್ಭದಲ್ಲಿ ಪುಸ್ತಕ ಗಳನ್ನು ಉಡುಗೊರೆಯಾಗಿ ನೀಡುವ ಅಭ್ಯಾಸ ವನ್ನು ಎಲ್ಲರೂ ಬೆಳೆಸಿಕೊಳ್ಳುವ ಮೂಲಕ ಪುಸ್ತಕ ಓದಲು ಪ್ರೇರೇಪಿಸಬೇಕು ಎಂದು ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಇಂದಿಲ್ಲಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು ನಗರ ಗ್ರಂಥಾಲಯ ವತಿಯಿಂದ ಮೈಸೂರಿನ ವಿವೇಕಾನಂದ ನಗರ ಶಾಖಾ ಗ್ರಂಥಾಲಯದಲ್ಲಿ ಆಯೋ ಜಿಸಿದ್ದ `ಗ್ರಂಥಾಲಯ ಸಪ್ತಾಹ ಮತ್ತು ಪುಸ್ತಕ ಪ್ರದರ್ಶನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಂಥಾಲಯಗಳು ಆಧುನಿಕ ದೇವಸ್ಥಾನ ಗಳಿದ್ದಂತೆ. ಪುಸ್ತಕಗಳಿಗಿಂತ ಒಳ್ಳೆಯ ಗೆಳೆಯ -ಗೆಳತಿ ಸಿಗುವುದಿಲ್ಲ. ಮೊಬೈಲ್‍ನಿಂದ ದಾರಿ ತಪ್ಪುತ್ತಿರುವ ಮಕ್ಕಳನ್ನು ಗ್ರಂಥಾಲಯಗಳ ಕಡೆಗೆ ಕರೆದೊಯ್ಯುವ ಕೆಲಸವನ್ನು ಪೋಷ ಕರು ಮಾಡಬೇಕು. ಮಕ್ಕಳ ಮನಸ್ಸನ್ನು ಹಾಳು ಮಾಡುತ್ತಿರುವ ಮೊಬೈಲ್‍ಗಳಿಂದ ಮಕ್ಕಳನ್ನು ಪಾರು ಮಾಡಬೇಕಾದರೆ ಪುಸ್ತಕಗಳಿಂದ ಮಾತ್ರ ಸಾಧ್ಯ. ಪುಸ್ತಕಗಳ ಉಡುಗೊರೆ ನಿತ್ಯ ನಿರಂತರವಾಗಬೇಕು ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಇನ್ನಿತರರು ಗ್ರಂಥಾಲಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದರಿಂದಲೇ ದೊಡ್ಡ ಮಟ್ಟಕ್ಕೆ ಏರಲು ಸಾಧ್ಯವಾಯಿತು. ಇದನ್ನು ವಿದ್ಯಾರ್ಥಿಗಳು ಅರಿತು ಗ್ರಂಥಾಲಯ ಗಳಲ್ಲಿ ಅಗತ್ಯ ಜ್ಞಾನ ನೀಡುವ ಪುಸ್ತಕ ಗಳನ್ನು ಓದಬೇಕು. ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾರ್ವ ಜನಿಕ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಬಿ.ಮಂಜುನಾಥ್, ಸ್ಥಳೀಯ ಸಂಸ್ಥೆಗಳು ನೀಡುವ ಗ್ರಂಥಾಲಯ ಕರ ಸಂಪನ್ಮೂಲದಲ್ಲೇ ಗ್ರಂಥಾಲಯಗಳು ನಡೆ ಯುತ್ತವೆ. ಹೀಗಾಗಿ ಗ್ರಂಥಾಲಯಗಳು ಸ್ಥಳೀಯ ಸಂಸ್ಥೆಗಳನ್ನೇ ಅವಲಂಬಿಸಿರು ತ್ತವೆ. ಎಲ್ಲಿ ಸ್ಥಳೀಯ ಸಂಸ್ಥೆಗಳಿಂದ ಗ್ರಂಥಾ ಲಯ ಕರ ಬರುವುದಿಲ್ಲವೋ ಅಂಥ ಕಡೆ ಗ್ರಂಥಾಲಯಗಳು ನಡೆಯುವುದು ಕಷ್ಟ. ಹೀಗಾಗಿ ಗ್ರಂಥಾಲಯಗಳ ಬಗ್ಗೆ ಬಹಳಷ್ಟು ಟೀಕೆ ಟಿಪ್ಪಣಿಗಳು ಸಹಜ ಎಂದರು.
ಮೈಸೂರಿನ ವಿವೇಕಾನಂದನಗರ ಗ್ರಂಥಾ ಲಯ ಶಾಖೆಯಲ್ಲಿಯೇ ಗ್ರಂಥ, ಪುಸ್ತಕ ಗಳನ್ನು ಅಭ್ಯಾಸ ಮಾಡಿ ಪರೀಕ್ಷೆಗಳನ್ನು ಎದುರಿಸಿ ಸರ್ಕಾರವ ಪೊಲೀಸ್, ಆಹಾರ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಅರಣ್ಯ, ನ್ಯಾಯಾಲಯ ಇನ್ನಿತರ ಇಲಾಖೆಗಳಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಹಲವ ರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾ ಯಿತು. ಸಪ್ತಾಹ ಅಂಗವಾಗಿ ಶಾಖೆ ವತಿ ಯಿಂದ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡ ಲಾಯಿತು. ನಗರಪಾಲಿಕೆ ಸದಸ್ಯೆ ಸುನಂದಾ ಪಾಲ ನೇತ್ರ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಕಚೇರಿ 2ರ ವಲಯ ಆಯುಕ್ತರಾದ ವಿ.ಪ್ರಿಯದರ್ಶಿನಿ, ಶಾಖಾ ಗ್ರಂಥಾಲಯದ ಪ್ರಭಾರ ದಾರಕಿ ಎಸ್.ಸೌಮ್ಯ, ಶಾಖಾ ಸಮಿತಿ ಸದಸ್ಯರಾದ ಡಿ.ಬಿ.ಪರಮೇಶ್ವರಪ್ಪ, ಮಮತಾ, ವಿ.ಬಿ.ಮೈನಾವತಿ, ಹೆಬ್ಬಾಳ ಶಾಖಾ ಪ್ರಭಾರ ದಾರಕಿ ಕುಸುಮಾ, ನಗರ ಕೇಂದ್ರ ಗ್ರಂಥಾಲಯದ ಎಂ.ಪಾರ್ವತಿ, ಶ್ವೇತಾ ಇನ್ನಿತರರು ಉಪಸ್ಥಿತರಿದ್ದರು.

Translate »