ವಾಸವಿ ಕ್ಲಬ್‍ನಿಂದ ಪ್ರತಿಭಾ ಪುರಸ್ಕಾರ
ಹಾಸನ

ವಾಸವಿ ಕ್ಲಬ್‍ನಿಂದ ಪ್ರತಿಭಾ ಪುರಸ್ಕಾರ

June 4, 2018

ಹೊಳೆನರಸೀಪುರ:  ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಭವಿಷ್ಯ ರೂಪಿಸಿ ಎಂದು ವಾಸವಿ ಕ್ಲಬ್ ಇಂಟರ್ ನ್ಯಾಷಿನಲ್ ನಿದೇರ್ಶಕ ಹಾಗೂ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಆರ್.ರವಿ ಕುಮಾರ್ ಪೋಷಕರಿಗೆ ಸಲಹೆ ನೀಡಿದರು.

ಪಟ್ಟಣದ ವಾಸವಿ ಮಹಲ್‍ನಲ್ಲಿ ವಾಸವಿ ಕ್ಲಬ್‍ನಿಂದ ಆರ್ಯ ವೈಶ್ಯ ಜನಾಂಗದ ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪೋಷಕರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒಲವು ತೋರುವುದರಿಂದ ಮಕ್ಕಳ ಕಲಿಕೆಯಲ್ಲಿ ಬಹಳಷ್ಟು ಸುಧಾರಣೆ ಸಾಧ್ಯವಾಗ ಲಿದೆ. ಮಕ್ಕಳ ಕಲಿಕೆಯ ವೇಳೆ ಪೋಷಕರು ಶಾಲಾ ಮುಖ್ಯಸ್ಥರ ಜೊತೆ ಸಂಪರ್ಕದಲ್ಲಿದ್ದರೆ ಒಳ್ಳೆಯದು ಎಂದ ಅವರು, ಪ್ರತಿಯೊಬ್ಬರಿಗೂ ಶಿಕ್ಷಣದಿಂದ ದೊರಕುವುದರಿಂದ ಮಾತ್ರ ದೇಶದ ಅಭಿವೃದ್ಧಿಯಾಗಲಿದೆ ಎಂದರು.
ವಾಸವಿ ಕ್ಲಬ್ ಅಧ್ಯಕ್ಷ ಜಿ.ಪಿ.ಮಂಜುನಾಥ ಗುಪ್ತ ಮಾತನಾಡಿ, ಶಿಕ್ಷಣದಿಂದ ಮಾತ್ರ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬಹುದು. ಉನ್ನತ ಶಿಕ್ಷಣ ಪಡೆದವರು ಸ್ವಾರ್ಥ ಸಾಧನೆಗೆ ಮುಂದಾಗದೆ ಸಮಾಜ ಮುಖಿ ಕಾರ್ಯ ಬೆಳೆಸಿಕೊಂಡರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ವಾಸವಿ ಕ್ಲಬ್ ಮಾಜಿ ಅಧ್ಯಕ್ಷ ರವಿ ಕೀರ್ತಿ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಕ್ಲಬ್ ನಿರ್ದೇಶಕರಾದ ಗೋಕುಲ್, ಮುರುಳಿಧರಗುಪ್ತ, ಕಾರ್ಯದರ್ಶಿ ಉದಯ ಭಾನು, ಖಜಾಂಚಿ ರಾಜೇಂದ್ರ ಗುಪ್ತ, ಜಿ.ನಟರಾಜ್ ಹಲವಾರು ಕ್ಲಬ್‍ನ ಸದಸ್ಯರು ವಿದ್ಯಾರ್ಥಿಗಳು ಪೋಷಕರು, ಆರ್ಯವೈಶ್ಯ ಜನಾಂಗದ ಭಾಂದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Translate »