ಬುದ್ಧಿವಂತರಿಗಿಂತ ಹೃದಯವಂತ ವೈದ್ಯರು ಅಗತ್ಯ
ಹಾಸನ

ಬುದ್ಧಿವಂತರಿಗಿಂತ ಹೃದಯವಂತ ವೈದ್ಯರು ಅಗತ್ಯ

June 4, 2018

ಹಾಸನ:  ಸಮಾಜದಲ್ಲಿ ಬುದ್ಧಿವಂತ ವೈದ್ಯರು ಹಚ್ಚು ಇದ್ದು, ಹೃದಯವಂತ ವೈದ್ಯರ ಅಗತ್ಯವಿದೆ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ, ಹೃದಯತಜ್ಞ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.

ನಗರದ ತಣ್ಣೀರು ಹಳ್ಳದ ಬಳಿ ಇರುವ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇ ಶ್ವರ ಆಯುರ್ವೇದ ಮಹಾವಿದ್ಯಾಲಯ ದಲ್ಲಿ ನಡೆದ 21ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಜಗತ್ತು ನಾಗಾಲೋಟ ದಿಂದ ಮುನ್ನುಗ್ಗುತ್ತಿದೆ. ಎಲ್ಲೆಡೆ ವಿದ್ಯಾ ವಂತರು ಮತ್ತು ಬುದ್ಧಿವಂತರ ಸಂಖ್ಯೆ ಹೆಚ್ಚಿದೆ. ವೈದ್ಯಕೀಯ ಕ್ಷೇತ್ರಕ್ಕೂ ಇದು ಅನ್ವಯವಾಗುತ್ತದೆ. ಇಂದಿನ ದಿನಮಾನ ಗಳಲ್ಲಿ ಹೃದಯವಂತ ವೈದ್ಯರ ಅವಶ್ಯಕತೆ ಇದೆ. ವೈದ್ಯರಾದವರು ಕೇವಲ ಶರೀರಕ್ಕೆ ಔಷಧಿ ನೀಡಿದರೆ ಸಾಲದು. ಅವರು ತಮ್ಮ ಮಾತು, ಸ್ಪರ್ಶ ಮತ್ತು ಅನುಭವದಿಂದ ಚಿಕಿತ್ಸೆ ನೀಡಬೇಕು. ತುರ್ತು ಪರಿಸ್ಥಿತಿಯಲ್ಲಿ ಹಣದ ಪಾವತಿ ಬಗ್ಗೆ ಆಲೋಚಿಸದೆ ತ್ವರಿತ ಚಿಕಿತ್ಸೆಗೆ ಮುಂದಾಗಬೇಕು. ನಾವೆಲ್ಲರೂ ಮಾನವ ನಿರ್ಮಿತ ಅವಘಡಗಳ ಕಾಲಘಟ್ಟ ದಲ್ಲಿದ್ದೇವೆ. ಆಯುರ್ವೇದ ವಿಜ್ಞಾನದಲ್ಲಿ ತಿಳಿಸಲಾದ ಆರೋಗ್ಯದ ಸೂತ್ರಗಳಿಂದ ದೂರ ಸರಿದು ಅನಾರೋಗ್ಯಕರ ಜೀವನ ಶೈಲಿಗೆ ದಾಸರಾಗುತ್ತಿದ್ದೇವೆ ವಿಷಾದಿಸಿದರು.

ಈ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಆಯುರ್ವೇದವು ವಿಶ್ವಮಾನ್ಯ ಆಗುತ್ತಿದೆ. ಆಯುರ್ವೇದ ಪದವಿ ಪಡೆದ ಯುವ ವೈದ್ಯರು ವಿಶ್ವದೆಲ್ಲೆಡೆ ಆಯುರ್ವೇದ ಪ್ರಚಾರದಲ್ಲಿ ತೊಡಗುವ ಸಮಯ ಬಂದಾಗಿದೆ. ಆದ್ದರಿಂದ ಆಯುರ್ವೇದ ವಿದ್ಯಾರ್ಥಿಗಳು ಹಾಗೂ ಪದವೀಧರರು ಈ ವಿಜ್ಞಾನವನ್ನು ಆಳವಾಗಿ, ನಿರಂತರ ವಾಗಿ ಅಧ್ಯಯನ ಮಾಡುತ್ತಿರಬೇಕು. ನಮ್ಮ ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿ ರುವ ನಮ್ಮ ಮೂರು ಆಯುರ್ವೇದ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳು ಈ ಬಾರಿ ಒಟ್ಟು 380 ರಾಂಕ್ ಗಳನ್ನು ಗಳಿಸಿರುವುದು ಒಂದು ದಾಖಲೆ ಯೇ ಸರಿ ಎಂದು ಪ್ರಶಂಸಿಸಿದರು.

ನವದೆಹಲಿಯ ಕೇಂದ್ರ ಭಾರತೀಯ ವೈದ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ರುವ ಡಾ.ಬಿ.ಆರ್. ರಾಮಕೃಷ್ಣ ಅವರು ಪದವಿ ಪ್ರದಾನ ಮಾಡಿ ಮಾತನಾಡಿ, ಯುವ ವೈದ್ಯರು ವೈದ್ಯಕೀಯ ಶಿಕ್ಷಣವನ್ನು ಆಕಸ್ಮಿಕವಾಗಿ ಆಯ್ಕೆ ಮಾಡಿಕೊಂಡಿರ ಬಹುದು. ಆದರೆ ವೃತ್ತಿಯನ್ನು ಬಹಳ ಗಾಢ ವಾದ ತುಡಿತದಿಂದ ಮುಂದುವರೆಸುವ ಸಂಕಲ್ಪ ಹೊಂದಬೇಕು ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಗುಜರಾತಿನ ವಡೋಧರದ ಪಾರುಲ್ ವಿಶ್ವವಿದ್ಯಾ ಲಯದ ಅಧ್ಯಕ್ಷ ಡಾ.ದೇವಾಂಶು ಪಟೇಲ್ ಮಾತನಾಡಿದರು.

ಸಮಾರಂಭದಲ್ಲಿ 64 ಬಿಎಎಂಎಸ್ ಪದವೀಧರರು, 74 ಸ್ನಾತಕೋತ್ತರ ಪದವೀಧರರು ಹಾಗೂ 06 ಪಿಎಚ್‍ಡಿ ಪದವೀಧರರಿಗೆ ಪದವಿ ಪ್ರದಾನ ಮಾಡಲಾ ಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಪ್ರಸನ್ನ ನರಸಿಂಹರಾವ್, ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ಹೊನ್ನವಳ್ಳಿ, ಉಡುಪಿ ಮತ್ತು ಬೆಂಗಳೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ್ ಆಚಾರ್ಯ , ಹಾಸನ ಮತ್ತು ಉಡುಪಿಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮುರಲೀಧರ್ ಪೂಜಾರ್ ಇತರರಿದ್ದರು.

Translate »