ಮೈಸೂರು: ಮೈಸೂ ರಿನ ವಿಜಯನಗರ 3ನೇ ಹಂತದ ಎ ಬ್ಲಾಕ್ ನಲ್ಲಿ ಬಂಟರ ಸಂಘ ನಿರ್ಮಿಸಿರುವ ಆಶಾ ಪ್ರಕಾಶ್‍ಶೆಟ್ಟಿ ಬಂಟ್ಸ್ ಕನ್ವೆನ್ಷನ್ ಹಾಲ್ ಅನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಶನಿವಾರ ಉದ್ಘಾಟಿಸಿದರು.
ಉದ್ಘಾಟನೆಗೂ ಮುನ್ನ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಚಂಡೆ ಮದ್ದಳೆ ಸದ್ದಿನ ನಡುವೆ, ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಕರೆ ತರ ಲಾಯಿತು. ತುಳು ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹೆಗ್ಗಡೆ ಅವರಿಗೆ ಗೌರವ ಸಮರ್ಪಿಸಲಾಯಿತು.
ಮಾತನಾಡಿದ ಡಾ.ವೀರೇಂದ್ರ ಹೆಗ್ಗಡೆ ಅವರು, ಬಂಟರು ಶ್ರಮ ಜೀವಿಗಳು. ವ್ಯಾಪಾರ ಉದ್ದೇಶಕ್ಕಾಗಿ ದೇಶದ ಒಳಗೆ ಮತ್ತು ಹೊರಗೆ ವಾಸವಿದ್ದು, ತಾವು ಅಭಿವೃದ್ಧಿ ಹೊಂದುವ ಜೊತೆಗೆ, ತಮ್ಮ ಸಮುದಾಯ ವನ್ನು ಅಭಿವೃದ್ಧಿಪಡಿಸುತ್ತಾರೆ. ಯಾವುದೇ ಪ್ರದೇಶದ ಜನರೊಂದಿಗೆ, ಆ ಪರಿಸರಕ್ಕೆ ಹೊಂದಿಕೊಂಡು ಜೀವನ ಮಾಡುವವರು. ತಮಿಳುನಾಡಿನಲ್ಲಿ ತಮಿಳರಂತೆ, ಆಂಧ್ರ ಪ್ರದೇಶದಲ್ಲಿ ತೆಲುಗರಂತೆ, ಮಹಾ ರಾಷ್ಟ್ರದ ಇನ್ನಿತರ ಕಡೆಗಳಲ್ಲಿ ಅಲ್ಲಿಯ ಜನಜೀವ ನಕ್ಕೆ ಹೊಂದಿಕೊಂಡು ಬೆಳೆಯುವ ವ್ಯಕ್ತಿತ್ವ ಅವರದ್ದು ಎಂದರು.
ಎಲ್ಲಿಯೇ ಜೀವನ ನಡೆಸುತ್ತಿದ್ದರೂ ಅಲ್ಲಿನ ಜನ ಗುರುತಿಸುವ ರೀತಿಯಲ್ಲಿಯೇ ಬದುಕು ನಡೆಸುವ ಬಂಟರು, ಅಹಂಕಾರ ವಿಲ್ಲದೆ, ಜನರೊಂದಿಗೆ ಕೂಡಿ, ಗೌರವ ಹೆಚ್ಚಿಸಿಕೊಳ್ಳುತ್ತಾರೆ. ಸಮಾಜದಿಂದ ಪಡೆ ದದ್ದನ್ನು ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಸಮಾಜವನ್ನು ಪ್ರೀತಿಸಿ, ಸಮಾಜ ದಿಂದ ಪ್ರೀತಿಯನ್ನು ಪಡೆದುಕೊಳ್ಳುವ ಸ್ವಭಾವ ಹೊಂದಿದ್ದಾರೆ ಎಂದು ಹೇಳಿದರು.
ಒಂದು ಕೈಯ್ಯಲ್ಲಿ ಸಂಪಾದನೆ ಮಾಡಿ ದ್ದನ್ನು ಇನ್ನೊಂದು ಕೈಯಲ್ಲಿ ದಾನ ನೀಡ ಬೇಕು ಎಂಬ ತತ್ವದಡಿ ಬದುಕು ನಡೆ ಸುತ್ತಾ, ಧರ್ಮ ಕಾರ್ಯದಲ್ಲಿ ಪಾಲ್ಗೊಂಡು ಇನ್ನಷ್ಟು ಅಭಿವೃದ್ಧಿ ಹೊಂದುತ್ತಾರೆ. ನಾನು ಸುಖವಾಗಿರಬೇಕು. ಜೊತೆಗೆ ಸುತ್ತಲಿನ ಸಮಾಜವನ್ನು ಸುಖವಾಗಿಡಬೇಕು ಎಂಬುದು ಅವರ ಧ್ಯೇಯ ಎಂದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ ಜಿ.ಟಿ.ದೇವೇಗೌಡರು ಮಾತನಾಡಿ, ಬಂಟರ ಕೊಡುಗೆಯನ್ನು ಪ್ರಸ್ತಾಪಿಸಿ, ಜನಪದ, ಸಾಹಿತ್ಯ ಸೇರಿದಂತೆ ಪ್ರತಿ ಕ್ಷೇತ್ರದಲ್ಲೂ ಇತಿ ಹಾಸ ನಿರ್ಮಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಟ್ಟಡದ ಮಹಾ ಪೋಷಕರಾದ ಎಂಆರ್‍ಜಿ ಸಮೂಹ ಸಂಸ್ಥೆಗಳ ಛೇರ್ಮನ್ ಕೆ.ಪ್ರಕಾಶ್‍ಶೆಟ್ಟಿ, ಎಂಸಿಐ ಸಮೂಹ ಸಂಸ್ಥೆಗಳ ಛೇರ್ಮನ್ ಟಿ.ಪ್ರಭಾಕರ್‍ಶೆಟ್ಟಿ, ದಾನಿಗಳಾದ ಆರ್‍ಎನ್‍ಎಸ್ ಸಮೂಹ ಸಂಸ್ಥೆಗಳ ಛೇರ್ಮನ್ ಡಾ. ಆರ್.ಎನ್.ಶೆಟ್ಟಿ, ಅಬುದಾಬಿ ಎನ್‍ಎಂಸಿ ಛೇರ್ಮನ್ ಡಾ.ಬಿ.ಆರ್.ಶೆಟ್ಟಿ, ಮೈಸೂ ರಿನ ಕೆ.ಸುಬ್ರಹ್ಮಣ್ಯ ರೈ, ಕೆ.ಗಣೇಶ್ ನಾರಾ ಯಣ್ ಹೆಗ್ಡೆ, ಕೆ.ಎಚ್.ಸರ್ವೋತ್ತಮ ಶೆಟ್ಟಿ, ಕಡೆಂಜ ಮನೋಜ್ ಚೌಟ, ನಾರ್ಯ ಗುತ್ತು ಶಿವಪ್ರಸಾದ್ ಮಾಡ, ವೈ.ವಿ. ಸತೀಶ್ ಶೆಟ್ಟಿ, ಕೆ.ಪ್ರಕಾಶ್‍ಶೆಟ್ಟಿ, ಪಿ.ಸುರೇಶ್ ಆಳ್ವ, ಸಿ.ಎ.ಸುರೇಂದ್ರ ಹೆಗ್ಡೆ, ಬಂಟ್ ಸಂಘ ಮತ್ತು ಟ್ರಸ್ಟ್ ಗೌರವ ಕಾರ್ಯದರ್ಶಿ ನಂದ್ಯಪ್ಪ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.
ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ವಾಸು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಒಕ್ಕೂ ಟದ (ಎಫ್‍ಕೆಸಿಸಿಐ) ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಮೈಸೂರು ಬಂಟರ ಸಂಘದ ಅಧ್ಯಕ್ಷ ಟಿ.ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.