ರಸ್ತೆಬದಿ ಮನೆಗೆ ನುಗ್ಗಿದ ಕ್ಯಾಂಟರ್ ಗೋಡೆ ಕುಸಿತ, ನೆಲಕ್ಕುರುಳಿದ ವಿದ್ಯುತ್ ಕಂಬಗಳು
ಹಾಸನ

ರಸ್ತೆಬದಿ ಮನೆಗೆ ನುಗ್ಗಿದ ಕ್ಯಾಂಟರ್ ಗೋಡೆ ಕುಸಿತ, ನೆಲಕ್ಕುರುಳಿದ ವಿದ್ಯುತ್ ಕಂಬಗಳು

June 4, 2018

ಹೊಳೆನರಸೀಪುರ: ಮನೆಗೆ ಕ್ಯಾಂಟರ್ ನುಗ್ಗಿ ಹಾನಿಯಾಗಿರುವ ಘಟನೆ ತಡರಾತ್ರಿ ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಾಲೂಕಿನ ತಟ್ಟೆಕೆರೆ ಗ್ರಾಮದ ರಸ್ತೆಬದಿ ಅಂಗಡಿ ನಿವಾಸಿ ಗೋಪಾಲಕೃಷ್ಣ ಅವರ ಮನೆ ಹಾನಿಗೀಡಾಗಿದೆ. ರಾತ್ರಿ 11 ವೇಳೆ ಕ್ಯಾಂಟರ್‍ವೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆಬದಿ ಇದ್ದ ವಿದ್ಯುತ್ ಕಂಬಗಳಿಗೆ ಗುದ್ದಿ ನಂತರ ಮನೆಗೆ ನುಗ್ಗಿದೆ. ಪರಿಣಾಮ ಮನೆಯ ಗೋಡೆ ಕುಸಿದಿದೆ. ರಸ್ತೆಬದಿ ಇದ್ದ 2 ಬಾರಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಸದ್ಯ ಯಾವುದೇ ಪ್ರಾಣಾಪಾಯ ವಾಗಿಲ್ಲ. ಮನೆಯ ಸದಸ್ಯರೆಲ್ಲ ಕೆಲಕಾಲ ಆತಂಕ ಉಂಟಾಗಿತ್ತು.

Translate »