ಮೈಸೂರು: ಮೈಸೂ ರಿನ ವಿಜಯನಗರ 3ನೇ ಹಂತದ ಎ ಬ್ಲಾಕ್ ನಲ್ಲಿ ಬಂಟರ ಸಂಘ ನಿರ್ಮಿಸಿರುವ ಆಶಾ ಪ್ರಕಾಶ್‍ಶೆಟ್ಟಿ ಬಂಟ್ಸ್ ಕನ್ವೆನ್ಷನ್ ಹಾಲ್ ಅನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಶನಿವಾರ ಉದ್ಘಾಟಿಸಿದರು. ಉದ್ಘಾಟನೆಗೂ ಮುನ್ನ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಚಂಡೆ ಮದ್ದಳೆ ಸದ್ದಿನ ನಡುವೆ, ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಕರೆ ತರ ಲಾಯಿತು. ತುಳು ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹೆಗ್ಗಡೆ ಅವರಿಗೆ ಗೌರವ ಸಮರ್ಪಿಸಲಾಯಿತು. ಮಾತನಾಡಿದ ಡಾ.ವೀರೇಂದ್ರ ಹೆಗ್ಗಡೆ ಅವರು, ಬಂಟರು ಶ್ರಮ ಜೀವಿಗಳು….
ಬಾಯಲ್ಲಿ ಮಾತ್ರ ಸುಂದರ ನಗರ, ಕಂಡಕಂಡಲ್ಲಿ ತಲೆಯೆತ್ತುತ್ತಿರುವ ಗೂಡಂಗಡಿ, ಬೀದಿಬದಿ ವ್ಯಾಪಾರ
November 4, 2018ಮೈಸೂರು: ಮೈಸೂರಿನ ವಿಜಯನಗರದಲ್ಲಿರುವ ಕೃಷ್ಣ ದೇವರಾಯ ವೃತ್ತ ಬೀದಿಬದಿ ವ್ಯಾಪಾರಿ ತಾಣವಾಗಿರುವುದು ವಿಷಾದನೀಯ. ಸುಂದರ ನಗರಿ ಮೈಸೂರಿನಲ್ಲಿ ಫುಟ್‍ಪಾತ್‍ಗಳೇ ಪ್ರಮುಖ ವ್ಯಾಪಾರಿ ಸ್ಥಳ. ಅದೆಷ್ಟು ಬಾರಿ ಫುಟ್‍ಪಾತ್ ಗೂಡಂಗಡಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ನಗರಪಾಲಿಕೆಯಲ್ಲೂ ಲೆಕ್ಕವಿಲ್ಲ?. ಆದರೂ ಫುಟ್‍ಪಾತ್‍ಗಳು ಪಾದಚಾರಿಗಳಿಗೆ ಮುಕ್ತವಾಗಿಲ್ಲ. ಹಾಗೆಯೇ ಬೀದಿ ಬದಿ ವ್ಯಾಪಾರವನ್ನೇ ಜೀವನಕ್ಕೆ ನೆಚ್ಚಿಕೊಂಡಿ ರುವ ಬಡ ವ್ಯಾಪಾರಿಗಳಿಗೂ ಸೂಕ್ತ ನೆಲೆ ಸಿಕ್ಕಿಲ್ಲ. ಆದ್ದರಿಂದ ಒಂದೆಡೆ ತೆರವಾದರೆ ಮತ್ತೊಂದೆಡೆ ಗೂಡಂಗಡಿಗಳು, ತಳ್ಳುಗಾಡಿ ಗಳು ಕಾಣಿಸಿಕೊಳ್ಳುತ್ತಿವೆ. ಇದೊಂದು ಮುಗಿಯದ ಕತೆ-ವ್ಯಥೆಯಂತಾಗಿದೆ. ಇದೀಗ…
ನ.10ರಂದು ಟಿಪ್ಪು ಜಯಂತಿ ಆಚರಣೆ: ಸರ್ಕಾರ ನಿರ್ಧಾರ
November 4, 2018ಬೆಂಗಳೂರು: ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಶನಿವಾರ ಹೇಳಿದ್ದಾರೆ. ವಿಧಾನಸೌಧದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯ ಮಾಲಾ, ಟಿಪ್ಪು ಜಯಂತಿ ಆಚರಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈಗಾಗಲೇ ನಿರ್ಧರಿಸಿದ್ದಾರೆ. ಟಿಪ್ಪು ಜಯಂತಿ ಆಚರಿಸುವುದು ನಮ್ಮ ಕರ್ತವ್ಯ. ಏನಾದರೂ ಅನಾ ಹುತವಾದರೆ ಅದಕ್ಕೆ ಬಿಜೆಪಿಯವರೇ ಹೊಣೆ ಎಂದರು.
ಮನುಷ್ಯನ ಆಲೋಚನಾ ಶಕ್ತಿ ಹೆಚ್ಚಿಸುವ ವಿಜ್ಞಾನ ಪ್ರಯೋಗ
November 4, 2018ವಿಜ್ಞಾನ ಪ್ರದರ್ಶನದಲ್ಲಿ ಸ್ವಾಮಿ ಯುಕ್ತೇಶಾನಂದಜೀ ಮಹರಾಜ್ ಮೈಸೂರು: ವಿಜ್ಞಾನ ಪ್ರಯೋಗಗಳು ಮನುಷ್ಯನ ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ರಾಮಕೃಷ್ಣ ವಿದ್ಯಾ ಶಾಲೆಯ ಕರೆಸ್ಟಾಂಡೆಂಟ್ ಸ್ವಾಮಿ ಯುಕ್ತೇಶಾನಂದಜೀ ಮಹರಾಜ್ ಅಭಿಪ್ರಾಯಪಟ್ಟರು. ಮೈಸೂರಿನ ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾ ಕೇಂದ್ರದ ಶಾರದಾ ಸಭಾಂಗಣದಲ್ಲಿ ರಾಮಕೃಷ್ಣ ವಿದ್ಯಾ ಕೇಂದ್ರ, ಆರ್‍ಕೆವಿಕೆ ಸಂಯುಕ್ತ ಪದವಿಪೂರ್ವ ಕಾಲೇಜು, ಬೆಂಗಳೂರಿನ ಗ್ಯಾನ್‍ಪ್ರೊ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಿದ್ದ ವಿಜ್ಞಾನ ಪ್ರದರ್ಶನ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾವುದೇ ವಿಷಯವನ್ನಾದರೂ ಆಸಕ್ತಿಯಿಂದ ಕೇಳಿಸಿಕೊಂಡು, ಮನನ ಮಾಡಿ ಅದರಲ್ಲಡಗಿರುವ ವಿಷಯವನ್ನು ತಿಳಿದು,…
ಸ್ಕೌಟ್ಸ್-ಗೈಡ್ಸ್‍ಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯಲು ವಿವಿಧ ಕಾರ್ಯಕ್ರಮ
November 4, 2018ಮೈಸೂರು: ಪರಿಸರ ಪ್ರಜ್ಞೆ, ರಾಷ್ಟ್ರಪ್ರೇಮದೊಂದಿಗೆ ಪ್ರಜಾಪ್ರಭುತ್ವದ ಮೌಲ್ಯವನ್ನು ತಿಳಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಪ್ರಧಾನ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದ್ದಾರೆ. ಮೈಸೂರಿನ ಬೇಡನ್ ಪೊವೆಲ್ ಶಾಲೆಯ ಆವರಣದಲ್ಲಿರುವ ಜಯಚಾಮ ರಾಜೇಂದ್ರ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ಮೈಸೂರು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳ ಒಂದು ದಿನದ…
ಕ್ರೆಡೈ ಯೂತ್ ವಿಂಗ್ ಉದ್ಘಾಟನೆ
November 4, 2018ಮೈಸೂರು: ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ ಅಸೋಸಿಯೇಷÀನ್ ಆಫ್ ಇಂಡಿಯಾ(ಕ್ರೆಡೈ)ನ ಅಂಗ ಸಂಸ್ಥೆ ‘ಕ್ರೆಡೈ ಯೂತ್ ವಿಂಗ್’ ಇಂದು ಉದ್ಘಾಟನೆಯಾಯಿತು. ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಮಾ ರಂಭದಲ್ಲಿ ಕ್ರೆಡೈ ರಾಜ್ಯಾಧ್ಯಕ್ಷ ಡಾ.ವಿ.ಕೆ.ಜಗದೀಶ್ ಬಾಬು ಉದ್ಘಾಟಿಸಿದರು. ದೇಶದ ಎಲ್ಲಾ ವರ್ಗದ ಜನರಿಗೆ ಮನೆಯನ್ನು ಕಲ್ಪಿಸಿಕೊಡುವ ಸಂಸ್ಥೆಯ ಧ್ಯೇಯವನ್ನು ಪಾಲಿಸಬೇಕು. ದೇಶದಲ್ಲಿ ಭ್ರಷ್ಟಾಚಾರ ಮುಕ್ತವಾಗಿ ನಮ್ಮ ಸಂಸ್ಥೆ ಕಾರ್ಯ ನಿರ್ವಹಿ ಸುತ್ತಿದೆ. ಅದಕ್ಕೆ ಸದಸ್ಯರೆಲ್ಲರೂ ಸಹಕಾರ ನೀಡಬೇಕು ಎಂದರು. ಕ್ರೆಡೈನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಕೆ.ಶ್ರೀರಾಮ್ ಮಾತನಾಡಿ,…
ಅನಗತ್ಯ ಚುನಾವಣೆಯಿಂದ ಮತದಾರರ ನಿರಾಸಕ್ತಿ: ಸಾಲಿಗ್ರಾಮದಲ್ಲಿ ಮತ ಚಲಾಯಿಸಿದ ಸಚಿವ ಸಾ.ರಾ.ಮಹೇಶ್ ವ್ಯಾಖ್ಯಾನ
November 4, 2018ಚುಂಚನಕಟ್ಟೆ: ಜನಾ ದೇಶಕ್ಕೆ ವಿರುದ್ಧವಾಗಿ ಚುನಾವಣಾ ಆಯೋಗವು ನಡೆಸುತ್ತಿರುವ ಚುನಾವಣೆಯಿಂದ ಮತ ದಾರರಿಗೆ ಮತದಾನ ಮಾಡಲು ಆಸಕ್ತಿ ಇಲ್ಲದಂತಾಗಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದರು. ಸಾ.ರಾ.ಮಹೇಶ್ ಅವರ ಹುಟ್ಟೂರು ಸಾಲಿಗ್ರಾಮದ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ-79ರಲ್ಲಿ ಪತ್ನಿ ಅನಿತಾ ಹಾಗೂ ಪುತ್ರ ಡಾ.ಧನುಷ್ ಅವರೊಂದಿಗೆ ಮತದಾನ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಅಭ್ಯರ್ಥಿ ಶಿವರಾಮೇಗೌಡ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳ ಅಂತರ ದಿಂದ…
ಚಿಪ್ಪು ಹಂದಿ ಮಾರಾಟ ಯತ್ನ: ಮೂವರ ಬಂಧನ
November 4, 2018ಮೈಸೂರು: ಚಿಪ್ಪು ಹಂದಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳ ಬಂಧಿಸಿದೆ. ನಾಗರಾಜು ಪುತ್ರ ಬಸವರಾಜು(30), ಮಧು ಪುತ್ರ ಯೋಗೇಶ್(29) ಹಾಗೂ ಸಿದ್ದಯ್ಯ ಪುತ್ರ ಬಸವರಾಜು(31) ಬಂಧಿತ ಆರೋಪಿಗಳು. ಇವರು ಚೀಲದಲ್ಲಿ ಚಿಪ್ಪು ಹಂದಿಯನ್ನು ಇಟ್ಟುಕೊಂಡು ನಂಜನ ಗೂಡು-ಚಾಮರಾಜನಗರ ರಸ್ತೆಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ, ಚಿಪ್ಪು ಹಂದಿಯನ್ನು ರಕ್ಷಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಲ್ಲದೆ, ಕೃತ್ಯಕ್ಕೆ ಬಳಸಿದ್ದ ಪ್ಯಾಷನ್ ಪ್ರೋ(ಕೆಎ-45, ವೈ-2711) ಹಾಗೂ ಹೀರೋ ಸ್ಪ್ಲೆಂಡರ್(ಕೆಎ-09),…
ಸ್ವಚ್ಛತಾ ಕಾರ್ಯ ಕೈಬಿಟ್ಟ ಗುತ್ತಿಗೆ ಪೌರ ಕಾರ್ಮಿಕರು
November 4, 2018ನಂಜನಗೂಡು: ಸಮರ್ಪಕ ಸಂಬಳ ದೊರೆಯದ ಹಿನ್ನೆಲೆ ಅಸಮಾಧಾನಗೊಂಡಿರುವ ಗುತ್ತಿಗೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಬಿಟ್ಟಿದ್ದು, ನಗರ ಗಬ್ಬುನಾರುವಂತಾಗಿದೆ. ತಮಗೆ ವರ್ಷದಿಂದ ಸರಿಯಾಗಿ ಸಂಬಳ ನೀಡುತ್ತಿಲ್ಲವೆಂದು ಅಧಿಕಾರಿಗಳ ವಿರುದ್ಧ ಆಪಾದಿಸಿ, ಕಳೆದೆರಡು ದಿನಗಳಿಂದ ನಗರಸಭಾ ಪೌರ ಕಾರ್ಮಿಕರು ಕಸದ ವಿಲೇವಾರಿ ವಾಹನಗಳು, ಕೈಗಾಡಿಗಳನ್ನು ಮುಟ್ಟದೆ ದೂರ ಉಳಿದಿದ್ದು, ಮೌನವಾಗಿ ಪ್ರತಿಭಟಿಸುತ್ತಿದ್ದಾರೆ. ಇದರಿಂದ ನಗರದ ಮುಖ್ಯ ರಸ್ತೆಗಳು, ಚರಂಡಿಗಳು ಸೇರಿದಂತೆ ಎಲ್ಲಾ ವಾರ್ಡ್‍ಗಳಲ್ಲಿ ಕಸ ಸಂಗ್ರಹವಾಗಿದ್ದು, ದಕ್ಷಿಣಕಾಶಿ ನಂಜನಗೂಡು ತ್ಯಾಜ್ಯ ನಗರವಾಗಿದೆ. ನಗರದ ಅಲ್ಲಲ್ಲಿ ಕಸದ ರಾಶಿ ಕಂಡುಬರುತ್ತಿದ್ದು, ದುರ್ವಾಸನೆ…
ಕಾಡಾನೆಗಳ ದಾಳಿ: ಬೆಳೆ ನಾಶ
November 4, 2018ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಗುರುಪುರ ಭಾಗದಲ್ಲಿ ಕಾಡಾನೆಗಳ ಹಿಂಡು ದಾಳಿಗೆ ಭತ್ತ, ರಾಗಿ ಬೆಳೆ ನಾಶವಾಗಿದೆ. ಗುರುಪುರ ಸಮೀಪದ ಗೌಡನಕಟ್ಟೆಯ ಶ್ರೀನಿವಾಸಶೆಟ್ಟಿ ಹಾಗೂ ಬೀರೇಗೌಡರಿಗೆ ಸೇರಿದ ಭತ್ತದ ಗದ್ದೆಗೆ ಆನೆಗಳ ಹಿಂಡು ಲಗ್ಗೆ ಇಟ್ಟಿದ್ದು, ಭತ್ತದ ಫಸಲನ್ನು ತಿಂದು, ತುಳಿದು ನಾಶಪಡಿಸಿವೆ. ಆನೆಗಳು ಕಾಡಿಗೆ ವಾಪಾಸ್ ಆಗುವ ವೇಳೆ ಗ್ರಾಮದ ನಾಗನಾಯ್ಕ ಅವರಿಗೆ ಸೇರಿದ ಸುಮಾರು ಒಂದು ಎಕರೆಯಷ್ಟು ರಾಗಿ ಬೆಳೆಯನ್ನು ತಿಂದು ಹಾಕಿವೆ. ಒಟ್ಟಾರೇ ಬೆಳೆ ನಾಶದಿಂದ 2 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ….