ಮೈಸೂರು

ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‍ಷಿಪ್ ಸ್ಪರ್ಧೆ ವಿಜೇತರು
ಮೈಸೂರು

ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‍ಷಿಪ್ ಸ್ಪರ್ಧೆ ವಿಜೇತರು

November 6, 2018

ಮೈಸೂರು: ಕರಾಟೆ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಅಂತರ ರಾಷ್ಟ್ರೀಯ ಸೌತ್ ಏಷಿಯಾ ಕರಾಟೆ ಚಾಂಪಿಯನ್‍ಷಿಪ್ ಸ್ಪರ್ಧೆ ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಭಾರತದ ಪಟುಗಳು ಅಪ್ರತಿಮ ಸಾಧನೆಯನ್ನು ಮಾಡಿ 27 ಚಿನ್ನದ ಪದಕಗಳು, 30 ಬೆಳ್ಳಿ ಪದಕಗಳು ಹಾಗೂ 10 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಧನಲಕ್ಷ್ಮಿ ಆರ್.ಪಗಡೆ, ಬಿ.ಆದಿತ್ಯ ಕುಮಾರ್, ಪಿ.ಸೌಜನ್ಯ, ಜಯಶ್ರೀ ಪದ್ಮರಾಜ್, ಮಹೇಶ್ ಪ್ರಸಾದ್, ರಕ್ಷಾ, ಮಿಣಾಲ್ ಪ್ರಸಾದ್, ರವೀಂದ್ರ, ವಿ. ಆಕೃತಿ, ಸತ್ಯನಾರಾಯಣ, ಹೇಮಂತ್ ಕುಮಾರ್ ಹಾಗೂ ಎಂ.ಆರ್.ರವಿಶಂಕರ್ ಚಿನ್ನದ ಪದಕವನ್ನು ಗೆದ್ದಿದ್ದಾರೆ….

ಆಪರೇಷನ್ ಚಾಮುಂಡಿ: ವಾರದಲ್ಲಿ 28 ಪ್ರಕರಣ ದಾಖಲು
ಮೈಸೂರು

ಆಪರೇಷನ್ ಚಾಮುಂಡಿ: ವಾರದಲ್ಲಿ 28 ಪ್ರಕರಣ ದಾಖಲು

November 6, 2018

ಮೈಸೂರು: ಆಪರೇಷನ್ ಚಾಮುಂಡಿ ತೀವ್ರಗೊಳಿಸಿರುವ ಮೈಸೂರಿನ ಕೆ.ಆರ್.ಠಾಣೆ ಪೊಲೀಸರು, ವಾರದಲ್ಲಿ 28 ಪ್ರಕರಣಗಳನ್ನು ದಾಖಲಿಸಿದ್ದಾರೆ. ಚಾಮುಂಡಿಬೆಟ್ಟದಲ್ಲಿ ಹುಡುಗಿಯ ರೊಂದಿಗೆ ಚೆಲ್ಲಾಟ, ಅಡ್ಡಾದಿಡ್ಡಿ ವಾಹನ ಚಾಲನೆ, ಬೆದರಿಸಿ ಹಣ-ಆಭರಣ ದೋಚುವುದು, ಸರ ಅಪಹರಣಗಳಂ ತಹ ಅಪರಾಧ ಚಟುವಟಿಕೆಯನ್ನು ನಿಯಂತ್ರಿಸುವ ಸಲುವಾಗಿ 2010ರಲ್ಲಿ ಆರಂಭವಾದ ‘ಆಪರೇಷನ್ ಚಾಮುಂಡಿ’ಯನ್ನು ತೀವ್ರಗೊಳಿಸಿರುವ ಪೊಲೀ ಸರು, ಗರುಡ-ಚೀತಾ ವಾಹನಗಳಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಕಳೆದ 1 ವಾರದಲ್ಲಿ 28 ಪ್ರಕ ರಣಗಳನ್ನು ದಾಖಲಿಸಿಕೊಂಡಿರುವ ಕೆ.ಆರ್.ಠಾಣೆ ಇನ್‍ಸ್ಪೆಕ್ಟರ್ ಪ್ರಕಾಶ್, ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ…

ನಿಷ್ಕ್ರಿಯಗೊಂಡ ಮೆದುಳಿನ ಭಾಗಕ್ಕೆ ಚಿಕಿತ್ಸೆ ನೀಡುವ  ವಿಧಾನಗಳ ಬಗ್ಗೆ ನಿಮ್ಹಾನ್ಸ್‍ನಲ್ಲಿ ಸಂಶೋಧನೆ
ಮೈಸೂರು

ನಿಷ್ಕ್ರಿಯಗೊಂಡ ಮೆದುಳಿನ ಭಾಗಕ್ಕೆ ಚಿಕಿತ್ಸೆ ನೀಡುವ  ವಿಧಾನಗಳ ಬಗ್ಗೆ ನಿಮ್ಹಾನ್ಸ್‍ನಲ್ಲಿ ಸಂಶೋಧನೆ

November 6, 2018

ಮೈಸೂರು: ಪಾಶ್ರ್ವವಾಯು ಗುಣಪಡಿ ಸಲು ನಿಷ್ಕ್ರಿಯಗೊಂಡ ಮೆದುಳಿನ ಭಾಗವನ್ನು ಪರಿ ಣಾಮಕಾರಿ ಚಿಕಿತ್ಸಾ ವಿಧಾನಗಳ ಮೂಲಕ ಉದ್ದೀಪನ ಗೊಳಿಸುವ ಸಂಬಂಧ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆ ಯಲ್ಲಿ ಸಂಶೋಧನೆ ಪ್ರಗತಿಯಲ್ಲಿದೆ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ತಿಳಿಸಿದರು. ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಶ್ರೀರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಸ್ಪತ್ರೆ ಹಾಗೂ ಜೆಎಸ್‍ಎಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಜಂಟಿ ಆಶ್ರಯದಲ್ಲಿ `ವಿಶ್ವ ಪಾಶ್ರ್ವವಾಯು ಪೀಡಿತರ ದಿನ’ದ ಅಂಗವಾಗಿ ಪಾಶ್ರ್ವವಾಯು (ಲಕ್ವ ಅಥವಾ ಮೆದುಳಿನ ಆಘಾತ) ಕುರಿತಂತೆ ಬುಧ ವಾರ…

ನ.12ರಂದು ಚಾಮುಂಡಿಬೆಟ್ಟದ ನಂದಿಗೆ ಮಹಾರುದ್ರಾಭಿಷೇಕ
ಮೈಸೂರು

ನ.12ರಂದು ಚಾಮುಂಡಿಬೆಟ್ಟದ ನಂದಿಗೆ ಮಹಾರುದ್ರಾಭಿಷೇಕ

November 6, 2018

ಮೈಸೂರು:  ಮೈಸೂರು ಬಂಬೂಬಜಾರ್‍ನ ಮೆಟ್ಟಲು ಹತ್ತುವ ಬಳಗದ ವತಿಯಿಂದ ನ.12ರಂದು ಚಾಮುಂಡಿ ಬೆಟ್ಟದ ನಂದಿ ಪ್ರತಿಮೆಗೆ 8ನೇ ವರ್ಷದ ಮಹಾರುದ್ರಾಭಿಷೇಕ ಏರ್ಪಡಿಸ ಲಾಗಿದೆ ಎಂದು ಬಳಗದ ಸಂಚಾ ರವಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಅಭಿಷೇಕ ನಡೆಯಲಿದೆ. 500 ಲೀ. ಹಾಲು, 250 ಲೀ. ಮೊಸರು ಸೇರಿದಂತೆ 47 ಬಗೆಯ ಫಲಪುಷ್ಪ ದ್ರವ್ಯಗಳಿಂದ ಅಭಿಷೇಕ ಮಾಡಲಾಗುವುದು. ಬಳಿಕ ಪ್ರತಿಮೆಯನ್ನು ನೀರಿನಿಂದ ಶುಚಿಗೊಳಿಸಲಾಗುವುದು…

ಎಕ್ಸಿಸ್ ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ
ಮೈಸೂರು

ಎಕ್ಸಿಸ್ ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ

November 6, 2018

ಮಡಿಕೇರಿ: ಸರಕಾರದ ಆದೇಶವನ್ನು ಮೀರಿ ಬೆಳೆಗಾಂನ ರೈತರಿಗೆ ಸಾಲ ವಸೂಲಿಯ ನೋಟಿಸ್ ನೀಡಿ ಬಂಧಿಸಲು ಒತ್ತಡ ಹೇರಿರುವ ಕೋಲ್ಕತ್ತ ಎಕ್ಸಿಸ್ ಬ್ಯಾಂಕ್‍ನ ಕ್ರಮವನ್ನು ಖಂಡಿಸಿ ಕೊಡಗು ರೈತ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಎಕ್ಸಿಸ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ ರೈತ ಸಂಘದ ಸದಸ್ಯರು ಎಕ್ಸಿಸ್ ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ರೈತರ ನೆರವಿಗೆ ಬಾರದ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ರೈತರನ್ನು ಸಾಲ ಕಟ್ಟುವಂತೆ ಪೀಡಿಸು ತ್ತಿರುವ ಎಕ್ಸಿಸ್…

ಬಿಜೆಪಿ ಕೈತಪ್ಪಲಿದೆಯೇ ಬಳ್ಳಾರಿ?
ಮೈಸೂರು

ಬಿಜೆಪಿ ಕೈತಪ್ಪಲಿದೆಯೇ ಬಳ್ಳಾರಿ?

November 5, 2018

ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಪಕ್ಷಗಳು ಮೇಲುಗೈ ಸಾಧಿಸಲಿದ್ದು, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಜಯಗಳಿಸಲಿದ್ದಾರೆ ಎಂದು ಗುಪ್ತಚರ ಇಲಾಖೆಯು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಿರಾಯಾಸವಾಗಿ ಗೆಲುವು ಸಾಧಿಸಲಿದೆ. ಅದೇ ರೀತಿ ಬಳ್ಳಾರಿ ಲೋಕಸಭೆ ಮತ್ತು ಜಮ ಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ…

ತರಕಾರಿ ಬೆಲೆ ದಿಢೀರ್ ಕುಸಿತ: ರೈತರಿಂದ ಪ್ರತಿಭಟನೆ
ಮೈಸೂರು

ತರಕಾರಿ ಬೆಲೆ ದಿಢೀರ್ ಕುಸಿತ: ರೈತರಿಂದ ಪ್ರತಿಭಟನೆ

November 5, 2018

ಮೈಸೂರು: ತರಕಾರಿ ಬೆಲೆ ದಿಢೀರ್ ಕುಸಿತ ವಾದ ಹಿನ್ನೆಲೆಯಲ್ಲಿ ಭಾನುವಾರ ರೈತರು ಬಂಡಿಪಾಳ್ಯದಲ್ಲಿರುವ ಎಪಿಎಂಸಿಯ ಉಪಕಚೇರಿಯ ಬಳಿ ರೈತರು ನೆಲಕ್ಕೆ ತರಕಾರಿ ಸುರಿದು ಪ್ರತಿಭಟನೆ ನಡೆಸಿದರು. ಮೈಸೂರು ತಾಲೂಕು ಸೇರಿದಂತೆ ವಿವಿಧೆಡೆಗಳಿಂದ ಭಾನುವಾರ ತಾವು ಬೆಳೆದಿದ್ದ ತರಕಾರಿಗಳನ್ನು ಮಾರಾಟ ಮಾಡಲು ತಂದಿದ್ದ ನೂರಾರು ರೈತರು ಬೆಲೆ ಕುಸಿತದಿಂದ ಕಂಗೆಟ್ಟು ಪ್ರತಿಭಟನೆ ನಡೆಸಿದರು. ಕಳೆದ ಮೂರು ದಿನದ ಹಿಂದೆ ಇದ್ದ ಬೆಲೆಗೂ ಇಂದು ನಿಗದಿಯಾದ ಬೆಲೆಗೂ ಶೇ.50ರಿಂದ 60ರಷ್ಟು ಕಡಿಮೆಯಾಗಿದ್ದರಿಂದ ರೊಚ್ಚಿಗೆದ್ದ ರೈತರು ಎಪಿಎಂಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು….

ಮೈಸೂರಲ್ಲಿ ಪಟಾಕಿ ಅಂಗಡಿಗಳ ಆರಂಭ
ಮೈಸೂರು

ಮೈಸೂರಲ್ಲಿ ಪಟಾಕಿ ಅಂಗಡಿಗಳ ಆರಂಭ

November 5, 2018

ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಮೈಸೂರಿನ ಜೆ.ಕೆ.ಮೈದಾನ ಸೇರಿದಂತೆ ವಿವಿಧೆಡೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ನ.8ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಪಟಾಕಿ ಮಾರಾಟದ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಟಾಕಿ ಮಾರಾಟ ಮಾಡುವುದಕ್ಕೆ ನಗರಪಾಲಿಕೆ ಕೆಲ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ವಿವಿಧ ಬಡಾವಣೆಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಗ್ರಾಹಕರು ಒಂದೇ ಸ್ಥಳದಲ್ಲಿ ಜಮಾಯಿಸುವುದನ್ನು ತಪ್ಪಿಸಿದಂತಾಗಿದೆ. ಜೆ.ಕೆ.ಮೈದಾನ, ಹೆಬ್ಬಾಳು ಕೈಗಾರಿಕಾ ಪ್ರದೇಶ, ಹಿನಕಲ್, ಬೋಗಾದಿ ರಿಂಗ್ ರಸ್ತೆ, ರಾಮಕೃಷ್ಣನಗರ,…

ಇಂದು ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ
ಮೈಸೂರು

ಇಂದು ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ

November 5, 2018

ತಿರುವನಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಒಂದು ದಿನದ ಪೂಜೆಗಾಗಿ ಸೋಮವಾರ ತೆರೆಯಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶನಿವಾರದಿಂದಲೇ ಶಬರಿ ಮಲೆ ಸುತ್ತುಮುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಎಲ್ಲಾ ವಯೋಮಾನದ ಮಹಿಳೆಯರು ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು 5 ದಿನಗಳ ಪೂಜೆಗಾಗಿ ಅಯ್ಯಪ್ಪ ಸ್ವಾಮಿ ದೇಗುಲ ತೆರೆದಾಗ ಅಹಿತಕರ ಘಟನೆ ಗಳು ನಡೆದಿದ್ದವು. ಕೆಲವು ಮಹಿಳೆಯರು ದೇಗುಲ ಪ್ರವೇಶಿಸಲು ಪ್ರಯತ್ನಿಸಿದರಾದರೂ, ಸಾವಿರಾರು ಭಕ್ತಾದಿಗಳು…

ಪಾಲಿಕೆಯಿಂದ ಪ್ಲಾಸ್ಟಿಕ್ ಕಸ ಖರೀದಿಗೆ ಐಟಿಸಿ ಕಂಪನಿ ಒಡಂಬಡಿಕೆ
ಮೈಸೂರು

ಪಾಲಿಕೆಯಿಂದ ಪ್ಲಾಸ್ಟಿಕ್ ಕಸ ಖರೀದಿಗೆ ಐಟಿಸಿ ಕಂಪನಿ ಒಡಂಬಡಿಕೆ

November 5, 2018

ಮೈಸೂರು: ಮೈಸೂರು ನಗರದಲ್ಲಿ ಪ್ರತಿ ದಿನ ಸಂಗ್ರಹವಾಗುವ ಪ್ಲಾಸ್ಟಿಕ್ ಕಸದ ಸಮಸ್ಯೆ ನೀಗಿಸು ವುದಕ್ಕಾಗಿ ಮೈಸೂರು ನಗರಪಾಲಿಕೆ ಮತ್ತೊಂದು ಹೆಜ್ಜೆ ಯೊಂದನ್ನು ಇಟ್ಟಿದ್ದು, ಐಟಿಸಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಪ್ಲಾಸ್ಟಿಕ್ ಕಸ ನೀಡುವುದಕ್ಕೆ ಮುಂದಾಗಿದೆ. ಮೈಸೂರು ನಗರದಲ್ಲಿ ಪ್ರತಿದಿನ 400 ರಿಂದ 450 ಟನ್ ಕಸ ಸಂಗ್ರಹವಾಗುತ್ತಿದ್ದು, ಅದರಲ್ಲಿ 120ರಿಂದ 130 ಟನ್ ಪ್ಲಾಸ್ಟಿಕ್ ಕಸ ಸಂಗ್ರಹವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕಸಗಳನ್ನು ನಿರ್ವಹಣೆ ಮಾಡು ವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಈ ಹಿನ್ನೆಲೆ ಯಲ್ಲಿ ಪ್ಲಾಸ್ಟಿಕ್…

1 1,296 1,297 1,298 1,299 1,300 1,611
Translate »